ಮಡಿಕೇರಿ, ಫೆ. ೧೬: ಸಿದ್ದಾಪುರ ಸಮೀಪದ ತ್ಯಾಗತ್ತೂರಿನಲ್ಲಿ ಟಿಪ್ಪರ್ ಲಾರಿಯ ಇಂಜಿನ್ ಭಾಗದಲ್ಲಿ ಸಿಲುಕಿದ್ದ ಬೃಹತ್ ಗಾತ್ರದ ನಾಗರ ಹಾವನ್ನು ಸಿದ್ದಾಪುರದ ಗುಹ್ಯ ಗ್ರಾಮದ ಉರಗ ಪ್ರೇಮಿ ಸುರೇಶ್ ಪೂಜಾರಿ ಅವರು ರಕ್ಷಿಸಿದ್ದಾರೆ.
ಟಿಪ್ಪರ್ ಚಾಲಕ ಅನೀಶ್ ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿದ ಸುರೇಶ್ ಪೂಜಾರಿ ಸತತ ಎರಡು ಗಂಟೆಗಳ ಪರಿಶ್ರಮದಿಂದ ನಾಗರ ಹಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡುವುದರಲ್ಲಿ ಯಶಸ್ವಿಯಾದರು. ರಕ್ಷಣೆ ಮಾಡಿದ ನಾಗರಹಾವನ್ನು ಮಾಲ್ದಾರೆ ಅರಣ್ಯಕ್ಕೆ ಬಿಡಲಾಯಿತು ಎಂದು ಸುರೇಶ್ ಪೂಜಾರಿ ಮಾಹಿತಿ ನೀಡಿದ್ದಾರೆ.