ಮಡಿಕೇರಿ, ಫೆ. ೧೫: ಗುಂಡಿ ತಪ್ಪಿಸುವ ಸಂದರ್ಭ ನಿಯಂತ್ರಣ ತಪ್ಪಿದ ಸ್ಕೂಟರ್ವೊಂದು ಪಲ್ಟಿ ಹೊಡೆದು ಕಾರಿಗೆ ಡಿಕ್ಕಿ ಹೊಡೆದ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ನಗರದ ಮುತ್ತಪ್ಪ ದೇವಾಲಯ ಬಳಿಯ ರಸ್ತೆಯಲ್ಲಿನ ಹೊಂಡವನ್ನು ತಪ್ಪಿಸುವ ಭರದಲ್ಲಿ ಸ್ಕೂಟರ್ ಚಾಲಕರೊಬ್ಬರು ಪಲ್ಟಿ ಹೊಡೆದಿದ್ದಾರೆ. ಸ್ಕೂಟರ್ ಬಿದ್ದ ರಭಸಕ್ಕೆ ಕಾರಿನ ಮೇಲೆ ಅಪ್ಪಳಿಸಿದೆ ಪರಿಣಾಮ ಸ್ಕೂಟರ್ ಮುಂಭಾಗ ಸಂಪೂರ್ಣ ಜಖಂಗೊAಡಿದ್ದು, ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ನಗರದ ಗುಂಡಿಮಯ ರಸ್ತೆಯಲ್ಲಿ ನಿತ್ಯ ಇಂತಹ ಹಲವಾರು ಘಟನೆಗಳು ನಡೆಯುತ್ತಿದ್ದು, ದುರಸ್ತಿಗೆ ಕ್ರಮ ಕೈಗೊಳ್ಳದಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.