ಪೆರಾಜೆ, ಫೆ. ೧೪: ಇಲ್ಲಿಗೆ ಸಮೀಪದ ಕುಂಬಳಚೇರಿ ಶ್ರೀ ವಯನಾಟ್ ಕುಲವನ್ ದೇವಸ್ಥಾನ ದಲ್ಲಿ ಮಾರ್ಚ್ ೩ ರಿಂದ ಮಾ. ೫ ರವರೆಗೆ ನಡೆಯುವ ದೈವಕಟ್ಟು ಮಹೋತ್ಸವದ ಅಂಗವಾಗಿ ಭತ್ತ ಅಳೆಯುವುದು (ಕೂವಂ ಅಳಕ್ಕಲ್) ಮತ್ತು ವೀಳ್ಯ ಕೊಡುವ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ದೈವಕಟ್ಟು ಮಹೋತ್ಸವ ಸಮಿತಿಯ ಅಧ್ಯಕ್ಷ ಹೊನ್ನಪ್ಪ ಕೊಳಂಗಾಯ, ಆಡಳಿತ ಸಮಿತಿ ಅಧ್ಯಕ್ಷ ಪದ್ಮಯ್ಯ ಕುಂಬಳ ಚೇರಿ, ದೈವಕಟ್ಟು ಮಹೋತ್ಸವದ ಗೌರಾಧ್ಯಕ್ಷ ಜಿತೇಂದ್ರ ನಿಡ್ಯಮಲೆ, ಆಡಳಿತ ಸಮಿತಿ ಕಾರ್ಯದರ್ಶಿ ವಿಶ್ವನಾಥ ಮಜಿಕೋಡಿ, ದೈವಕಟ್ಟು ಮಹೋತ್ಸವದ ಪ್ರಧಾನ ಕಾರ್ಯದರ್ಶಿ ಪವಿತ್ರನ್ ಗುಂಡ್ಯ, ಸಂಘಟನಾ ಕಾರ್ಯದರ್ಶಿ ಉದಯಚಂದ್ರ ಕುಂಬಳಚೇರಿ, ಖಜಾಂಚಿ ಲೋಕೇಶ್ ಹೊದ್ದೆಟ್ಟಿ, ಆರ್ಥಿಕ ಸಮಿತಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಕಾರ್ಯಧ್ಯಕ್ಷ ನಂಜಪ್ಪ ನಿಡ್ಯಮಲೆ, ಶ್ರೀಜಿತ್ ಅರಂತೂಡು, ಕುತ್ತಿಕೋಲು ತಂಬುರಾಟಿ ಭಗವತಿ ಕ್ಷೇತ್ರದ ಸ್ಥಾನಿಕರು, ಸ್ಥಾನದ ಮನೆ ಅರ್ಚಕ ಕುಂಞೆಕಣ್ಣ ಸೇರಿದಂತೆ ಊರ ತಕ್ಕಮುಖ್ಯಸ್ಥರು ಗ್ರಾಮ ಸಮಿತಿಯ ಸಂಚಾಲಕ ಸಹ ಸಂಚಾಲಕರು, ವಿವಿದ ಉಪ ಸಮಿತಿಗಳ ಪದಾಧಿಕಾರಿಗಳು ಭಕ್ತಾದಿಗಳು ಉಪಸ್ಥಿತರಿದ್ದರು.