ಸುಂಟಿಕೊಪ್ಪ, ಫೆ. ೧೪: ಐಗೂರು ಗ್ರಾಮ ಪಂಚಾಯಿತಿ ಕಾಜೂರು ಹರಿಹರ ಯುವಕ ಸಂಘದ ವಾರ್ಷಿಕೋತ್ಸವ ಹಾಗೂ ಶಿವರಾತ್ರಿ ಉತ್ಸವವು ತಾ.೧೯ ರಂದು ನಡೆಯಲಿದೆ.

ಉದ್ಘಾಟನೆಯನ್ನು ತಾ.೧೯ ರಂದು ಬೆಳಿಗ್ಗೆ ೯ ಗಂಟೆಗೆ ಕಾಫಿ ಬೆಳೆಗಾರರಾದ ಕಂಬೆಯAಡ ಸೀತಾಲಕ್ಷ್ಮಿ ಅಪ್ಪಯ್ಯ ಹಾಗೂ ವರ್ತಕರಾದ ಟಿ.ಕೆ. ಉಣ್ಣಿಕೃಷ್ಣ ನೆರವೇರಿಸಲಿರುವರು .

ಅಂದು ಸಂಜೆ ೪.೩೦ ಗಂಟೆಗೆ ಸಭಾ ಕಾರ್ಯಕ್ರಮವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಹರಿಹರ ಯುವಕ ಸಂಘದ ಅಧ್ಯಕ್ಷ ಜಿ.ಕೆ.ಅವಿಲಾಷ್ ವಹಿಸಲಿರುವುರು ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ.ಎ.ಜೀವಿಜಯ ಮಾಜಿ ಜಿ.ಪಂ.ಅಧ್ಯಕ್ಷ ವಿ.ಎಂ.ವಿಜಯ, ವಿ.ಕೆ.ಉಣ್ಣಿಕೃಷ್ಣ, ಗ್ರಾ.ಪಂ.ಜಿ.ಕೆ.ವಿನೋದ್, ಕಾಫಿ ಬೆಳೆಗಾರರಾದ ಶಾರದ ಮಂದಣ್ಣ,ಕೆ.ಕೆ.ಅಯ್ಯಪ್ಪ, ಬಿ.ಎಸ್. ಪ್ರಮೋದ್ ಜೋಯಪ್ಪ ಆಗಮಿಸಲಿರುವರು.

ಸಂಜೆ ೬.೩೦ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಡೊಳ್ಳುಕುಣಿತ ಏರ್ಪಡಿಸಲಾಗಿದೆ. ಮಧ್ಯಾಹ್ನ ಹಾಗೂ ರಾತ್ರಿ ಅನ್ನದಾನ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.