ವೀರಾಜಪೇಟೆ, ಫೆ. ೧೪: ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಇತ್ತಿಚೆಗೆ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ ಅವರು, ವೈದ್ಯರನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ, ಸರ್ಕಾರಿ ಆಸ್ಪತ್ರೆಗಳಿಗೆ ಬರುವಂತಹ ಬಹುತೇಕರು ಬಡಕುಟುಂಬದ ಹಿನ್ನೆಲೆಯುಳ್ಳವರಾಗಿದ್ದು ಅಂತಹವರಿಗೆ ಸೂಕ್ತ ಚಿಕಿತ್ಸೆ ನೀಡುವ ವಿಷಯದಲ್ಲಿ ಧನಾತ್ಮಕ ಚಿಂತನೆಗಳು ವೈದ್ಯರಿಂದಾಗ ಬೇಕಾಗಿದೆ, ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸದ್ಯಕ್ಕೆ ಎಲ್ಲಾ ಸೌಲಭ್ಯಗಳು ಲಭ್ಯವಿದ್ದು ಶುಚಿತ್ವ ಕಾಪಾಡಿ ಕೊಳ್ಳಲಾಗಿದೆ ಎಂದರು.

ಮಲ್ಟಿ ಸ್ಪೆಶಾಲಿಟಿ ಖಾಸಗಿ ಆಸ್ಪತ್ರೆಗಳಿಗೂ ಕಡಿಮೆ ಇಲ್ಲವೆನ್ನುವ ರೀತಿಯಲ್ಲಿ ಶುಚಿತ್ವ ಕಾಪಾಡಿ ಕೊಳ್ಳಲಾಗಿದ್ದು ರಕ್ತತಪಾಸಣೆ, ಎಕ್ಸ್ರೇ, ಡಯಾಲಿಸಿಸ್, ಆಪರೇ±ನ್ ಥಿಯೇಟರ್ ಸೇರಿದಂತೆ ನಾಯಿ ಮತ್ತು ಹಾವು ಕಡಿತಕ್ಕೆ ಚಿಕಿತ್ಸಾ ಸೌಲಭ್ಯಗಳನ್ನು ಇಲ್ಲಿ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಗಂಟಲು-ಕಿವಿ, ಎಲುಬು-ಕೀಲು, ಚರ್ಮ, ನೇತ್ರ, ಮಕ್ಕಳು ಮತ್ತು ಮಹಿಳೆಯರಿಗೆ, ಆಯುಷ್ಯ ಜನರಲ್ ಫಿಸಿಶಿಯನ್ ಇನ್ನಿತರ ರೋಗಗಳಿಗೆ ತಜ್ಞ ವೈದ್ಯರುಗಳು ಲಭ್ಯವಿದ್ದು, ಇದೊಂದು ಸಕಲ ಸೌಲಭ್ಯಗಳಿರುವ ಸರ್ಕಾರಿ ಆಸ್ಪತ್ರೆಯಾಗಿದ್ದು ತಾಲೂಕಿನ ಎಲ್ಲ ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಮುಖ್ಯ ಆಡಳಿತ ವೈದ್ಯಾದಿಕಾರಿ ಜೆ. ಶ್ರೀನಿವಾಸ್ ಮಾತನಾಡಿ ಆಸ್ಪತ್ರೆಯ ಅಬಿವೃದ್ದಿ ಬಗ್ಗೆ ಮಾಹಿತಿ ನೀಡಿದರು. ಹೊರ ರೋಗಿಗಳಿಗೆ ಸಂದರ್ಶನ ಶುಲ್ಕ ಹತ್ತು ರೂಪಾಯಿ ಹೇರಿಕೆ ಮಾಡುವಂತೆ ಕೋರಿ ಕೊಂಡ ಹಿನ್ನೆಲೆಯಲ್ಲಿ ಶಾಸಕ ಬೋಪಯ್ಯ ಮತ್ತು ವಿಧಾನ ಪರಿಷತ್ತ್ ಸದಸ್ಯರಾದ ಸುಜಾ ಕುಶಾಲಪ್ಪ ಸಮ್ಮತಿ ಸೂಚಿಸಿದರು. ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಯಲ್ಲಿ ಕೆಲವರು ದರ್ಪದಿಂದ ಮತ್ತು ವೈದ್ಯರನ್ನು ಅವಹೇಳನ ಮಾಡುವುದು, ಮಾಧ್ಯಮದವರನ್ನು ಕರೆಯಿಸಿ ಹೆದರಿಸುವುದು, ಆಸ್ಪತ್ರೆ ಒಳಗೆ ನುಗ್ಗಿ ದಾಂದಲೆ ನಡೆಸುವುದು, ಗಲಾಟೆ ಮಾಡುವುದು, ಆಸ್ಪತ್ರೆಯ ಉಪಕರಣಗಳಿಗೆ ಹಾನಿಮಾಡುವುದು ಜಾಸ್ತಿಯಾಗಿದೆ ಎಂದು ಶಾಸಕರ ಗಮನಕ್ಕೆ ತಂದರು. ಸಭೆಗೆ ಪೊಲಿಸ್ ಇಲಾಖೆಗೆ ಮಾಹಿತಿ ನೀಡಿದರೂ ಕೂಡ ಯಾರು ಸಭೆಗೆ ಆಗಮಿಸದ ಬಗ್ಗೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿದಿನವೂ ರಾತ್ರಿ ವೇಳೆಯಲ್ಲಿ ಆಸ್ಪತ್ರೆ ಬಳಿ ಗಸ್ತು ಬರಲು ಡಿವೈಎಸ್‌ಪಿ ಬಳಿ ಚರ್ಚಿಸುತ್ತೇನೆ. ರಾತ್ರಿ ಪಾಳಯದಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡುವ ಪುರುಷ ವಾಚ್ ಮ್ಯಾನ್ ಕೊಡಿಸಲು ಹಾಗೂ ಎರಡು ವೈದ್ಯರ ಕೊರತೆ ಮತ್ತು ಆಸ್ಪತ್ರೆಗೆ ಅಗತ್ಯವಾದ ಎಲ್ಲ ವ್ಯವಸ್ಥೆ ಕಲ್ಪಿಸಲು ಪ್ರಯತ್ನ ಮಾಡುವುದಾಗಿ ಹೇಳಿದರಲ್ಲದೆ, ಮುಖ್ಯ ಆಡಳಿತ ವೈದ್ಯಾಧಿಕಾರಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಹಿಂದೆ ಆಸ್ಪತ್ರೆ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದ ಎರಡನೇ ದರ್ಜೆ ಮಹಿಳಾ ನೌಕರರೊಬ್ಬರು ಕೆಲವು ಸಂಸ್ಥೆಗಳಿಗೆ ಹಾಗೂ ಆಸ್ಪತ್ರೆಗೆ ಸಾಮಗ್ರಿಗಳನ್ನು ಖರೀದಿಸಿ ಹಣವನ್ನು ನೀಡದೆ ಅನೇಕ ಮಂದಿಗೆ ವಂಚನೆ ಮಾಡಿರುವುದಾಗಿ ಸಭೆಯ ಗಮನಕ್ಕೆ ತರಲಾಯಿತು. ಶಾಸಕರು ತಕ್ಷಣವೇ ಲೆಕ್ಕ ಪರಿಶೋದನೆ ಮಾಡಿ ಯಾರು ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಅವರಿಂದ ಹಣ ಕೊಡಿಸಲು ಕ್ರಮವನ್ನು ಕೈಗೊಳ್ಳಿ ಎಂದು ಮುಖ್ಯ ಆಡಳಿತ ವೈದ್ಯರಿಗೆ ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು ವೈದ್ಯರ ಅಹವಾಲು ಸ್ವೀಕರಿಸಿ ಈ ಬಗ್ಗೆ ಆರೋಗ್ಯ ಸಚಿವರ ಗಮನಕ್ಕೆ ತಂದು ಸರಿಪಡಿಸುವ ಭರವಸೆ ನೀಡಿದರು. ಎಲ್ಲಾ ವೈದ್ಯರನ್ನು ಕರೆಯಿಸಿ ಸಭೆ ನಡೆಸಿ ವೈದ್ಯರು ಬಳಿ ತಮ್ಮ ಅಹವಾಲು ಕೇಳಿದಾಗ ವೈದ್ಯರಾದ ಪ್ರಜ್ವಲ್ ಅವರು ಕಳೆದ ಇಪ್ಪತ್ತೆöÊದು ವರ್ಷಗಳ ಹಿಂದೆ ಇದ್ದ ಉಪಕರಣ ರೀಪೇರಿಯಾಗಿದ್ದು ಅದರಿಂದ ಶಸ್ತçಚಿಕಿತ್ಸೆ ಮಾಡಲು ತೊಂದರೆಯಾಗುತ್ತಿದೆ ಎಂದು ತಿಳಿಸಿದರು. ನೇತ್ರ ತಜ್ಞ ವೈದ್ಯೆ ಹೇಮಪ್ರಿಯ ಮಾತನಾಡಿ, ತಾನು ಕೆಲಸ ನಿರ್ವಹಿಸುವ ಕೋಣೆಯಲ್ಲಿ ವ್ಯಕ್ತಿ ಯೊಬ್ಬ ನುಗ್ಗಿ ತಾನು ಉಪಯೋಗಿ ಸುವ ಎಲ್ಲಾ ಪರಿಕರಗಳನ್ನು ನಾಶ ಮಾಡಿದ್ದಾನೆ ಎಂದು ಅವರ ಗಮನಕ್ಕೆ ತಂದರು. ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಎ. ಚಂದ್ರಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ಚೆಸ್ಕಾಂ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಆಸ್ಪತ್ರೆಯ ಎಲ್ಲ್ಲಾ ವೈದ್ಯರುಗಳು ಸಿಬ್ಬಂದಿಗಳು ಭಾಗವಹಿಸಿದ್ದರು.