ಸಿದ್ದಾಪುರ, ಫೆ. ೧೫: ಮಾದಕ ವಸ್ತುಗಳಿಂದ ದೂರವಿದ್ದು, ಸಮಾಜದ ಸ್ವಾಸ್ಥö್ಯ ಕಾಪಾಡುವ ದೃಷ್ಟಿಯಿಂದ ಎಸ್.ಜೆ.ಎಂ. ವಿದ್ಯಾರ್ಥಿಗಳಿಂದ ಜನ ಜಾಗೃತಿ ಜಾಥಾವು ಪಟ್ಟಣದ ಮುಖ್ಯ ಬೀದಿಗಳಲ್ಲಿ ಘೋಷಣೆ ಕೂಗಿ ಸಮಾಪ್ತಿ ಗೊಂಡಿತ್ತು. ಈ ಸಂದರ್ಭ ಮಾತನಾಡಿದ ಕೊಂಡAಗೇರಿ ಮದರಸದ ಅಧ್ಯಾಪಕ ಹನೀಫ ಮದ್ಯ ಮುಕ್ತ ಸಮಾಜವನ್ನು ಸ್ಥಾಪಿಸುವ ಮೂಲಕ ರಾಮ ರಾಜ್ಯದ ಕನಸು ಕಂಡ ಗಾಂಧೀಜಿಯವರ ಭಾರತವನ್ನು ಸೃಷ್ಟಿಸಬೇಕಾಗಿದೆ ಎಂದರು. ಇದರ ವಿರುದ್ಧ ಎಸ್.ಜೆ.ಎಂ. ವಿದ್ಯಾರ್ಥಿಗಳು ರಾಜ್ಯಾದ್ಯಂತ ಸಮರ ಸಾರಿದ್ದು ಜಿಲ್ಲೆಯಲ್ಲಿ ವಿವಿಧ ಪಟ್ಟಣಗಳಲ್ಲಿ ಈ ಜಾಥಾ ಸಂಚರಿಸಲಿದೆ ಎಂದರು. ಈ ಸಂದರ್ಭ ಕಾರ್ಯಕ್ರಮದ ಪ್ರಮುಖರಾದ ಮುಸ್ತಫ ಸಖಾಫೀ, ಹಸೈನಾರ್ ಮಹಲ್ಲಾರಿ, ಅಲಿ, ಹನೀಫ, ಹಜೀಜ್ ಮೊಹಲ್ಯಾ, ಆಶೀಫ್, ಸೈನುದ್ದೀನ್ ಮುಸ್ಲಿಯಾರ್, ಬಷಿರ್ ಅಬ್ದುಲ್ ಸಖಾಫೀ, ನೌಷಾದ್ ಅಶ್ರಫ್ ಸೇರಿದಂತೆ ಮದರಸ ವಿದ್ಯಾರ್ಥಿಗಳು ಹಾಜರಿದ್ದರು.