ಮುಳ್ಳೂರು, ಫೆ. ೧೩: ಸಮೀಪದ ಬ್ಯಾಡಗೊಟ್ಟ ಗ್ರಾ.ಪಂ.ವ್ಯಾಪ್ತಿಯ ಕ್ಯಾತೆ ಗ್ರಾಮದಲ್ಲಿರುವ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ತಾ. ೧೭ ಮತ್ತು ೧೮ ರಂದು ೩೧ನೇ ವರ್ಷದ ಪೂಜಾ ಮಹೋತ್ಸವ ನಡೆಯಲಿದೆ. ತಾ. ೧೭ರ ರಾತ್ರಿ ೭ ಗಂಟೆಯಿAದ ಶ್ರೀ ಮಲ್ಲಿಕಾರ್ಜುನಸ್ವಾಮಿಯ ಸನ್ನಿಧಾನದಲ್ಲಿ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಲಾಗುವುದು. ತಾ. ೧೮ರ ಶಿವರಾತ್ರಿ ದಿನದಂದು ಬೆಳಿಗ್ಗೆ ೮ ಗಂಟೆಯಿAದ ದೇವರ ಸನ್ನಿಧಿಯಲ್ಲಿ ಹೋಮ, ಅಭಿಷೇಕಗಳು ನೆರವೇರಲಿದ್ದು, ಮಧ್ಯಾಹ್ನ ೧ ಗಂಟೆ ನಂತರ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ.