ಸೋಮವಾರಪೇಟೆ, ಫೆ. ೧೫: ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯ ಸಮಿತಿ ಆಶ್ರಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ತಾ. ೧೬ ರಂದು (ಇಂದು) ಜಾತ್ರಾ ಮಹೋತ್ಸವ ಪ್ರಾರಂಭವಾಗಲಿದೆ. ಬೆಳಿಗ್ಗೆ ೧೦ ಗಂಟೆಗೆ ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಿ.ಜಿ. ಮಲ್ಲಿಕಾ ಉದ್ಘಾಟನೆ ಮಾಡಲಿದ್ದಾರೆ.

೧೦.೩೦ಕ್ಕೆ ದೇವಾಲಯ ಸಮಿತಿ ಮತ್ತು ಪಶುವೈದ್ಯಕೀಯ ಇಲಾಖೆಯ ವತಿಯಿಂದ ಪಶುಚಿಕಿತ್ಸಾ ಶಿಬಿರ ಮತ್ತು ಉತ್ತಮ ರಾಸುಗಳ ಸ್ಪರ್ಧೆ ನಡೆಯಲಿದೆ.

ತಾ. ೧೮ ರಂದು ಮಹಾಶಿವರಾತ್ರಿ ಪ್ರಯುಕ್ತ ರಾತ್ರಿ ೮ ಗಂಟೆಗೆ ವೀರಭದ್ರ ವೀರಗಾಸೆ ಕುಣಿತ ಹಾಗೂ ಶ್ರೀಕೊಲ್ಲೂರ ಮೂಕಾಂಬಿಕೆ ಕ್ಷೇತ್ರ ಮಹಾತ್ಮೆ ಯಕ್ಷಗಾನ ನಡೆಯಲಿದೆ.