ಚೆಟ್ಟಳ್ಳಿ, ಫೆ. ೧೪: ಕಲ್ಲುಬಂಡೆಗಳ ನಡುವೆ ಪಾಂಡವರ ಇತಿಹಾಸ ಸಾರುವ ದೇವಾಲಯ ಕುಂದ ಬೆಟ್ಟದ ತುತ್ತತುದಿಗೆ ವಿದ್ಯಾರ್ಥಿಗಳು ತಲುಪಿದರು. ಪ್ರಕೃತಿ ವಿಸ್ಮಯವನ್ನು ಕಣ್ತುಂಬಿಕೊಳ್ಳುತ್ತಾ ಮಕ್ಕಳು ಸಂಭ್ರಮಿಸತೊಡಗಿದರು.
ಆAಧ್ರಪ್ರದೇಶದ ಚಿತ್ತೂರಿನ ಖಾಸಗಿ ಶಾಲೆಯೊಂದರ ಮಕ್ಕಳು ಕೊಡಗಿಗೆ ಭೇಟಿ ನೀಡಿದ್ದು, ಕುಂದ ಬೆಟ್ಟ ಚಾರಣಕ್ಕೆ ಅಮ್ಮತ್ತಿಯ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ ಕುಂಞAಗಡ ಮಾಚು ಮಾಚಯ್ಯ ಹಾಗೂ ಪುಚ್ಚಿಮಾಡ ಬಾಬ್ ಅಪ್ಪಯ್ಯ ಅವರುಗಳು ಸಾಥ್ ನೀಡಿದರು.
ಮಕ್ಕಳಿಗೆ ಕೊಡಗಿನ ಕಾಡುಮೇಡಿನ ಪಾಠ, ಕಾಡು ಹಣ್ಣು, ಕಾಡು ಪ್ರಾಣಿಗಳ ಹೆಜ್ಜೆ ಗುರುತು, ನಾನಾ ಪಕ್ಷಿಗಳ ಕಲರವ, ಬೆಟ್ಟದ ಮೇಲಿನ ಹುಲಿಯ ಗುಹೆ, ಕುಂದ ಬೆಟ್ಟದ ಇತಿಹಾಸದ ಬಗ್ಗೆ ಚಾರಣದೊಂದಿಗೆ ಮಕ್ಕಳಿಗೆ ಮಾಹಿತಿ ನೀಡಿದರು.
ಬೆಟ್ಟದಲ್ಲಿ ಪ್ಲಾಸ್ಟಿಕ್ ವಸ್ತುವನ್ನು ಎಲ್ಲೆಂದರಲ್ಲಿ ಬಿಸಾಡದೇ ಪ್ರಕೃತಿಯನ್ನು ಕಾಪಾಡುವುದು ನಮ್ಮೆಲ್ಲರ ಹೊಣೆಯಾಗಬೇಕೆಂದು ಮಾಚಯ್ಯ ತಿಳಿಸಿದರು.
ನಾಲ್ಕು ಗೋಡೆಗಳ ನಡುವಿನ ಪಾಠ-ಪ್ರವಚನಕ್ಕಿಂತ ಪ್ರಕೃತಿ ನಡುವಿನ ಪಾಠವೇ ಮನದಟ್ಟು ಮಾಡುವ ರೀತಿ ಕುಂದ ಬೆಟ್ಟಕ್ಕೆ ಶಾಲಾ ಮಕ್ಕಳ ಚಾರಣ ಸಾಕ್ಷಿಯಾಯಿತು.