ಮಡಿಕೇರಿ, ಫೆ. ೧೫: ಪನೇಸಿಯ ಪಾಲಿ ಕ್ಲಿನಿಕ್ ವತಿಯಿಂದ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆರೋಗ್ಯ ಸಮಿತಿ, ಕೊಡಗು ಜಿಲ್ಲಾ ಕಾರ್ಯ ನಿರತರ ಪತ್ರಕರ್ತರ ಸಂಘ ಮಡಿಕೇರಿ ಹಾಗೂ ಹಿಯರಿಂಗ್ ಸ್ಪೀಚ್ ಇಂಪ್ಲಾಟ್ ಸಹಯೋಗದಲ್ಲಿ ತಾ. ೧೭ ರಂದು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಉಚಿತ ಶಿಬಿರ ಏರ್ಪಡಿಸಲಾಗಿದೆ. ಕಾಲೇಜು ರಸ್ತೆಯ ಪನೇಸಿಯ ಪಾಲಿ ಕ್ಲಿನಿಕ್ನಲ್ಲಿ ಬೆಳಿಗ್ಗೆ ೧೧ ರಿಂದ ಸಂಜೆ ೪ರ ತನಕ ಈ ಶಿಬಿರ ನಡೆಯಲಿದೆ. ಕಿವಿ, ಮೂಗು, ಗಂಟಲು, ದಂತ ಹಾಗೂ ಆಸ್ತಮಾ ಕಾಯಿಲೆ ಪರೀಕ್ಷೆ, ಸಾಮಾನ್ಯ ರೋಗಗಳ ತಪಾಸಣೆಗಳನ್ನು ನಡೆಸಲಾಗುತ್ತದೆ. ಅವಶ್ಯಕತೆ ಇದ್ದಲ್ಲಿ ಸಂಬAಧಪಟ್ಟ ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿಮಹೋತ್ಸವ ಆರೋಗ್ಯ ಸಮಿತಿ ಸಂಚಾಲಕ ಎಂ. ಅಬ್ದುಲ್ಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.