ಮಡಿಕೇರಿ, ಫೆ. ೧೪: ಪುಲ್ವಾಮ ಭಯೋತ್ಪಾದಕ ಧಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಮಡಿಕೇರಿಯ ಯುದ್ಧ ಸ್ಮಾರಕದಲ್ಲಿ ಹಿಂದೂ ಜಾಗರಣಾ ವೇದಿಕೆ ನೇತೃತ್ವದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಹಣತೆಗಳನ್ನು ಹಚ್ಚಿ ಗೌರವ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಸಾಮಾಜಿಕ ಕಾರ್ಯಕರ್ತರಾದ ಧನಂಜಯ ಅಗೋಳಿಕಜೆ ಹಾಗೂ ಹಿಂ.ಜಾ.ವೇ. ಕೊಡಗು ಜಿಲ್ಲಾ ಸಂಚಾಲಕ್ ಕುಕ್ಕೇರ ಅಜಿತ್ ಮಾತನಾಡಿದರು.