ಮಡಿಕೇರಿ/ಗೋಣಿಕೊಪ್ಪಲು, ಫೆ. ೧೫: ಇಬ್ಬರು ಹುಲಿಗೆ ಬಲಿಯಾದ ಪ್ರಕರಣದ ಬಳಿಕ ಆ ಹುಲಿಯನ್ನು ಸೆರೆ ಹಿಡಿದಿದ್ದರೂ ದಕ್ಷಿಣ ಕೊಡಗಿನಲ್ಲಿ ಜಾನುವಾರುಗಳನ್ನು ಹತ್ಯೆಗೈಯ್ಯುತ್ತಿರುವ ಇನ್ನೆರಡು ಹುಲಿಗಳ ಸೆರೆಗೆ ರಾಜ್ಯ ಅರಣ್ಯ ಇಲಾಖೆ ಅನುಮತಿ ನೀಡಿದೆ. ಇದರಿಂದಾಗಿ ಈ ಹುಲಿಗಳ ಸೆರೆಗೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಜಿಲ್ಲಾ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್. ಮೂರ್ತಿ ‘ಶಕ್ತಿ’ಗೆ ಖಚಿತಪಡಿಸಿದ್ದಾರೆ. ಅಲ್ಲದೆ ಇಬ್ಬರನ್ನು ಹುಲಿ ಹತ್ಯೆಗೈದ ಚೂರಿಕಾಡು ಪ್ರದೇಶದಲ್ಲಿ ಇನ್ಯಾವು ದಾದರು ಹುಲಿಗಳ ಸಂಚಾರವಿರ ಬಹುದೇ ಎಂಬುದನ್ನು ಖಾತರಿಪಡಿಸಿ ಕೊಳ್ಳಲು ಕೂಂಬಿAಗ್ ಕಾರ್ಯಾ ಚರಣೆ ಮುಂದುವರಿಯಲಿರು ವುದಾಗಿಯೂ ಅವರು ಮಾಹಿತಿಯಿತ್ತರು.
ನಾಗರಹೊಳೆ ವನ್ಯಧಾಮದ ವಲಯದಲ್ಲಿ ಪೊನ್ನಂಪೇಟೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ೯-೧೦ ವರ್ಷದ ಹೆಣ್ಣು ಹುಲಿಯೊಂದು ಆಗಿಂದಾಗ್ಗೆ ದಾಳಿ ಮಾಡಿ ಜಾನುವಾರುಗಳನ್ನು ಹತ್ಯೆಗೈಯ್ಯುತ್ತಿರು ವುದು ಕಂಡು ಬಂದಿದೆ. ಅದೇ ರೀತಿ ೧೦-೧೧ ವರ್ಷದ ಗಂಡು ಹುಲಿ ಯೊಂದು ಕಲ್ಲಳ್ಳ ಅರಣ್ಯ ವಲಯದ ತಿತಿಮತಿ ಮತ್ತು ಸುತ್ತಲಿನ ಪ್ರದೇಶದಲ್ಲಿ ಬೆಳೆಗಾರರು - ಕೃಷಿಕರಿಗೆ ಸೇರಿದ ಜಾನುವಾರುಗಳನ್ನು ಹತ್ಯೆಗೈಯ್ಯುತ್ತಿರು ವುದು ಪತ್ತೆಯಾಗಿದೆ. ಈ ಎರಡೂ ಹುಲಿಗಳ ಗುರುತನ್ನು ಸ್ಪಷ್ಟವಾಗಿ ಪತ್ತೆಹಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಈ ಹುಲಿಗಳ ಸೆರೆಗೆ ಕಾರ್ಯಾಚರಣೆ ಪ್ರಾರಂಭಗೊAಡಿದೆ.
ಪ್ರಾರಂಭಿಕವಾಗಿ ಪೊನ್ನಂಪೇಟೆ ವಿಭಾಗದಲ್ಲಿ ಕಾರ್ಯಾಚರಣೆ ಈಗಿನಿಂದಲೇ ಶುರುವಾಗಿದೆ. ೫೦ ಮಂದಿ ಅರಣ್ಯ ಸಿಬ್ಬಂದಿ, ೪ ಸಾಕಾನೆಗಳ ಸಹಕಾರದೊಂದಿಗೆ ಈ ಕಾರ್ಯವನ್ನು ಕೈಗೊಂಡಿದ್ದಾರೆ. ಆ ಪ್ರದೇಶದ ಹೆಣ್ಣು ಹುಲಿ ಸೆರೆಯಾದ ಬಳಿಕ ದ್ವಿತೀಯ ಹಂತವಾಗಿ ತಿತಿಮತಿ ವಿಭಾಗದಲ್ಲಿ ಗಂಡು ಹುಲಿಯ ಸೆರೆಗೆ ಕಾರ್ಯಾಚರಣೆ ಇದೇ ತಂಡದಿAದ ಮುಂದುವರಿಯುತ್ತದೆ ಎಂದು ಮೂರ್ತಿ ವಿವರಿಸಿದರು. ಆಶ್ಚರ್ಯ ವೆಂದರೆ ಈ ೨ ಹುಲಿಗಳು ಆಗಿಂದಾಗ್ಗೆ ಗ್ರಾಮಗಳಿಗೆ ನುಗ್ಗಿ ಜಾನುವಾರುಗಳನ್ನು ಬೇಟೆಯಾಡಿ ಬಳಿಕ ವನ್ಯಪ್ರದೇಶಕ್ಕೆ ಮರಳುತ್ತಿರುತ್ತವೆ. ಮತ್ತೆ ಗ್ರಾಮಗಳಿಗೆ ಪ್ರವೇಶಿಸುತ್ತಿರುತ್ತವೆ.
ಶಾಶ್ವತ ಪರಿಹಾರ ಪ್ರಯತ್ನ
ಈ ನಡುವೆ ಗ್ರಾಮ ಪ್ರದೇಶಗಳಿಗೆ ವನ್ಯಜೀವಿ ಹುಲಿಗಳು ಪ್ರವೇಶಿಸದಂತೆ ತಡೆಯಲು ಶಾಶ್ವತ ಪರಿಹಾರ ಪ್ರಯತ್ನ ನಡೆಸಲಾಗಿದೆ ಎಂದು ಸಿ.ಸಿ.ಎಫ್. ಮೂರ್ತಿ ಮಾಹಿತಿಯಿತ್ತರು. ಇದಕ್ಕೆ ಪರಿಹಾರೋಪಾಯವೆಂದರೆ ೧೨ ಅಡಿ ಎತ್ತರದ ಚೈನ್ಲಿಂಕ್ ಬೇಲಿ ನಿರ್ಮಾಣ ಮಾಡುವುದು. ಈಗಾಗಲೇ ಈ ಕಾರ್ಯ ನಡೆಸಲು ದ.ಕೊಡಗಿನ ನಾಣಚ್ಚಿ ಗೇಟ್ನಿಂದ ಕಾರ್ಮಾಡು ಗೇಟ್ವರೆಗೆ ನಾಗರಹೊಳೆ ವಲಯದಲ್ಲಿ ಸುಮಾರು ೧೦ ಕಿ.ಮೀ. ದೂರದವರೆಗೆ ಚೈನ್ಲಿಂಕ್ ಬೇಲಿ ಯನ್ನು ನಿರ್ಮಿಸಲು ಯೋಜಿಸಲಾ ಗುತ್ತಿದೆ. ಈ ಸಂಬAಧ ಮಾರ್ಗದರ್ಶನ ಮತ್ತು ಸಹಕಾರಕ್ಕಾಗಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಮುಖರೊಂದಿಗೆ ಸಮಾಲೋಚಿ ಸಲಾಗಿದೆ. (ಮೊದಲ ಪುಟದಿಂದ) ಆದರೆ ಈ ಸಂದರ್ಭವೂ ಮತ್ತೊಂದು ಸಮಸ್ಯೆ ಎದುರಾಗುತ್ತದೆ. ಈ ಪ್ರದೇಶಗಳಲ್ಲಿರುವ ಕಾಡಾನೆಗಳು ಈ ಚೈನ್ಲಿಂಕ್ಗಳನ್ನು ಹಾಳುಗೆಡಹುವ ಸಂಭವವಿದೆ. ಇದಕ್ಕೆ ಪರಿಹಾರೋಪಾಯವಾಗಿ ಈ ಚೈನ್ಲಿಂಕ್ಗೆ ಸುಮಾರು ೯.೫ ವೋಲ್ಟ್ ಶಕ್ತಿಯ ಕಡಿಮೆ ವಿದ್ಯುತ್ ಪ್ರವಹನವನ್ನು ಅಳವಡಿಸುವ ಮೂಲಕ ಆನೆಗಳ ಪ್ರವೇಶವನ್ನು ತಡೆಯಬಹುದಾಗಿದೆ. ಸಾಮಾನ್ಯವಾಗಿ ಹುಲಿಗಳು ೧೨ ಅಡಿ ಎತ್ತರಕ್ಕಿಂತ ಅಧಿಕ ಹಾರುವ ಸಾಹಸ ಮಾಡದಿರುವುದರಿಂದ ಈ ಯೋಜನೆ ಮೂಲಕ ಶಾಶ್ವತ ಪರಿಹಾರ ಕಲ್ಪಿಸಬಹುದೆಂದು ನಿರೀಕ್ಷಿಸಲಾಗಿದೆ ಎಂದು ಅಧಿಕಾರಿ ಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.
ಕ್ಯಾಮರಾ ಅಳವಡಿಕೆ
ನಾಗರಹೊಳೆ ವೈಲ್ಡ್ ಲೈಫ್ನ ನಿರ್ದೇಶಕರಾದ ಹರ್ಷಕುಮಾರ್ ಮುಂದಾಳತ್ವ ದಲ್ಲಿ ಸಿಬ್ಬಂದಿಗಳು ಕೂಂಬಿAಗ್ ಕಾರ್ಯಾಚರಣೆ ಯಲ್ಲಿ ತೊಡಗಿಸಿಕೊಂಡಿದ್ದಾರೆ. ಹುಲಿಯ ಜಾಡನ್ನು ಅರಸಿ ರೈತರ ಕಾಫಿ ತೋಟ ಹಾಗೂ ಕುರುಚಲು ಕಾಡಿನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ಹುಲಿಯ ಚಲನವಲನಗಳ ಬಗ್ಗೆ ಮಾಹಿತಿ ಪಡೆಯಲು ಆಯಕಟ್ಟಿನ ಪ್ರದೇಶದಲ್ಲಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಎರಡು ಭಾಗದಲ್ಲಿ ಹುಲಿ ಬೋನನ್ನು ಇಟ್ಟಿದ್ದಾರೆ. ನಾಗರಹೊಳೆ ವೈಲ್ಡ್ ಲೈಫ್ನ ಹರ್ಷಕುಮಾರ್, ಎಸಿಎಫ್ ಗೋಪಾಲ್ ಹಾಗೂ ತಂಡ ಕಾರ್ಯೋನ್ಮುಖವಾಗಿದೆ. ಮುಂಜಾನೆಯಿAದ ಸಂಜೆಯವರೆಗೂ ಕಾರ್ಯಾಚರಣೆ ಮುಂದುವರೆಯಿತ್ತಾದರೂ ಹುಲಿಯ ಪತ್ತೆ ಕಾರ್ಯ ಆಗಿರಲಿಲ್ಲ.
- ಹೆಚ್.ಕೆ. ಜಗದೀಶ್