ಬಿಬಿಸಿಯ ದೆಹಲಿ-ಮುಂಬೈ ಕಚೇರಿಗಳಿಗೆ ಐಟಿ ದಾಳಿ

ನವದೆಹಲಿ, ಫೆ. ೧೪: ಮೋದಿ ಸಾಕ್ಷ್ಯಾಚಿತ್ರ ವಿವಾದದ ಬೆನ್ನಲ್ಲೇ ದೆಹಲಿ ಹಾಗೂ ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತೆರಿಗೆ ಸಮೀಕ್ಷೆ ಕೈಗೊಂಡಿದ್ದಾರೆ. ರಾಷ್ಟç ರಾಜಧಾನಿ ದೆಹಲಿಯಲ್ಲಿರುವ ಕಸ್ತೂರ್‌ಬಾ ಗಾಂಧಿ ಮಾರ್ಗ್ನಲ್ಲಿರುವ ಬಿಬಿಸಿ ಕಚೇರಿ ಹಾಗೂ ಮುಂಬೈನಲ್ಲಿರುವ ಬಿಬಿಸಿ ಕಚೇರಿಯಲ್ಲಿ ತೆರಿಗೆ ಸಮೀಕ್ಷೆ ನಡೆಸಿದ್ದಾರೆ. ಆದಾಯ ತೆರಿಗೆ ಇಲಾಖೆಯ ಸರ್ವೇಯೂ ಕಂಪನಿಯ ವ್ಯವಹಾರ ಆವರಣದಲ್ಲಿ ಮಾತ್ರ ನಡೆಯುತ್ತದೆ. ಅದರ ಸಿಇಓ ಅಥವಾ ನಿರ್ದೇಶಕರ ನಿವಾಸಗಳು ಮತ್ತು ಇತರ ಸ್ಥಳಗಳ ಮೇಲೆ ದಾಳಿ ಮಾಡುವುದಿಲ್ಲ. ಲಂಡನ್ ಪ್ರಧಾನ ಕಚೇರಿಯ ಸಾರ್ವಜನಿಕ ಪ್ರಸಾರಕ ಮತ್ತು ಅದರ ಭಾರತೀಯ ಅಂಗದ ವ್ಯವಹಾರ ಕಾರ್ಯಾಚರಣೆಗಳಿಗೆ ಸಂಬAಧಿಸಿದ ದಾಖಲೆಗಳನ್ನು ಇಲಾಖೆ ಪರಿಶೀಲಿಸುತ್ತಿದೆ. ತನಿಖೆಯು ಬಿಬಿಸಿ ಅಂಗಸAಸ್ಥೆ ಕಂಪೆನಿಗಳ ಅಂರ‍್ರಾಷ್ಟಿçÃಯ ತೆರಿಗೆ ಸಮಸ್ಯೆಗಳಿಗೆ ಸಂಬAಧಿಸಿದೆ ಎಂದು ತಿಳಿದುಬಂದಿದೆ. ಐಟಿ ಇಲಾಖೆಯ ೬೦-೭೦ ಸದಸ್ಯರ ತಂಡವು ಬಿಬಿಸಿ ಕಚೇರಿಗೆ ಭೇಟಿ ನೀಡಿದ್ದು, ಬಿಸಿಸಿಯ ದೆಹಲಿ ಕಚೇರಿಯಲ್ಲಿ ಮಧ್ಯಾಹ್ನದ ಪಾಳಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು, ಕಚೇರಿಯಲ್ಲಿ ಹಾಜರಿದ್ದವರಿಗೆ ಬೇಗ ಹೊರಡುವಂತೆ ತಿಳಿಸಲಾಯಿತು. ೨೦೦೨ರ ಗುಜರಾತ್ ಗಲಭೆ ವಿಚಾರವಾಗಿ ಬ್ರಿಟನ್ ಮೂಲದ ಸುದ್ದಿಸಂಸ್ಥೆ ಬಿಬಿಸಿ "ಇಂಡಿಯಾ: ದಿ ಮೋದಿ ಕ್ವಷ್ಚನ್" ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರ ತಯಾರಿಸಿದೆ. ಗುಜರಾತ್ ಗಲಭೆಯಲ್ಲಿ ಅಂದಿನ ಸಿಎಂ ಆಗಿದ್ದ ನರೇಂದ್ರ ಮೋದಿ ಅವರು ಕೈಗೊಂಡ ನಿರ್ಧಾರಗಳನ್ನು ಸಾಕ್ಷ್ಯಚಿತ್ರದಲ್ಲಿ ಟೀಕಿಸಲಾಗಿದ್ದು, ಡಾಕ್ಯುಮೆಂಟರಿಯನ್ನು ೨ ಭಾಗಗಳಲ್ಲಿ ನಿರ್ಮಾಣ ಮಾಡಲಾಗಿದೆ.

ಅದಾನಿ ಸಮೂಹ ಸಂಸ್ಥೆಗಳ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಕಾಂಗ್ರೆಸ್ ನಾಯಕಿ

ನವದೆಹಲಿ, ಫೆ. ೧೪: ಹಿಂಡೆನ್‌ಬರ್ಗ್ ಸಂಶೋಧನಾ ವರದಿ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಅದಾನಿ ಸಮೂಹ ಮತ್ತು ಅದರ ಸಹಚರರ ವಿರುದ್ಧ ತನಿಖೆ ನಡೆಸುವಂತೆ ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಮಧ್ಯಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಯಾ ಠಾಕೂರ್ ವಕೀಲ ವರೀಂದರ್ ಕುಮಾರ್ ಶರ್ಮಾ ಮೂಲಕ ತಮ್ಮ ಮನವಿ ಸಲ್ಲಿಸಿದ್ದಾರೆ. ಸಾರ್ವಜನಿಕರು ಮತ್ತು ಸರ್ಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೆ ಹಣವನ್ನು ಲಪಟಾಯಿಸಿರುವ ಅದಾನಿ ಸಮೂಹ ಸಂಸ್ಥೆಗಳು ಮತ್ತು ಅದರ ಸಹಚರರ ವಿರುದ್ಧ ತನಿಖೆ ನಡೆಸಬೇಕೆಂದು ಅರ್ಜಿದಾರರು ಒತ್ತಾಯಿಸಿದ್ದಾರೆ. ಸುಪ್ರೀಂಕೋರ್ಟ್ನ ಹಾಲಿ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಸಿಬಿಐ, ಇಡಿ, ಕಂದಾಯ ಗುಪ್ತಚರ ನಿರ್ದೇಶನಾಲಯ, ನೇರ ತೆರಿಗೆಗಳ ಕೇಂದ್ರೀಯ ಮಂಡಳಿ, ಇಐಬಿ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ, ಸೆಬಿ ಮತ್ತಿತರ ಕೇಂದ್ರೀಯ ತನಿಖಾ ಸಂಸ್ಥೆಗಳಿAದ ತನಿಖೆಗೆ ಕೋರಿದ್ದಾರೆ. ಅದಾನಿ ಎಂಟರ್‌ಪ್ರೈಸಸ್ ಭಾರಿ ಮೊತ್ತದ ಸಾರ್ವಜನಿಕ ಹಣವನ್ನು ಹೂಡಿಕೆ ಮಾಡುವಲ್ಲಿ ಭಾರತೀಯ ಜೀವ ವಿಮಾ ನಿಗಮ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪಾತ್ರ ಕುರಿತು ತನಿಖೆ ಮಾಡಲು ತನಿಖಾ ಸಂಸ್ಥೆಗಳಿಗೆ ನಿರ್ದೇಶಿಸುವಂತೆ ಅವರು ಉನ್ನತ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.

ಜನವರಿ ತಿಂಗಳಲ್ಲಿ ಸಗಟು ಬೆಲೆ ಆಧಾರಿತ ಹಣದುಬ್ಬರ ಶೇ. ೪.೭೩ಕ್ಕೆ ಇಳಿಕೆ

ಮುಂಬೈ, ಫೆ. ೧೪: ಜನವರಿ ತಿಂಗಳ ಸಗಟು ಬೆಲೆ ಆಧಾರಿತ ಹಣದುಬ್ಬರ ಶೇ. ೪.೭೩ಕ್ಕೆ ಇಳಿಕೆಯಾಗಿದ್ದು, ಸತತ ೮ನೇ ತಿಂಗಳು ಸಗಟು ಬೆಲೆ ಆಧಾರಿತ ಹಣದುಬ್ಬರ ಇಳಿಕೆ ಕಂಡಿದೆ. ಉತ್ಪಾದಿತ ವಸ್ತುಗಳು ಹಾಗೂ ಇಂಧನ, ವಿದ್ಯುತ್ ಬೆಲೆಗಳಲ್ಲಿ ಕಡಿಮೆಯಾಗಿರುವುದರಿಂದ ಸಗಟು ಬೆಲೆ ಆಧಾರಿತ ಹಣದುಬ್ಬರ ಇಳಿಕೆ ಕಂಡಿದೆ. ಡಬ್ಲ್ಯುಪಿಐ ಸೂಚ್ಯಂಕ ಆಧಾರಿತ ಹಣದುಬ್ಬರ ಡಿಸೆಂಬರ್‌ನಲ್ಲಿ ೨೦೨೨ ರಲ್ಲಿ ಶೇ.೪.೯೫ ರಷ್ಟಿತ್ತು. ಹಾಗೂ ಜನವರಿ ೨೦೨೨ ರಲ್ಲಿ ಇದು ಶೇ.೧೩.೬೮ ರಷ್ಟಿತ್ತು. ಆಹಾರ ಪದಾರ್ಥಗಳ ಹಣದುಬ್ಬರ ಜನವರಿ ತಿಂಗಳಲ್ಲಿ ಶೇ.೨.೩೮ ಕ್ಕೆ ಏರಿಕೆಯಾಗಿದೆ. ಜನವರಿ,೨೦೨೩ ರಲ್ಲಿ ಉಂಟಾಗಿರುವ ಕುಸಿತಕ್ಕೆ ಖನಿಜ ತೈಲಗಳು, ರಾಸಾಯನಿಕಗಳು ಮತ್ತು ರಾಸಾಯನಿಕ ಉತ್ಪನ್ನಗಳು, ಜವಳಿ, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಜವಳಿ ಮತ್ತು ಆಹಾರ ಉತ್ಪನ್ನಗಳಲ್ಲಿನ ಬೆಲೆ ಕಾರಣವಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಮಂಗಳವಾರ ತಿಳಿಸಿದೆ. ಬೇಳೆಕಾಳುಗಳ ಹಣದುಬ್ಬರವು ಶೇಕಡಾ ೨.೪೧ ರಷ್ಟಿದ್ದರೆ, ತರಕಾರಿಗಳಲ್ಲಿ ಶೇ. (-) ೨೬.೪೮ ರಷ್ಟಿದೆ. ಎಣ್ಣೆ ಬೀಜಗಳ ಹಣದುಬ್ಬರವು ಜನವರಿ, ೨೦೨೩ ರಲ್ಲಿ (-) ೪.೨೨ ಶೇಕಡಾ ಆಗಿದೆ. ಸೋಮವಾರ ಬಿಡುಗಡೆಯಾದ ಚಿಲ್ಲರೆ ಹಣದುಬ್ಬರ ದತ್ತಾಂಶಕ್ಕೆ ವ್ಯತಿರಿಕ್ತವಾಗಿ WPI ನಲ್ಲಿನ ಕುಸಿತ ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಅಥವಾ ಚಿಲ್ಲರೆ ಹಣದುಬ್ಬರ ಡಿಸೆಂಬರ್, ೨೦೨೨ ರಲ್ಲಿ ೫.೭೨ ಶೇಕಡಾದಿಂದ ಜನವರಿಯಲ್ಲಿ ೬.೫೨ ಶೇಕಡಾಕ್ಕೆ ಏರಿಕೆಯಾಗಿದೆ.

ಏರ್ ಬಸ್‌ನಿಂದ ೨೫೦ ವಿಮಾನ ಖರೀದಿ, ಏರ್ ಇಂಡಿಯಾ ಮಹತ್ವದ ಡೀಲ್!

ನವದೆಹಲಿ, ಫೆ. ೧೪: ಯೂರೋಪಿನ ವೈಮಾನಿಕ ಕಂಪನಿ ಏರ್ ಬಸ್‌ನಿಂದ ೨೫೦ ವಿಮಾನಗಳನ್ನು ಏರ್ ಇಂಡಿಯಾ ಖರೀದಿಸುತ್ತಿದೆ. ೪೦ ವೈಡ್ ಬಾಡಿ ವಿಮಾನಗಳು ಸೇರಿದಂತೆ ೨೫೦ ವಿಮಾನಗಳನ್ನು ಖರೀದಿಸಲಾಗುತ್ತಿದೆ ಎಂದು ಟಾಟಾ ಸನ್ಸ್ ಮುಖ್ಯಸ್ಥ ಎನ್. ಚಂದ್ರಶೇಖರನ್ ಮಂಗಳವಾರ ತಿಳಿಸಿದ್ದಾರೆ. ಟಾಟಾ ಗ್ರೂಪ್ ಮಾಲೀಕತ್ವದ ವಿಮಾನಯಾನ ಸಂಸ್ಥೆ ೪೦ ವೈಡ್ ಬಾಡಿಯ ಎ ೩೫೦ ವಿಮಾನಗಳು ಮತ್ತು ೨೧೦ ನ್ಯಾರೋ ಬಾಡಿ ವಿಮಾನಗಳನ್ನು ಖರೀದಿಸಲಿದೆ. ಪ್ರಧಾನಿ ನರೇಂದ್ರ ಮೋದಿ, ಫ್ರೆಂಚ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರನ್ ಮತ್ತಿತರರು ವರ್ಚ್ಯುಯಲ್‌ನಲ್ಲಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ವಿಮಾನಗಳ ಖರೀದಿಗಾಗಿ ಏರ್ ಬಸ್‌ನೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪತ್ರಕ್ಕೆ ಸಹಿ ಪಡೆಯಲಾಗಿದೆ ಎಂದು ಚಂದ್ರಶೇಖರನ್ ಹೇಳಿದ್ದಾರೆ. ಒಟ್ಟಾರೆಯಾಗಿ ಏರ್ ಇಂಡಿಯಾ ೪೭೦ ವಿಮಾನಗಳನ್ನು ಖರೀದಿಸಲು ಉದ್ದೇಶಿಸಿದ್ದು, ಈ ಪೈಕಿ ೨೨೦ ವಿಮಾನಗಳನ್ನು ಬೋಯಿಂಗ್ ಕಂಪನಿಯಿAದ ಖರೀದಿಸಲಿದೆ ಎನ್ನಲಾಗಿದೆ. ಟಾಟಾ ಗ್ರೂಪ್ ಕಳೆದ ವರ್ಷ ಜನವರಿಯಲ್ಲಿ ಏರ್ ಇಂಡಿಯಾವನ್ನು ವಶಕ್ಕೆ ಪಡೆದಿತ್ತು.

‘ಲಗಾನ್' ಖ್ಯಾತಿಯ ನಟ ಜಾವೇದ್ ಖಾನ್ ಅಮ್ರೋಹಿ ನಿಧನ

ಮುಂಬೈ, ಫೆ. ೧೪: ಹಿರಿಯ ರಂಗಭೂಮಿ ಮತ್ತು ಬಾಲಿವುಡ್ ನಟ ಜಾವೇದ್ ಖಾನ್ ಅಮ್ರೋಹಿ ನಿಧನರಾಗಿದ್ದಾರೆ. ಅವರಿಗೆ ೭೦ ವರ್ಷ ವಯಸ್ಸಾಗಿತ್ತು. ಜನಪ್ರಿಯ ಡಿಡಿ ಧಾರಾವಾಹಿ ನುಕ್ಕಡ್, ಲಗಾನ್ ಮತ್ತು ಚಕ್ ದೇ ಮತ್ತಿತರ ಚಿತ್ರಗಳಲ್ಲಿನ ಅಮೋಘ ಅಭಿನಯದಿಂದ ಅವರು ಪ್ರಸಿದ್ಧರಾಗಿದ್ದರು. ಶ್ವಾಸಕೋಶದ ವೈಫಲ್ಯದಿಂದಾಗಿ ಮುಂಬೈನ ಆಸ್ಪತ್ರೆಯೊಂದರಲ್ಲಿ ಅವರು ಇಂದು ಕೊನೆಯುಸಿರೆಳೆದರು ಎಂದು ಬಾಲಿವುಡ್ ಚಿತ್ರ ನಿರ್ಮಾಪಕ ರಮೇಶ್ ತಲ್ವಾರ್ ಹೇಳಿದ್ದಾರೆ. ಉಸಿರಾಟದ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ ಕಳೆದ ಒಂದು ವರ್ಷದಿಂದ ಹಾಸಿಗೆ ಹಿಡಿದಿದ್ದರು. ಸೂರ್ಯ ನರ್ಸಿಂಗ್ ಹೋಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಎರಡೂ ಶ್ವಾಸಕೋಶಗಳು ವೈಫಲ್ಯದ ಕಾರಣ ಮಧ್ಯಾಹ್ನ ೧ ಗಂಟೆಯ ಸುಮಾರಿಗೆ ಆಸ್ಪತ್ರೆಯಲ್ಲಿ ನಿಧನರಾದರು ತಲ್ವಾರ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಅಮ್ರೋಹಿ ೧೯೭೦ ರ ದಶಕದಿಂದಲೂ ಇಪ್ಟಾ (ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್) ಮುಂಬೈನ ಸಕ್ರಿಯ ಸದಸ್ಯರಾಗಿದ್ದರು ಎಂದು ನಟ ಅಖಿಲೇಂದ್ರ ಮಿಶ್ರಾ ಹೇಳಿದ್ದಾರೆ. ಅಮ್ರೋಹಿ ೧೫೦ಕ್ಕೂ ಹೆಚ್ಚು ಚಲನಚಿತ್ರ ಮತ್ತು ಸುಮಾರು ಒಂದು ಡಜನ್ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ೧೯೮೦ ರ ದಶಕದ ಕೊನೆಯಲ್ಲಿ ಡಿಡಿಯಲ್ಲಿ ಪ್ರಸಾರವಾಗುತ್ತಿದ್ದ ನುಕ್ಕಡ್ ಧಾರವಾಹಿಯಲ್ಲಿ ಕ್ಷೌರಿಕ ಕರೀಮ್ ಪಾತ್ರದಲ್ಲಿ ಅವರು ಹೆಚ್ಚು ಹೆಸರುವಾಸಿಯಾಗಿದ್ದರು. ಲಗಾನ್‌ನಲ್ಲಿ ಕ್ರಿಕೆಟ್ ವೀಕ್ಷಕ ವಿವರಣೆಗಾರ ಮತ್ತು ಚಕ್ ದೆ ಇಂಡಿಯಾದಲ್ಲಿ ಭಾರತೀಯ ಮಹಿಳಾ ಹಾಕಿ ತಂಡದ ಸಹಾಯಕ ಸಿಬ್ಬಂದಿ ಪಾತ್ರದಲ್ಲಿ ಅಮ್ರೋಹಿ ನಟಿಸಿದ್ದಾರೆ.