ಭಾಗಮಂಡಲ, ಫೆ. ೧೫: ಸಮೀಪದ ಅಯ್ಯಂಗೇರಿ ಗ್ರಾಮದಲ್ಲಿ ಚಿನ್ನತಪ್ಪ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ನಿನ್ನೆ ಆರಂಭಗೊAಡ ಉತ್ಸವದಲ್ಲಿ ನೂರಾರು ಮಂದಿ ಭಕ್ತರ ಸಮ್ಮುಖದಲ್ಲಿ ಬೆಳಿಗ್ಗೆ ೮ ಗಂಟೆ ವೇಳೆಗೆ ಶ್ರೀ ಕೃಷ್ಣನದು ಎನ್ನಲಾದ ಕೊಳಲನ್ನು ಬಿದ್ದಿಯಂಡ ಹರೀಶ್ ಅವರು ಹಿಡಿದು ದೇವಾಲಯದ ಮುಂಭಾಗದಲ್ಲಿ ಮೂರು ಬಾರಿ ನುಡಿಸಿದರು.
ಬಳಿಕ ನಿರ್ದಿಷ್ಟ ಸ್ಥಳಗಳಲ್ಲಿ ನುಡಿಸಲಾಯಿತು. ಸೂರ್ಯಾಸ್ತದ ನಂತರ ಸಮೀಪದ ಕಲ್ಲು ಹೊಳೆಯಲ್ಲಿ ಆರಂಭಗೊAಡ ಧಾರೆ ಪೂಜೆ ಇಂದು ಬೆಳಿಗ್ಗೆ ೨ ಗಂಟೆವರೆಗೆ ನಡೆಯಿತು.
ಬಳಿಕ ಪಟ್ಟಣಿ ಹಬ್ಬವಾದ ಇಂದು ದೇವಾಲಯದಿಂದ ಶ್ರೀ ಕೃಷ್ಣನ ಕೊಳಲನ್ನು ಹಿಡಿದು ನುಡಿಸುತ್ತಾ ಊರ ಮಂದ್ಗೆ ಬರಲಾಯಿತು. ಮಧ್ಯಾಹ್ನ ೧.೨೫ರ ವೇಳೆಗೆ ನಿರ್ದಿಷ್ಟ ಸ್ಥಳಗಳಲ್ಲಿ ನುಡಿಸಲಾಯಿತು. ಊರ ಮಂದ್ಗೆ ಕೊಳಲನ್ನು ತರುವ ಸಂದರ್ಭ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ವೀಕ್ಷಿಸಿ ಕೊಳಲಿನ ನಾದವನ್ನು ಆಲಿಸಿ ಪುನೀತರಾದರು. ಇದೇ ಸಂದರ್ಭ ಊರ ಮಂದ್ನಲ್ಲಿ ಶುದ್ಧಮುದ್ರಿಕೆಯಲ್ಲಿದ್ದವರಿಗೆ ಆಕಾಶದಲ್ಲಿ ಗರುಡ ಮೂರು ಬಾರಿ ಪ್ರದಕ್ಷಿಣ ಹಾಕಿದ್ದು ಕಂಡು ಬಂತು. ಉತ್ಸವದ ಅಂಗವಾಗಿ ದೇವಾಲಯಕ್ಕೆ ಆಗಮಿಸಿದ ಭಕ್ತರು ಎಣ್ಣೆ ಹರಕೆಗಳನ್ನು ಸಲ್ಲಿಸಿದರು.
ಊರ ಮಂದ್ನಲ್ಲಿ ಮೂರು ಸುತ್ತು ಎತ್ತು ಪೋರಾಟ ನಡೆಸ ಲಾಯಿತು. ಬಳಿಕ ತೆಂಗಿನಕಾಯಿಗೆ ಗುಂಡು ಹೊಡೆದು ಊರಿನ ಕಟ್ಟು ಸಡಿಲಿಸಲಾಯಿತು. ಗುರುವಾರ ದೇವಾಲಯದಲ್ಲಿ ಭಂಡಾರ ಹಾಕುವುದು, ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ.
ಊರಿನ ೧೪ ಕುಳದವರು ಭಾಗಿಯಾಗಿದ್ದ ಸಾಂಪ್ರದಾಯಿಕ ಉತ್ಸವದ ಆಚರಣೆಯಲ್ಲಿ ಗೊಲ್ಲ ಜನಾಂಗದವರು ಸೇರಿದಂತೆ ಊರಿನ ಇತರ ಜನಾಂಗದವರು ಭಾಗಿಯಾಗಿ ದ್ದರು. ಕೊಡಗಿನ ಮೂಲೆ ಮೂಲೆ ಗಳಿಂದ ಭಕ್ತರು ಆಗಮಿಸಿ ಸಂಭ್ರಮದ ಉತ್ಸವದಲ್ಲಿ ಪಾಲ್ಗೊಂಡರು. ಬಿದ್ದಿಯಂಡ ಸುಭಾಷ್ ತಕ್ಕರಾಗಿ ಕಾರ್ಯ ನಿರ್ವಹಿಸಿದರು.
-ಸುನಿಲ್ ಕುಯ್ಯಮುಡಿ