ಈಶಾನ್ಯ ರಾಜ್ಯಗಳಲ್ಲಿ ೧೪೮ ಕೋಟಿ ರೂಪಾಯಿ ವಶಕ್ಕೆ
ನವದೆಹಲಿ, ಫೆ. ೧೬: ಚುನಾವಣೆ ಎದುರಿಸುತ್ತಿರುವ ಮೂರು ಈಶಾನ್ಯ ರಾಜ್ಯಗಳಲ್ಲಿ- ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯದಲ್ಲಿ ದಾಖಲೆಯ ಪ್ರಮಾಣದ ಅಕ್ರಮ ವಸ್ತು, ನಗದುಗಳನ್ನು ವಶಕ್ಕೆ ಪಡೆಯಲಾಗಿದೆ. ಸುಮಾರು ೧೪೭.೮೪ ಕೋಟಿ ರೂಪಾಯಿ ಮೌಲ್ಯದ ಮದ್ಯ, ಡ್ರಗ್ಸ್, ಅಮೂಲ್ಯ ಲೋಹಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಚುನಾವಣಾ ಆಯೋಗ ಗುರುವಾರ ತಿಳಿಸಿದೆ. ಮೂರು ರಾಜ್ಯಗಳಲ್ಲಿ ಚುನಾವಣಾ ಖರ್ಚು ವೆಚ್ಚಗಳ ಮೇಲೆ ನಿಗಾ ಇಡಲಾಗಿದೆ. ೨೦೧೮ ರಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ವಶಕ್ಕೆ ಪಡೆಯಲಾಗಿದ್ದ ಮೊತ್ತಕ್ಕಿಂತ ಈ ಬಾರಿ ವಶಕ್ಕೆ ಪಡೆದ ಮೊತ್ತ ೨೦ ಪಟ್ಟು ಹೆಚ್ಚಾಗಿದೆ ಎಂದು ಆಯೋಗ ಹೇಳಿದೆ. ಧಲೈ ಜಿಲ್ಲೆಯಲ್ಲಿ ೧೦.೫೮ ಕೋಟಿ ರೂಪಾಯಿ ಮೌಲ್ಯದ ೩.೫೨ ಕೆ.ಜಿ. ಹೆರಾಯಿನ್ ಇದ್ದು, ಮೇಘಾಲಯದ ಈಸ್ಟ್ ಖಸಿ ಹಿಲ್ಸ್ ಜಿಲ್ಲೆಯಲ್ಲಿ ೨.೪೪೭ ಕೆ.ಜಿ. ಹೆರಾಯಿನ್ನ್ನು ಹಾಗೂ ನಾಗಾಲ್ಯಾಂಡ್ನ ಚುಮೌಕೆದಿಮಾ ಜಿಲ್ಲೆಯಲ್ಲಿ ೨.೨೭ ಕೆ.ಜಿ. ಹೆರಾಯಿನ್ನ್ನು ವಶಕ್ಕೆ ಪಡೆಯಲಾಗಿದೆ. ತ್ರಿಪುರಾದ ಮತದಾರರು ಇಂದು ಮತ ಚಲಾಯಿಸಿದ್ದು, ಮಾ. ೨ ರಂದು ಮತ ಎಣಿಕೆ ನಡೆಯಲಿದೆ. ಈ ವರ್ಷ ಚುನಾವಣೆ ಎದುರಿಸುತ್ತಿರುವ ಮೊದಲ ರಾಜ್ಯ ತ್ರಿಪುರಾ ಆಗಿದೆ. ತಾ. ೨೭ ರಂದು ನಾಗಾಲ್ಯಾಂಡ್, ಮೇಘಾಲಯ ರಾಜ್ಯಗಳು ಚುನಾವಣೆ ಎದುರಿಸಲಿವೆ. ಈ ವರ್ಷ ೫ ರಾಜ್ಯಗಳ ವಿಧಾನಸಭಾ ಚುನಾವಣೆ ಇದ್ದು, ೨೦೨೪ಕ್ಕೆ ಲೋಕಸಭಾ ಚುನಾವಣೆ ನಡೆಯಲಿದೆ.
ಸಚಿವ ಸ್ಥಾನದಿಂದ ಅಶ್ವತ್ಥನಾರಾಯಣ ವಜಾಕ್ಕೆ ಕಾಂಗ್ರೆಸ್ ಒತ್ತಾಯ
ಬೆಂಗಳೂರು, ಫೆ. ೧೬: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನೂ ಹೊಡೆದು ಹಾಕಿ ಎಂಬ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರನ್ನು ರಾಜ್ಯ ಸಚಿವ ಸಂಪುಟದಿAದ ವಜಾ ಗೊಳಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಈ ಸಂಬAಧ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಅಶ್ವತ್ಥ ನಾರಾಯಣ ಅವರ ಹೇಳಿಕೆ ಬಿಜೆಪಿಯ ಕೊಲೆಗಡುಕ ಮನಸ್ಥಿತಿಯನ್ನು ಅನಾವರಣಗೊಳಿಸಿದೆ. ಬಹುಶ: ರಾಜ್ಯ ಬಿಜೆಪಿ ಹೇಳುತ್ತಿದ್ದ ಯುಪಿ ಮಾಡೆಲ್ ಇದೇ ಇರಬಹುದು. ಬಸವರಾಜ ಬೊಮ್ಮಾಯಿ ಅವರಿಗೆ ಕನಿಷ್ಟ ನೈತಿಕತೆ ಇದ್ದರೆ ಅಶ್ವತ್ಥ ನಾರಾಯಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದೆ. ಇಷ್ಟು ದಿನ ವಿಪಕ್ಷಗಳ ನಾಯಕರಿಗೆ ಐಟಿ, ಇಡಿಗಳ ಮೂಲಕ ಮಣಿಸಲು ಯತ್ನಿಸುತಿತ್ತು. ಈಗ ಸೋಲಿನ ಹತಾಶೆಯಲ್ಲಿ ಕೊಲೆ ಮಾಡುವ ಹಂತಕ್ಕೆ ಇಳಿದಿದೆ. ನಿಜಕ್ಕೂ ಕಾನೂನು ಪಾಲನೆಯಾಗುತ್ತಿದ್ದರೆ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದೆ.
ಸೆಲ್ಫಿಗೆ ನಿರಾಕರಣೆ : ಕ್ರಿಕೆಟ್ ಆಟಗಾರ ಪೃಥ್ವಿ ಶಾ ಸ್ನೇಹಿತನ ಕಾರಿನ ಮೇಲೆ ದಾಳಿ
ಮುಂಬೈ, ಫೆ. ೧೬: ವಾಣಿಜ್ಯ ನಗರಿ ಮುಂಬೈಯಲ್ಲಿ ಫೈವ್ ಸ್ಟಾರ್ ಹೋಟೆಲ್ವೊಂದರ ಮುಂಭಾಗ ಸೆಲ್ಫಿಗೆ ನಿರಾಕರಿಸಿದ ನಂತರ ಜನರ ಗುಂಪೊAದು ಕ್ರಿಕೆಟ್ ಆಟಗಾರ ಪೃಥ್ವಿ ಶಾ ಅವರ ಸ್ನೇಹಿತನ ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಈ ಸಂಬAಧ ಎಂಟು ಜನರ ವಿರುದ್ಧ ವಾಯವ್ಯ ಮುಂಬೈನ ಓಶಿವಾರಾ ಪೊಲೀಸರು ಪ್ರಕರಣ ದಾಖಲಾಗಿದೆ. ಆರೋಪಿಗಳು ಕಾರನ್ನು ಹಿಂಬಾಲಿಸಿ ಹಣ ನೀಡದಿದ್ದರೆ ಸುಳ್ಳು ಪ್ರಕರಣದ ಬೆದರಿಕೆ ಹಾಕಿರುವುದಾಗಿ ಶಾ ಅವರ ಸ್ನೇಹಿತ ಆಶಿಶ್ ಸುರೇಂದ್ರ ಯಾದವ್ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಪೃಥ್ವಿ ಶಾ ವಾಯುವ್ಯ ಮುಂಬೈನ ಸಾಂತಾ ಕ್ರೂಜ್ನಲ್ಲಿರುವ ಪಂಚತಾರಾ ಹೊಟೇಲ್ಗೆ ಊಟಕ್ಕೆ ಹೋಗಿದ್ದಾಗ ಅಪರಿಚಿತರು ಸೆಲ್ಫಿಗೆ ಒತ್ತಾಯಿಸಿದ್ದಾರೆ. ಇಬ್ಬರು ವ್ಯಕ್ತಿಗಳು ಸೆಲ್ಫಿಗೆ ಪೃಥ್ವಿ ಶಾ ಅವರನ್ನು ಒತ್ತಾಯಿಸಿದ್ದಾರೆ. ಆದರೆ, ಇದೇ ಗುಂಪು ಮತ್ತೆ ಬಂದಿದ್ದು, ಇತರ ಆರೋಪಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಕೇಳಿದ್ದಾರೆ. ಈ ವೇಳೆ ಶಾ ನಿರಾಕರಿಸಿದಾಗ, ಶಾ ಅವರ ಸ್ನೇಹಿತ ರೆಸ್ಟೋರೆಂಟ್ ಮ್ಯಾನೇಜರ್ಗೆ ಕರೆ ಮಾಡಿ, ದೂರು ನೀಡಿದ್ದಾರೆ. ಆರೋಪಿಗಳನ್ನು ಹೊಟೇಲ್ನಿಂದ ಹೊರಹೋಗುವಂತೆ ವ್ಯವಸ್ಥಾಪಕರು ಹೇಳಿದ್ದಾರೆ. ಈ ಘಟನೆಯಿಂದ ಕೆರಳಿದ ವ್ಯಕ್ತಿಗಳು ಹೊಟೇಲ್ ಹೊರಗಡೆ ಬೇಸ್ಬಾಲ್ ಬ್ಯಾಟ್ಗಳಿಂದ ಶಾ ಅವರ ಸ್ನೇಹಿತನ ಕಾರನ್ನು ಧ್ವಂಸಗೊಳಿಸಿದ್ದು, ಹಿಂಭಾಗದ ಗಾಜುಗಳನ್ನು ಒಡೆದು ಹಾಕಿದ್ದಾರೆ. ಘಟನೆ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೮೪, ೧೪೩, ೧೪೮, ೧೪೯, ೪೨೭, ೫೦೪ ಮತ್ತು ೫೦೬ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಪರಿಚಿತರಿಂದ ಮೀನುಗಾರರ ಮೇಲೆ ದಾಳಿ
ನಾಗಪಟ್ಟಣಂ, ಫೆ. ೧೬: ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಆರು ಮೀನುಗಾರರ ಮೇಲೆ ಅಪರಿಚಿತ ವ್ಯಕ್ತಿಗಳು ಸಮುದ್ರದ ಮಧ್ಯದಲ್ಲಿ ಪಾಯಿಂಟ್ ಕ್ಯಾಲಿಮೆರೆ ಬಳಿ ದಾಳಿ ನಡೆಸಿ, ದರೋಡೆ ಮಾಡಿದ್ದಾರೆ. ಈ ಘಟನೆ ಸ್ಥಳೀಯ ಮೀನುಗಾರರಲ್ಲಿ ಆತಂಕದ ಅಲೆಯನ್ನುಂಟುಮಾಡಿದೆ. ಗಾಯಗೊಂಡವರಲ್ಲಿ ಮುರುಗನ್ ಎಂಬಾತನ ಮೂರು ಬೆರಳುಗಳನ್ನು ದಾಳಿಕೋರರು ತುಂಡರಿಸಿದ್ದಾರೆ. ಅವರು ಶ್ರೀಲಂಕಾದಿAದ ಬಂದವರು ಎಂದು ಗಾಯಗೊಂಡ ಮೀನುಗಾರರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ನಂಬಿಯಾರ್ ನಗರದ ಮೀನುಗಾರರು ಸಮುದ್ರ ಮಧ್ಯದಲ್ಲಿ ಪಾಯಿಂಟ್ ಕ್ಯಾಲಿಮೆರ್ ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ, ನಾಲ್ಕು ದೋಣಿಗಳಲ್ಲಿ ಬಂದ ಕೆಲವು ಅಪರಿಚಿತ ವ್ಯಕ್ತಿಗಳು ಅವರ ಹಡಗನ್ನು ಸುತ್ತುವರೆದು ಅವರ ಮೇಲೆ ದಾಳಿ ನಡೆಸಿದ್ದಾರೆ. ಬುಧವಾರ ರಾತ್ರಿ ದಾಳಿಯಿಂದ ರಕ್ಷಿಸಿಕೊಳ್ಳಲು ಯತ್ನಿಸಿದ ಮುರುಗನ್ ಅವರ ಮೂರು ಬೆರಳುಗಳನ್ನು ದಾಳಿಕೋರರು ಕತ್ತರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದಾಳಿಕೋರರು ಮೀನುಗಾರರ ಬಳಿಯಿಂದ ಜಿಪಿಎಸ್, ಮೊಬೈಲ್ ಫೋನ್, ಮೀನುಗಾರಿಕೆ ಬಲೆಗಳನ್ನು ದೋಚಿದ್ದಾರೆ. ಗಾಯಾಳುಗಳಿಗೆ ಆರಂಭದಲ್ಲಿ ಪುಷ್ಪವನಂ ಬೀಚ್ನಲ್ಲಿ ಚಿಕಿತ್ಸೆ ನೀಡಲಾಯಿತು ಮತ್ತು ನಂತರ ನಾಗಪಟ್ಟಣಂ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಮಲಗಿದ್ದ ಪತ್ನಿಯ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ ಪತಿ
ಕಲಬುರಗಿ, ಫೆ. ೧೬: ಪತ್ನಿಯ ನಡತೆ ಶಂಕಿಸಿದ ಗಂಡ ಆಕೆ ಮಲಗಿದ್ದಾಗ ತಲೆ ಮೇಲೆ ದೊಡ್ಡ ಕಲ್ಲನ್ನು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿಯ ಅಂಬಿಕಾ ನಗರದಲ್ಲಿ ನಡೆದಿದೆ. ಮೃತ ಗೃಹಿಣಿಯನ್ನು ೩೯ ವರ್ಷದ ಫರೀದಾ ಬೇಗಂ ಎಂದು ಗುರುತಿಸಲಾಗಿದೆ. ಇನ್ನು ಆರೋಪಿ ಪತಿ ಏಜಾಜ್ ಅಹ್ಮದ್ ಕಳೆದ ರಾತ್ರಿ ನಿದ್ದೆಗೆ ಜಾರಿದ ಫರೀದಾ ಬೇಗಂ ಮೇಲೆ ಕಲ್ಲು ಎತ್ತಿಹಾಕಿ ಕೊಂದಿದ್ದಾನೆ. ಎಜಾಜ್ ಹಾಗೂ ಫರೀದಾ ಬೇಗಂ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರಾಗಿದ್ದಾರೆ. ೧೩ ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಪತ್ನಿಯ ಶೀಲ ಶಂಕಿಸುತ್ತಿದ್ದ ಪತಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಇದೇ ಅಲ್ಲದೆ ಶಾಲೆಗೆ ಹೋಗದಂತೆ ಪ್ರತಿದಿನ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಸ್ಪೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತದಲ್ಲಿ ನಾಲ್ವರು ದುರ್ಮರಣ
ಕೊಪ್ಪಳ, ಫೆ. ೧೬: ವೇಗವಾಗಿ ಬಂದ ಕಾರೊಂದು ಕುಕನೂರು ತಾಲೂಕಿನ ಬನ್ನಿಕೊಪ್ಪ ಬಳಿಯ ರಾಷ್ಟಿçÃಯ ಹೆದ್ದಾರಿಯಲ್ಲಿರುವ ಸೇತುವೆಯ ಗೋಡೆಗೆ ಗುದ್ದಿದ್ದು ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಭೀಕರ ಅಪಘಾದಲ್ಲಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಮೃತರು ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರಾಗಿದ್ದು ಇವರೆಲ್ಲರೂ ಹೈದ್ರಾಬಾದ್ ಮೂಲದವರು ಎಂದು ಗೊತ್ತಾಗಿದೆ. ಕೊಪ್ಪಳ ಮಾರ್ಗವಾಗಿ ಗದಗ ಕಡೆಗೆ ತೆರಳುತ್ತಿದ್ದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಗೋಡೆಗೆ ಗುದ್ದಿದೆ ಎನ್ನಲಾಗುತ್ತಿದ್ದು ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.