ಸಿದ್ದಾಪುರ, ಫೆ. ೧೪: ಸಿದ್ದಾ ಪುರದ ಶ್ರೀ ಮುತ್ತಪ್ಪ ದೇವಸ್ಥಾನದ ೪೮ನೇ ವಾರ್ಷಿಕೋತ್ಸವ ಮತ್ತು ಶ್ರೀ ಭಗವತಿಯ ೨೨ನೇ ವಾರ್ಷಿಕೋತ್ಸವ ತಾ. ೨೦ ರಿಂದ ೨೪ ರವರೆಗೆ ನಡೆಯಲಿದೆ. ತಾ. ೨೦ ರಂದು ಬೆಳಿಗ್ಗೆ ೬ ಗಂಟೆಗೆ ಪಂಚಗವ್ಯ ಪುಣ್ಯಾಹ, ೬.೩೦ಕ್ಕೆ ಗಣಪತಿ ಹೋಮ, ೧೦ ಗಂಟೆಗೆ ಧ್ವಜಾರೋಹಣ, ನವಕಲಶ ಅಭಿಷೇಕ ೧೦.೩೦ ರಿಂದ ೧೧.೩೦ ರವರೆಗೆ, ಮಧ್ಯಾಹ್ನ ೧ ಗಂಟೆಗೆ ಮಹಾಪೂಜೆ, ನಂತರ ತೀರ್ಥ ಪ್ರಸಾದ, ಸಂಜೆ ೬.೫೧ಕ್ಕೆ ಸಂದ್ಯಾದೀಪ, ರಂಗಪೂಜೆ, ಮಹಾಪೂಜೆ, ನಂತರ ತೀರ್ಥಪ್ರಸಾದ ಅನ್ನಸಂತರ್ಪಣೆ ನಡೆಯಲಿದೆ.
ತಾ. ೨೧ ರÀಂದು ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ, ೮.೩೦ಕ್ಕೆ ಚಂಡಿಕಾಹೋಮ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ತೀರ್ಥಪ್ರಸಾದ, ಮಧ್ಯಾಹ್ನ ೧ ಕ್ಕೆ ಅನ್ನಸಂತರ್ಪಣೆ, ಸಂಜೆ ೬.೩೦ಕ್ಕೆ ದೇವರ ಬಲಿ, ಮಹಾಪೂಜೆ, ತೀರ್ಥಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ. ತಾ. ೨೨ ರಂದು ಬೆಳಿಗ್ಗೆ ೬.೩೦ ಗಂಟೆಗೆ ಗಣಪತಿ ಹೋಮ, ೮ ರಿಂದ ೧೨ ರವರೆಗೆ ದುರ್ಗಾಪೂಜೆ, ಆಶ್ಲೇಷ ಬಲಿ, ನಾಗಹೋಮ, ಮಹಾಪೂಜೆ, ತೀರ್ಥಪ್ರಸಾದ, ಮಧ್ಯಾಹ್ನ ೧ಕ್ಕೆ ಅನ್ನಸಂತರ್ಪಣೆ, ಸಂಜೆ ೫.೩೦ಕ್ಕೆ ಕಾವೇರಿ ನದಿಯಲ್ಲಿ ದೇವಿಯ ಸ್ನಾನ ನಂತರ ರಾತ್ರಿ ೮ಕ್ಕೆ ದೇವಸ್ಥಾನದಲ್ಲಿ ದೇವಿಯ ನರ್ತನ, ರಾತ್ರಿ ೯.೩೦ಕ್ಕೆ ಮಹಾಪೂಜೆ, ತೀರ್ಥಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ.
ತಾ. ೨೩ ರಂದು ಬೆಳಿಗ್ಗೆ ೬ ಗಂಟೆಗೆ ಮಹಾಗಣಪತಿ ಹೋಮ, ಮಧ್ಯಾಹ್ನ ೧ಕ್ಕೆ ಅನ್ನಸಂತರ್ಪಣೆ, ಸಂಜೆ ೫ಕ್ಕೆ ಶ್ರೀ ಮುತ್ತಪ್ಪನನ್ನು ಮಲೆ ಇಳಿಸುವುದು, ಸಂಜೆ ೭ಕ್ಕೆ ಶಾಸ್ತಪ್ಪನ ವೆಳ್ಳಾಟಂ, ರಾತ್ರಿ ೮ಕ್ಕೆ ಗುಳಿಗನ ವೆಳ್ಳಾಟಂ, ರಾತ್ರಿ ೯ಕ್ಕೆ ವಸೂರಿಮಾಲ, ಕಾವೇರಿ ನದಿಗೆ ಸ್ನಾನಕ್ಕೆ ಹೊರಡುವುದು, ರಾತ್ರಿ ೯.೩೦ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ತಾ. ೨೪ ರಂದು ಪ್ರಾತಃಕಾಲ ೫ಕ್ಕೆ ಗುಳಿಗನ ತೆರೆ, ಬೆಳಗ್ಗೆ ೬.೩೦ಕ್ಕೆ ಶಾಸ್ತಪ್ಪನ ತೆರೆ, ಬೆಳಗ್ಗೆ ೭.೩೦ಕ್ಕೆ ತಿರುವಪ್ಪನ ಮುತ್ತಪ್ಪನ ತೆರೆ, ಬೆಳಿಗ್ಗೆ ೮ಕ್ಕೆ ಭಗವತಿ ತೆರೆ, ಬೆಳಿಗ್ಗೆ ೧೧ಕ್ಕೆ ವಿಷ್ಣುಮೂರ್ತಿ ತೆರೆ, ಮಧ್ಯಾಹ್ನ ೧ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.