ಕೂಡಿಗೆ, ಫೆ. ೧೩: ಕೂಡಿಗೆಯಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಆಟೋ ಹಾಸನ ಹೆದ್ದಾರಿಯ ಕೂಡ್ಲೂರು ಗ್ರಾಮದಲ್ಲಿ ಮುಗುಚಿ ಬಿದ್ದ ಪರಿಣಾಮ ಆಟೋದಲ್ಲಿದ್ದ ಪ್ರಯಾಣಿಕರಾದ ಕೆ.ಆರ್. ನಗರ ತಾಲೂಕಿನ ಕೊರಟಿಕೆರೆ ಗ್ರಾಮದ ಪಂಕಜಮ್ಮ (೫೫) ಎಂಬವರು ಮೃತಪಟ್ಟ ಘಟನೆ ನಡೆದಿದೆ. ಅವರ ಸಹೋದರಿ ಕೂಡಿಗೆಯ ಲೀಲಾವತಿ ಮತ್ತು ವಿಜಯಲಕ್ಷಿö್ಮ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ವಾರ ಮೃತಪಟ್ಟಿದ್ದ ತನ್ನ ಪಂಕಜಮ್ಮನ ಅಕ್ಕನ ತಿಥಿ ಕರ್ಮಾಂತ ರದ ಆಹ್ವಾನವನ್ನು ಕೂಡಿಗೆಯಲ್ಲಿರುವ ತನ್ನ ತಂಗಿಯರಾದ ಲೀಲಾವತಿ ಮತ್ತು ವಿಜಯಲಕ್ಷಿö್ಮ ಅವರಿಗೆ ನೀಡಲು ಬಂದಿದ್ದ ಪಂಕಜಮ್ಮ ಆಟೋದಲ್ಲಿ ಸಹೋದರಿಯರು ಹಾಗೂ ಮಗನೊಂದಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಕುಶಾಲನಗರ ಆರೋಗ್ಯ ಕೇಂದ್ರಕ್ಕೆ ಸಾಗಿಸುವ ಸಂದರ್ಭ ಪಂಕಜಮ್ಮ ಮೃತಪಟ್ಟಿದ್ದಾರೆ.

ಆಟೋ (ಕೆ.ಎ. ೧೨- ಬಿ ೬೧೧೨) ಚಾಲಕ ಅನೀಶ್ ವಿರುದ್ಧ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.