ಭಾಗಮಂಡಲ, ಫೆ. ೧೪: ಭಾಗಮಂಡಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಮೂರು ಕೋಟಿ ರೂಪಾಯಿ ಅನುದಾನದಲ್ಲಿ ನಿರ್ಮಾಣವಾ ಗಲಿರುವ ಸೇತುವೆ, ರಸ್ತೆ ಹಾಗೂ ಜಲಜೀವನ್ ಮಿಷನ್ ಕಾಮಗಾರಿ ಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಶಂಕುಸ್ಥಾಪನೆ ನೆರವೇರಿಸಿದರು.

ಭಾಗಮಂಡಲ ವ್ಯಾಪ್ತಿಯ ತಾವೂರು, ಚೇರಂಗಾಲ, ತಣ್ಣಿಮಾನಿ, ಕೋರಂಗಾಲ ಗ್ರಾಮ ವ್ಯಾಪ್ತಿಗಳ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.

೧೦.೫೦ ಲಕ್ಷ ರೂ. ವೆಚ್ಚದಲ್ಲಿ ತಣ್ಣಿಮಾನಿ ಗ್ರಾಮದ ಕುದುಪಜೆ ಐನ್‌ಮನೆ ರಸ್ತೆ ಕಾಮಗಾರಿ, ೨.೨೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ಸೂರ್ತಲೆ ಕುಟುಂಬದ ರಸ್ತೆ, ೩.೫೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮತ್ತಾರಿ ಪಾಂಡಿ ರಸ್ತೆ, ೨೫ ಲಕ್ಷ ರೂ.ನಲ್ಲಿ ನಿರ್ಮಾಣಗೊಳ್ಳಲಿರುವ ಹಕ್ಕಿಕಂಡಿ ಕುಡಿಯರ ಕಾಲೋನಿ ರಸ್ತೆ ಹಾಗೂ ೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ಕುದುಪಜೆ ರಸ್ತೆ ಸೇರಿದಂತೆ ಹಲವು ರಸ್ತೆ ಕಾಮಗಾರಿಗಳಿಗೆ ಶಾಸಕ ಬೋಪಯ್ಯ ಭೂಮಿ ಪೂಜೆ ನೆರವೇರಿಸಿದರು

ಇದೇ ಸಂದರ್ಭ ತಾವೂರು, ಚೇರಂಗಾಲ ಹಾಗೂ ಕೋರಂಗಾಲ ಗ್ರಾಮಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಗ್ರಾ.ಪಂ. ಅಧ್ಯಕ್ಷ ಪಮಿತ, ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್, ಸದಸ್ಯರಾದ ಸಿರಕಜೆ ನಾಗೇಶ್, ದಂಡಿನ ಜಯಂತ, ನಿತ್ಯಾನಂದ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜೀವ್ ಹಾಗೂ ಇನ್ನಿತರರು ಹಾಜರಿದ್ದರು.