ಕೂಡಿಗೆ ಫೆ, ೧೫: ನಡೆದ ಅಭಿವೃದ್ಧಿ ಕಾಮಗಾರಿಗಳ ಬಿಲ್‌ಗೆ ಅಧ್ಯಕ್ಷರು ಸಹಿ ಹಾಕದ ಹಿನ್ನೆಲೆ ಅಸಮಾಧಾನಗೊಂಡ ಸದಸ್ಯರು ಮಾಸಿಕ ಸಭೆಯನ್ನು ಬಹಿಷ್ಕರಿಸಿದ ಘಟನೆ ಮತ್ತೊಮ್ಮೆ ನಡೆದಿದೆ.

ಕೂಡಿಗೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯು ಗ್ರಾ.ಪಂ. ಅಧ್ಯಕ್ಷೆ ಮಂಗಳಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು. ಸಭೆಯು ಆರಂಭಗೊಳ್ಳುತ್ತಿದ್ದAತೆ ಕೆಲ ಸದಸ್ಯರು ಕಾಮಗಾರಿಗಳು ನಡೆದ ಬಿಲ್‌ಗೆ ಅಧ್ಯಕ್ಷರು ಸಹಿ ಮಾಡಿದರೆ ಮಾತ್ರ ಸಭೆಯಲ್ಲಿ ಹಾಜರಾಗುತ್ತೇವೆ. ಇಲ್ಲದಿದ್ದಲ್ಲಿ ಸಭೆಯಿಂದ ಹೊರ ಹೋಗಲಾಗುವುದು ಎಂದು ಸದಸ್ಯರಾದ ಟಿ.ಪಿ. ಹಮೀದ್, ಅನಂತ್, ಅರುಣ್ ರಾವ್, ಶಿವಕುಮಾರ್ ಸೇರಿದಂತೆ ಇನ್ನಿತರ ಸದಸ್ಯರು ಎಚ್ಚರಿಸಿದರು.

ಕಳೆದ ಮೂರು ತಿಂಗಳುಗಳಿAದ ಮಾಸಿಕ ಸಭೆಯಲ್ಲಿ ಉದ್ಯೋಗ ಖಾತರಿ ಕಾಮಗಾರಿ, ೧೫ನೇ ಹಣಕಾಸು ಯೋಜನೆಯ ಕಾಮಗಾರಿಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿ ಕಾಮಗಾರಿ ನಡೆದಿದೆ. ಅಧ್ಯಕ್ಷೆ ಮಂಗಳಾ ಪ್ರಕಾಶ್ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಬಿಲ್‌ಗಳಿಗೆ ಸಹಿ ಮಾಡಲಾಗುವುದು ಎಂಬ ಮಾತಿನಿಂದಾಗಿ ಕಳೆದ ಮೂರು ಮಾಸಿಕ ಸಭೆಗಳು ನಡೆಯದೆ ಸದಸ್ಯರ ಸಭಾತ್ಯಾಗ, ಪ್ರತಿಭಟನೆಗಳು ನಡೆದಿದ್ದವು.

ಇಂದು ನಡೆದ ಸಭೆಯಲ್ಲಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರೂ ಕಾಮಗಾರಿಗಳು ನಡೆದ ನಡವಳಿಕೆಯ ಪುಸ್ತಕಕ್ಕೆ ಮತ್ತು ಬಿಲ್‌ಗೆ ಸಹಿ ಮಾಡದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ೭ ಮಂದಿ ಸದಸ್ಯರು ಸಭೆಯನ್ನು ಬಹಿಷ್ಕಾರ ಮಾಡಿದರು.

ಈ ಬಗ್ಗೆ ಜಿ.ಪಂ. ಕಾರ್ಯನಿರ್ವಹಣಾಧಿಕಾರಿಯನ್ನು ಭೇಟಿ ಮಾಡಿ ದೂರು ನೀಡಲಾಗುವುದು ಎಂದು ಗ್ರಾಮ ಪಂಚಾಯಿತಿ ಸದಸ್ಯರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮೋಹಿನಿ, ಗಿರೀಶ್, ರತ್ನಮ್ಮ, ರವಿ, ಪಲ್ಲವಿ, ಲಕ್ಮಿ ಜಯಶೀಲ ಅಭಿವೃದ್ಧಿ ಅಧಿಕಾರಿ ಅಂಜಲಾದೇವಿ, ಕಾರ್ಯದರ್ಶಿ ಪುನೀತ್ ಹಾಜರಿದ್ದರು.