ಸೋಮವಾರಪೇಟೆ, ಫೆ. ೧೪: ತೋಟದಲ್ಲಿ ಮರ ಕಪಾತು ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕೆಳಗೆ ಬಿದ್ದು ತಮಿಳುನಾಡು ಮೂಲಕ ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ಸಮೀಪದ ಕಿಬ್ಬೆಟ್ಟ ಗ್ರಾಮದಲ್ಲಿ ನಡೆದಿದೆ.
ಕಿಬ್ಬೆಟ್ಟ ಗ್ರಾಮದ ಅರುಣ್ಕುಮಾರ್ ಅವರಿಗೆ ಸೇರಿದ ತೋಟದಲ್ಲಿ ಮರ ಕಪಾತು ಮಾಡುತ್ತಿದ್ದ ತಮಿಳುನಾಡಿನ ರಾಮನ್ (೪೬) ಎಂಬಾತನೇ ಸಾವನ್ನಪ್ಪಿದ ದುದೈವಿ. ಕಳೆದ ಒಂದು ತಿಂಗಳ ಹಿಂದೆ ತಮಿಳುನಾಡಿನಿಂದ ಪತ್ನಿ ಸೇರಿದಂತೆ ಇತರ ಕಾರ್ಮಿಕರೊಂದಿಗೆ ಆಗಮಿಸಿದ್ದ ರಾಮನ್, ಪಟ್ಟಣದ ಸುತ್ತಮುತ್ತಲ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದು, ಇಂದು ಬೆಳಿಗ್ಗೆ ಕಿಬ್ಬೆಟ್ಟದ ತೋಟಕ್ಕೆ ಕೆಲಸಕ್ಕೆಂದು ತೆರಳಿದ್ದರು.