ಮುಳ್ಳೂರು, ಫೆ. ೧೫: ಶನಿವಾರಸಂತೆ ನಿವಾಸಿ, ಮಾಜಿ ಪುರಸಭಾ ಅಧ್ಯಕ್ಷ ದಿ. ಗಂಗಪ್ಪ ಕರ್ಕೆರ ಅವರ ಪುತ್ರರಾದ ಜಿಲ್ಲೆಯ ಹಿರಿಯ ಪತ್ರಕರ್ತ ಎಸ್.ಜಿ. ನರೇಶ್ಚಂದ್ರ (೬೮) ಮಂಗಳವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಕಳೆದ ೪ ದಶಕಗಳ ಕಾಲ ಶಕ್ತಿ ದಿನ ಪತ್ರಿಕೆಯಲ್ಲಿ ಶನಿವಾರಸಂತೆ ಭಾಗದ ಗೌರವ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದ ನರೇಶ್ಚಂದ್ರ ಅವರು ಕಳೆದ ೨ ತಿಂಗಳಿನಿAದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಪತ್ನಿ ಸೇರಿದಂತೆ ಸಹೋದರಿ ಇತ್ತೀಚಿಗೆ ಗೌಡಳ್ಳಿಯಲ್ಲಿ ನಡೆದ ಸೋಮವಾರಪೇಟೆ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳಾಧ್ಯಕ್ಷೆಯಾಗಿದ್ದ ಸಾಹಿತಿ, ಲೇಖಕಿ ಪತ್ರಕರ್ತೆ ಶ.ಗ. ನಯನತಾರ ಹಾಗೂ ಸಹೋದರನನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ ಶನಿವಾರಸಂತೆಯ ಹಿಂದೂ ರುದ್ರಭೂಮಿಯಲ್ಲಿ ನಡೆಯಿತು.
(ಮೊದಲ ಪುಟದಿಂದ)
ಸAತಾಪ ಸಭೆ
ಕೊಡಗು ಪತ್ರಕರ್ತರ ಸಂಘದ ವತಿಯಿಂದ ಹಿರಿಯ ಪತ್ರಕರ್ತ ನರೇಶ್ಚಂದ್ರ ಅವರ ನಿಧನಕ್ಕೆ ಪತ್ರಿಕಾ ಭವನದಲ್ಲಿ ಸಂತಾಪ ಸಭೆ ನಡೆಸಲಾಯಿತು. ನರೇಶ್ಚಂದ್ರ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಸಭೆಯಲ್ಲಿ ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ, ಸಂಘದ ಸಲಹೆಗಾರರಾದ ಬಿ.ಜಿ. ಅನಂತಶಯನ, ಉಪಾಧ್ಯಕ್ಷ ಜಿ.ವಿ. ರವಿಕುಮಾರ್, ಪತ್ರಿಕಾಭವನ ಟ್ರಸ್ಟಿ ಶ್ರೀಧರ್ ಹೂವಲ್ಲಿ ನುಡಿ ನಮನ ಸಲ್ಲಿಸಿದರು. ಪತ್ರಿಕಾ ಭವನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್, ಸಂಘದ ಸಲಹೆಗಾರರಾದ ಅನಿಲ್ ಹೆಚ್.ಟಿ., ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್, ಸಹಕಾರ್ಯದರ್ಶಿ ಪ್ರಸಾದ್ ಸಂಪಿಗೆಕಟ್ಟೆ, ಸಹ ಖಜಾಂಚಿ ಸಯ್ಯದ್ ಇರ್ಫಾನ್, ನಿರ್ದೇಶಕರಾದ, ಲಕ್ಷಿö್ಮÃಶ್, ಎಸ್.ಕೆ. ಲಕ್ಷಿö್ಮ ನಾರಾಯಣ, ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ವಿಘ್ನೇಶ್ ಭೂತನಕಾಡು, ಸದಸ್ಯರಾದ ಪ್ರವೀಣ್, ಪಿ.ಎಂ. ರವಿ, ಅಲ್ಲಾರಂಡ ರಂಗಚಾವಡಿಯ ವಿಠಲ್ ನಂಜಪ್ಪ, ಪತ್ರಿಕಾ ಭವನ ವ್ಯವಸ್ಥಾಪಕಿ ಯಮುನಾ, ಸಿಬ್ಬಂದಿ ಸವಿತಾ ಹಾಜರಿದ್ದರು.