ಸೋಮವಾರಪೇಟೆ, ಫೆ. ೧೪: ಬಾಲಕಿ ಮೇಲೆ ಆಕೆಯ ದೂರದ ಸಂಬAಧಿಯೇ ಅತ್ಯಾಚಾರ ಮಾಡಿರುವ ಘಟನೆ ಮಾದಾಪುರ ಸಮೀಪದ ಇಗ್ಗೋಡ್ಲು ಗ್ರಾಮದಲ್ಲಿ ನಡೆದಿದೆ.

ಕೂಲಿ ಕಾರ್ಮಿಕ ಪಾಪಣ್ಣ (ಸುಬ್ಬಯ್ಯ-೪೫) ಎಂಬಾತನೆ ಆರೋಪಿ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಆಗಮಿಸಿದ ಪಾಪಣ್ಣ, ಬಾಲಕಿಯನ್ನು ಕುರಿತು ನಿನ್ನ ತಂದೆ ಇಲ್ಲವೇ ಎಂದು ಕೇಳಿದ್ದು, ಈ ಸಂದರ್ಭ ಮನೆಯಲ್ಲಿ ಯಾರೂ ಇಲ್ಲ; ನೀವು ಹೊರಡಿ ಎಂದು ತಿಳಿಸಿ ಬಾಗಿಲು ಹಾಕಿಕೊಂಡಿದ್ದಾಳೆ.

ಕೆಲ ಸಮಯದ ನಂತರ ಬಾಗಿಲು ತೆರೆದು ಬಾಲಕಿ ಹೊರಬಂದಿದ್ದಾಳೆ. ಈ ಸಂದರ್ಭ ಮನೆಯ ಪಕ್ಕದಲ್ಲಿಯೇ ಹೊಂಚು ಹಾಕಿ ಕುಳಿತಿದ್ದ ಪಾಪಣ್ಣ ಮನೆಯೊಳಗೆ ತೆರಳಿದ್ದು, ಬಾಲಕಿ ವಾಪಸ್ ಮನೆಯೊಳಗೆ ಬಂದ ಸಂದರ್ಭ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಘಟನೆಯ ಬಗ್ಗೆ ಬಾಲಕಿ ತನ್ನ ಕುಟುಂಬದವರಿಗೆ ಮಾಹಿತಿ ನೀಡಿದ್ದು, ನಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದೂರು ದಾಖಲಿಸಿಕೊಂಡ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರನಾಯಕ್, ಠಾಣಾಧಿಕಾರಿ ರಮೇಶ್ ಕುಮಾರ್ ಅವರುಗಳು, ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಆರೋಪಿ ಪಾಪಣ್ಣನಿಗೆ ವಿವಾಹವಾಗಿದ್ದು, ಪತ್ನಿ ಸೇರಿದಂತೆ ಈರ್ವರು ಮಕ್ಕಳಿದ್ದಾರೆ.