ಕುಶಾಲನಗರ, ಫೆ. ೧೪ : ಕಾರಿನಲ್ಲಿ ಬೀಟೆ ಮರ ಸಾಗಿಸುತ್ತಿದ್ದ ಸಂದರ್ಭ ಪತ್ತೆ ಹಚ್ಚಿ ಸಾವಿರಾರು ಮೌಲ್ಯದ ಬೀಟೆಮರ ಮತ್ತು ಕಾರನ್ನು ವಶಪಡಿಸಿಕೊಳ್ಳುವಲ್ಲಿ ಕುಶಾಲನಗರ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಅರಣ್ಯ ತಪಾಸಣಾ ಗೇಟ್ ಬಳಿ ತೆರಳಿದ ಕಾರಿನ ಮೇಲೆ ಸಂಶಯಗೊAಡ ಗೇಟ್ ಸಿಬ್ಬಂದಿಗಳಾದ ಎಂ.ಎನ್. ಮೇದಪ್ಪ, ಆರ್.ಆರ್.ಟಿ. ಸಿಬ್ಬಂದಿ ಹೆಚ್.ವಿ. ಧರ್ಮರಾಜ್ ಕಾರನ್ನು ಅಡ್ಡಗಟ್ಟಿ ಪರಿಶೀಲನೆ ನಡೆಸಿದ ಸಂದರ್ಭ ಆರೋಪಿಗಳು ಪರಾರಿಯಾಗಿದ್ದಾರೆ. ಕಾರಿನ ಡಿಕ್ಕಿಯಲ್ಲಿ ಬೀಟೆ ಮರದ ತುಂಡುಗಳು ಪತ್ತೆಯಾಗಿವೆ.
ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ ಟಿ ಪೂವಯ್ಯ ಮಾರ್ಗದರ್ಶನದಲ್ಲಿ ಎಸಿಎಫ್ ಎ ಎ ಗೋಪಾಲ್, ಕುಶಾಲನಗರ ವಲಯ ಅರಣ್ಯ ಅಧಿಕಾರಿ ಕೆ ವಿ ಶಿವರಾಮ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಉಪವಲಯ ಅರಣ್ಯ ಅಧಿಕಾರಿಗಳಾದ ದೇವಯ್ಯ, ಮತ್ತಿತರರು ಪಾಲ್ಗೊಂಡಿದ್ದರು.