ಕೂಡಿಗೆ, ಫೆ. ೧೪: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು-ದೊಡ್ಡತ್ತೂರು ಗ್ರಾಮ ವ್ಯಾಪ್ತಿಯಲ್ಲಿರುವ ಶ್ರೀ ಉದ್ಭವ ಗೌರಿ ಶಂಕರ ದೇವಸ್ಥಾನದಲ್ಲಿ ತಾ. ೧೮ ರ ಶಿವರಾತ್ರಿ ಹಬ್ಬ ಅಂಗವಾಗಿ ಶ್ರೀ ಸ್ವಾಮಿಗೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದು ದೇವಾಲಯ ಸಮಿತಿಯ ಆಡಳಿತ ಮಂಡಳಿ ತಿಳಿಸಿದೆ.

ಹಬ್ಬದ ಮುನ್ನ ದಿನ ೧೭ ರಂದು ಸಂಜೆ ೪ ಗಂಟೆಗೆ ಗಂಗಾ ಪೂಜೆ ಹಾಗೂ ವೀರಗಾಸೆ ಕುಣಿತ, ನಾದಸ್ವರ, ಗಣಪತಿ ಹೋಮ ನಂದಿ ಪೂಜೆ, ರಕ್ಷಬಂಧನ ಆರಾದನೆ ಕಲಶ ಸ್ಥಾಪನೆ, ದಿಗ್ ಬಲಿ ಪೂಜೆ, ಕ್ಷೀರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕಾರ್ಯ ನಡೆಯಲಿವೆ ಎಂದು ಸಮಿತಿಯ ಕಾರ್ಯದರ್ಶಿ ತಿಳಿಸಿದ್ದಾರೆ.