ರಾಜಕೀಯ ಪಕ್ಷಗಳ ದೇಣಿಗೆ ಭರ್ಜರಿ ಹೆಚ್ಚಳ
ನವದೆಹಲಿ, ಫೆ. ೧೫: ರಾಷ್ಟಿçÃಯ ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಕಳೆದ ವರ್ಷ ಆಡಳಿತರೂಢ ಬಿಜೆಪಿ ಬರೋಬ್ಬರಿ ೬೧೪ ಕೋಟಿ ರೂಪಾಯಿ ಸಂಗ್ರಹಿಸುವ ಮೂಲಕ ಮೊದಲ ಸ್ಥಾನದಲ್ಲಿ. ಇನ್ನೂ ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ ಕೇವಲ ಕೇವಲ ೯೫ ಕೋಟಿ ರೂ. ದೇಣಿಗೆ ಸಂಗ್ರಹ ಮಾಡಲಷ್ಟೇ ಶಕ್ತವಾಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಹೇಳಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿಯ ಪ್ರಕಾರ, ೨೦೨೧-೨೨ರ ಆರ್ಥಿಕ ವರ್ಷದಲ್ಲಿ ರಾಷ್ಟಿçÃಯ ಪಕ್ಷಗಳಿಗೆ ಒಟ್ಟು ೧೮೭.೦೩ ಕೋಟಿ ರೂಪಾಯಿ ದೇಣಿಗೆ ಪಡೆದಿದ್ದು, ಇದು ಹಿಂದಿನ ಹಣಕಾಸು ವರ್ಷಕ್ಕಿಂತ ಶೇ. ೩೧.೫೦ ರಷ್ಟು ಹೆಚ್ಚಳವಾಗಿದೆ. ಬಿಜೆಪಿಯು ಒಟ್ಟು ೪,೯೫೭ ದೇಣಿಗೆಗಳ ಮೂಲಕ ಒಟ್ಟು ರೂ. ೬೧೪.೬೩ ಕೋಟಿ ಸಂಗ್ರಹ ಮಾಡಿರೋದಾಗಿ ಘೋಷಿಸಿದೆ. ಇನ್ನು ಕಾಂಗ್ರೆಸ್ ಪಕ್ಷವು ೧,೨೫೫ ದೇಣಿಗೆಗಳ ಮೂಲಕ ಒಟ್ಟು ರೂ. ೯೫.೪೬ ಕೋಟಿ ಸಂಗ್ರಹ ಮಾಡಿರೋದಾಗಿ ಘೋಷಿಸಿದೆ. ಬಿಜೆಪಿಯು ಘೋಷಣೆ ಮಾಡಿರುವ ಒಟ್ಟು ದೇಣಿಗೆಯ ಪ್ರಮಾಣ ಕಾಂಗ್ರೆಸ್ ಪಕ್ಷಕ್ಕಿಂತಾ ೩ ಪಟ್ಟು ಅಧಿಕ ಇರೋದು ಕಂಡು ಬರುತ್ತೆ. ಇದಲ್ಲದೆ, ಎನ್ಸಿಪಿ, ಸಿಪಿಐ, ಸಿಪಿಎಂ, ಎನ್ಪಿಇಪಿ ಹಾಗೂ ಎಐಟಿಸಿ ಪಕ್ಷಗಳೂ ಕೂಡಾ ಅಲ್ಪ ಪ್ರಮಾಣದ ದೇಣಿಗೆ ಗಿಟ್ಟಿಸಿವೆ. ಬಹುಜನ ಸಮಾಜ ಪಕ್ಷ(ಬಿಎಸ್ಪಿ) ಕಳೆದ ೧೬ ವರ್ಷಗಳಿಂದ ಘೋಷಿಸುತ್ತಿರುವಂತೆ ೨೦೨೧-೨೨ರ ಅವಧಿಯಲ್ಲೂ ತನಗೆ ೨೦,೦೦೦ ರೂ.ಗಿಂತ ಮೇಲ್ಪಟ್ಟು ಯಾವೊಂದು ದೇಣಿಗೆಯೂ ಬಂದಿಲ್ಲ ಎಂದು ಘೋಷಿಸಿರುವುದಾಗಿ ಎಂದು ಎಡಿಆರ್ ವರದಿ ಮಾಡಿದೆ.
ಬಿಜೆಪಿ ಸರಕಾರದಿಂದ ವ್ಯಾಪಕ ಭ್ರಷ್ಟಾಚಾರ-ಕಾಂಗ್ರೆಸ್ ನಾಯಕರ ವಾಗ್ದಾಳಿ
ಬೆಂಗಳೂರು, ಫೆ. ೧೫: ರಾಜ್ಯ ಬಿಜೆಪಿ ಸರ್ಕಾರದಿಂದ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದರು. ಕಾಂಗ್ರೆಸ್ ನಾಯಕರು ತುರ್ತು ಸುದ್ದಿಗೋಷ್ಠಿ ಕರೆದು ಬಿಜೆಪಿ ಸರ್ಕಾರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಆರೋಪಗಳ ಸುರಿಮಳೆಗೈದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ರಾಜ್ಯದ ಬೊಕ್ಕಸವನ್ನು ಸರ್ಕಾರವೇ ಲೂಟಿ ಮಾಡುತ್ತಿದೆ. ಜನರ ತೆರಿಗೆ ಹಣ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ. ಟೆಂಡರ್ ಹಣ ಹೆಚ್ಚು ಮಾಡಿದರೆ ಹೆಚ್ಚು ಕಮೀಷನ್ ಪಡೆಯುತ್ತಿದ್ದಾರೆ ಎಂದು ಬಿಜೆಪಿ ಸಚಿವರ ವಿರುದ್ಧ ಗುಡುಗಿದರು. ಮಂತ್ರಿಗಳು ಹೆಚ್ಚು ಕಮಿಷನ್ ಕೊಡುವವರಿಗೆ ಗುತ್ತಿಗೆ ಕೊಡುತ್ತಿದ್ದಾರೆ. ೪೦ ಪರ್ಸೆಂಟ್ ಕಮಿಷನ್ ಹಗರಣದ ಮುಂದುವರೆದ ಭಾಗ ಇದು. ಅಧಿಕಾರಕ್ಕೆ ಬಂದ ತಕ್ಷಣ ಎಲ್ಲಾ ಕಾಮಗಾರಿಗಳ ತನಿಖೆ ಮಾಡಿಸುತ್ತೇವೆ. ಅಧಿಕಾರಕ್ಕೆ ಬಂದ ತಕ್ಷಣ ೪೦% ಕಮಿಷನ್ ಹಗರಣ ತನಿಖೆ ಮಾಡಿಸುತ್ತೇವೆ ಎಂದರು. ಒಂದೇ ದಿನದಲ್ಲಿ ೧೮,೦೦೦ ಕೋಟಿ ಬಿಲ್ ಆಗಿದೆ. ಬಿಜೆಪಿ ಎಂಎಲ್ಎ ಗೂಳಿಹಟ್ಟಿ ಶೇಖರ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಎಲೆಕ್ಷನ್ ಫಂಡ್ ರೈಸ್ ಮಾಡಲು ಟೆಂಡರ್ ಹಗರಣ ಮಾಡುತ್ತಿದ್ದಾರೆ ಎಂದರು. ಅಸಮಾಧಾನಿತ ಶಾಸಕರ ಸಮಾಧಾನಕ್ಕೆ ಟೆಂಡರ್ ಹಣವಿದ್ದು, ಮಂತ್ರಿ ಸ್ಥಾನ ಸಿಗದವರಿಗೆ ಟೆಂಡರ್ ಆಫರ್ ನೀಡಿದ್ದಾರೆ. ಇದು ಅಂತಿAಥ ಹಗರಣವಲ್ಲ ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ. ವಸೂಲಿ ಹಣದಲ್ಲಿ ಎಲೆಕ್ಷನ್ ಮಾಡಲು ಹೊರಟಿದ್ದಾರೆಂದು ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ ಎಂದು ಆಪಾದಿಸಿದರು.
ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸುಪಾರಿ
ಬೆಂಗಳೂರು, ಫೆ. ೧೫: ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸುಪಾರಿ ನೀಡಿರುವ ಆರೋಪದ ಮೇಲೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸತೀಶ್ ರೆಡ್ಡಿ ಹತ್ಯೆಗೆ ಕುಖ್ಯಾತ ರೌಡಿ ಗ್ಯಾಂಗ್ ಸ್ಕೆಚ್ ಹಾಕಿದ್ದ ಸ್ಫೋಟಕ ವಿಷಯ ಬಹಿರಂಗಗೊAಡಿದೆ. ನಗರದ ವಿಲ್ಸನ್ ಗಾರ್ಡನ್ ನಾಗನ ತಂಡ ಶಾಸಕನ ಹತ್ಯೆಗೆ ೨ ಕೋಟಿಗೆ ಸುಪಾರಿ ಪಡೆದಿದ್ದು ಶಾಸಕರ ಚಲನವಲನಗಳ ಬಗ್ಗೆ ನಿಗಾವಹಿಸಿದ್ದರು. ಆದರೆ ದಾಳಿಗೂ ಮುಂಚೆ ರೌಡಿಶೀಟರ್ ನಾಗನ ತಂಡದಿAದಲೇ ವಿಷಯ ಬಹಿರಂಗಗೊAಡಿದೆ. ನಾಗನ ತಂಡದಲ್ಲಿದ್ದ ಚಿತ್ರದುರ್ಗದ ಮೂಲದ ಆಕಾಶ್ ಕೊಲೆಯ ಸುಳಿವು ಬಿಟ್ಟು ಕೊಟ್ಟಿದ್ದಾನೆ. ಸತೀಶ್ ರೆಡ್ಡಿ ಬೆಂಬಲಿಗ ಚಂದ್ರು ಕರೆ ಮಾಡಿದ್ದಾಗ ಆಕಾಶ್ ಕೊಲೆಯ ಸಂಚು ಬಾಯ್ಬಿಟ್ಟಿದ್ದಾನೆ. ನಂತರ ಎಚ್ಚೆತ್ತ ಶಾಸಕರು ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ರೌಡಿ ನಾಗನ ತಂಡ ತಲೆಮರೆಸಿಕೊಂಡಿದ್ದಾರೆ. ಇನ್ನು ನಾಗನ ತಂಡವನ್ನು ಪತ್ತೆ ಹಚ್ಚಲು ವಿಶೇಷಗಳನ್ನು ತಂಡಗಳನ್ನು ರಚಿಸಲಾಗಿದೆ.
ಉಗ್ರನ ಪತೆಗ್ತೆ ರೂ. ೧೫ ಲಕ್ಷ ಬಹುಮಾನ ಘೋಷಿಸಿದ ಎನ್ಐಎ
ನವದೆಹಲಿ, ಫೆ. ೧೫: ರಾಷ್ಟಿçÃಯ ತನಿಖಾ ಸಂಸ್ಥೆ ತಲೆಮರೆಸಿಕೊಂಡಿರುವ ಭಯೋತ್ಪಾದಕ ಆರೋಪಿ ಲಖ್ಬೀರ್ ಸಿಂಗ್ ಸಂಧು ಅಲಿಯಾಸ್ ಲಾಂಡಾ ಮಾಹಿತಿಗೆ ಗುರುವಾರ ೧೫ ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದೆ. ಪಂಜಾಬ್ನ ತರ್ನ್ ತರನ್ ಜಿಲ್ಲೆಯ ಹರಿಕೆ ಗ್ರಾಮದ ನಿವಾಸಿಯಾಗಿರುವ ಲಾಂಡಾ ಪ್ರಸ್ತುತ ಕೆನಡಾದ ಆಲ್ಬರ್ಟಾದ ಎಡ್ಮಂಟನ್ನಲ್ಲಿ ನೆಲೆಸಿದ್ದಾನೆ. ದೇಶದ ವಿವಿಧ ಭಾಗಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಕೆನಡಾ ಮೂಲದ ದರೋಡೆಕೋರ ಲಖ್ಬೀರ್ ಸಿಂಗ್ ಲಾಂಡಾ ವಿರುದ್ಧ ಎನ್ಐಎ ಕಳೆದ ವರ್ಷ ಆಗಸ್ಟ್ ೨೦ ರಂದು ಐಪಿಸಿಯ ಸೆಕ್ಷನ್ ೧೨೦ಬಿ, ೧೨೧, ೧೨೧ಎ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ೧೯೬೭ರ ಸೆಕ್ಷನ್ ೧೭, ೧೮, ೧೮-ಬಿ ಹಾಗೂ ೩೮ರ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು.
ಅಸ್ಸಾಂ ಕಾರ್ಮಿಕರಿಂದ ಗೂಂಡಾಗಿರಿ
ಚಿಕ್ಕಮಗಳೂರು, ಫೆ. ೧೫: ಮಲೆನಾಡಲ್ಲಿ ಅಸ್ಸಾಂ ಮೂಲದ ಕಾರ್ಮಿಕರ ಗೂಂಡಾಗಿರಿ ಮುಂದುವರೆದಿದ್ದು, ೧೦ಕ್ಕೂ ಅಧಿಕ ಗ್ರಾಮಸ್ಥರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಮಲ್ಲಂದೂರು ಸಮೀಪದ ಮಲಗಾರು ಗ್ರಾಮದಲ್ಲಿ ಕಾಫಿ ತೋಟದ ಕೆಲಸಕ್ಕೆ ಬಂದಿದ್ದ ನೂರಾರು ಅಸ್ಸಾಂ ಮೂಲದ ಕಾರ್ಮಿಕರು ಕೆಲಸದ ವಿಚಾರವಾಗಿ ತೋಟದ ರೈಟರ್ ಜೊತೆ ಗಲಾಟೆ ನಡೆಸಿದ ಬಳಿಕ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ. ಗಲಾಟೆ ಬಿಡಿಸಲು ಹೋದ ಗ್ರಾಮಸ್ಥರನ್ನ ಅಸ್ಸಾಂ ಕಾರ್ಮಿಕರು ಅಟ್ಟಾಡಿಸಿಕೊಂಡು ಹೊಡೆಡಿದ್ದಾರೆ ಎಂದು ತಿಳಿದು ಬಂದಿದೆ. ಗಂಭೀರವಾಗಿ ಗಾಯಗೊಂಡ ೪ಕ್ಕೂ ಹೆಚ್ಚು ಗ್ರಾಮಸ್ಥರು ಜಿಲ್ಲಾಸ್ಪತ್ರೆ ದಾಖಲಾಗಿದ್ದಾರೆ. ಅಕ್ರಮ ಬಾಂಗ್ಲಾ ವಲಸಿಗರಿಂದ ಹಲ್ಲೆ ಎಂದು ಬಜರಂಗದಳ ಅಕ್ರೋಶ ಹೊರ ಹಾಕಿದೆ.
ಋತುಚಕ್ರದ ರಜೆ:ಸುಪ್ರೀಂ ಕೋರ್ಟ್ ವಿಚಾರಣೆ
ನವದೆಹಲಿ, ಫೆ. ೧೫: ಭಾರತದಾದ್ಯಂತ ಎಲ್ಲಾ ಉದ್ಯೋಗಸ್ಥ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಫೆಬ್ರವರಿ ೨೪ ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ. ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಅವರು ಸಲ್ಲಿಸಿದ ಮನವಿಯನ್ನು ಸಿಜೆಐ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರ ಪೀಠದ ಮುಂದೆ ಉಲ್ಲೇಖಿಸಲಾಗಿದೆ. ತ್ರಿಪಾಠಿ ಅವರು ತಮ್ಮ ಮನವಿಯಲ್ಲಿ, ಮುಟ್ಟಿನ ಅವಧಿಯನ್ನು ಸಮಾಜ, ಸರ್ಕಾರ ಮತ್ತು ಇತರರಿಂದ ಹೆಚ್ಚಾಗಿ ಕಡೆಗಣಿಸಲಾಗಿದೆ. ಆದರೆ, ಕೆಲವು ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರಗಳು ಇದಕ್ಕೆ ಮಾನ್ಯತೆ ನೀಡಿವೆ. ಉಳಿದ ರಾಜ್ಯಗಳಲ್ಲಿ ಮಹಿಳೆಯರಿಗೆ ಋತುಚಕ್ರದ ನೋವಿನ ರಜೆ ಅಥವಾ ಮುಟ್ಟಿನ ರಜೆಯನ್ನು ನಿರಾಕರಿಸುವುದು ಸಂವಿಧಾನದ ೧೪ನೇ ಪರಿಚ್ಛೇದದ ಅಡಿಯಲ್ಲಿ ಅವರ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದಾರೆ.