ಗೋಣಿಕೊಪ್ಪಲು, ಫೆ. ೧೪: ಮಹಾಶಿವರಾತ್ರಿ ಅಂಗವಾಗಿ ಗೋಣಿಕೊಪ್ಪಲುವಿನ ಕಾವೇರಿ ಹಿಲ್ಸ್ ಬಡಾವಣೆಯಲ್ಲಿ ಕಾವೇರಿ ಸಂಘದ ವತಿಯಿಂದ ಸಂಘದ ಅಧ್ಯಕ್ಷರಾದ ಶಾಂತೆಯAಡ ಮಧು ಮಾಚಯ್ಯ ಅಧ್ಯಕ್ಷತೆಯಲ್ಲಿ ಸ್ಥಳೀಯ ಮಕ್ಕಳಿಗೆ ಹಾಗೂ ಬಡಾವಣೆಯ ನಿವಾಸಿಗಳಿಗೆ ವಿವಿಧ ಕ್ರೀಡಾಕೂಟಗಳನ್ನು ನಡೆಸಲಾಯಿತು.

ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯ ಬಾಲು, ಸದಸ್ಯರಾದ ಹಕಿಮ್ ಹಾಗೂ ನೂರೆರ ರತಿ ಅಚ್ಚಪ್ಪ ಮಕ್ಕಳ ಸೈಕಲ್ ರೇಸ್ ಉದ್ಘಾಟಿಸಿದರು. ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ, ಪುರುಷರಿಗೆ ಹಗ್ಗಜಗ್ಗಾಟ, ಸೈಕಲ್ ರೇಸ್, ರನ್ನಿಂಗ್ ರೇಸ್, ಪಿಕ್ ಅಂಡ್ ಸ್ಪೀಚ್, ಕಣ್ಣಿಗೆ ಬಟ್ಟೆ ಕಟ್ಟಿ ಕುಡಿಕೆ ಹೊಡೆಯುವುದು, ಮ್ಯೂಸಿಕಲ್ ಚೇರ್ ಸೇರಿದಂತೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಹೊನಲು ಬೆಳಕಿನ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಉದ್ಯಮಿ ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಗುಮ್ಮಟ್ಟಿರ ಕಿಲನ್ ಗಣಪತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಕುಲ್ಲಚಂಡ ಪ್ರಮೋದ್ ಗಣಪತಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರಫೀಕ್, ಸುನೀಲ್, ಉಪಾಧ್ಯಕ್ಷೆ ಧನಲಕ್ಷಿö್ಮ, ಖಜಾಂಚಿ, ಸತ್ಯ, ಗೌರವಾಧ್ಯಕ್ಷÀ ತೋಮಸ್, ಪದಾಧಿಕಾರಿಗಳಾದ ಸೌಮ್ಯ, ಬಿಂದು ಶೈಲಜ, ಪ್ರವೀಣ, ವರ್ಗೀಸ್, ರಜಾಕ್ ಮತ್ತಿತರರು ಹಾಜರಿದ್ದರು.