ಸೋಮವಾರಪೇಟೆ. ಫೆ. ೧೨: ಅವಿರತ ಶ್ರಮದಿಂದ ಪೋಲಿಯೋ ನಿರ್ಮೂಲನದಲ್ಲಿ ಯಶಸ್ಸು ಕಂಡಿರುವ ಅಂರ‍್ರಾಷ್ಟಿçÃಯ ರೋಟರಿ ಸಂಸ್ಥೆ, ರೋಟರಿ ಇಂಡಿಯಾ ಮಿಷನ್ ಮೂಲಕ ಭಾರತದಲ್ಲಿ ೨೦೨೮ರ ಸಮಯಕ್ಕೆ ಶೇ.೧೦೦ರ ಸಾಕ್ಷರತೆಯನ್ನು ಸಾಧಿಸಲು ಯೋಜನೆ ರೂಪಿಸಿದೆ ಎಂದು ರೋಟರಿ ೩೧೮೧ ಜಿಲ್ಲಾ ರಾಜ್ಯಪಾಲ ಪ್ರಕಾಶ್ ಕಾರಂತ್ ಹೇಳಿದರು.

ಇಲ್ಲಿನ ಸಂಕಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಟರಿ ಸಂಸ್ಥೆಯು ಪರಿಸರಕ್ಕೆ ಪೂರಕವಾದ ಯೋಜನೆಗಳು, ಸಮುದಾಯದ ಸೇವೆ, ಯುವಜನರ ಪ್ರಗತಿ ಹಾಗೂ ತಾಯಿ ಮಗುವಿನ ಆರೋಗ್ಯ ರಕ್ಷಣೆಗೆ ಸಂಬAಧಿಸಿದAತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರೊಂದಿಗೆ ೨೦೨೮ರ ಸಮಯಕ್ಕೆ ಭಾರತವನ್ನು ಶೇ. ೧೦೦ರ ಸಾರಕ್ಷತೆ ದೇಶವನ್ನಾಗಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಿದೆ ಎಂದರು.

ರೋಟರಿ ಜಿಲ್ಲೆಯಲ್ಲಿ ೮೭ ಕ್ಲಬ್‌ಗಳು ಕಾರ್ಯನಿರ್ವಹಿಸುತ್ತಿದ್ದು, ದತ್ತಿನಿಧಿ ಹೊಂದಿರುವ ಹಲವು ಆಸ್ಪತ್ರೆಗಳಲ್ಲಿ ಡಯಾಲಿಸಿಸ್, ಶಸ್ತçಚಿಕಿತ್ಸೆ, ತೀವ್ರನಿಗಾ ಘಟಕ ಉನ್ನತೀಕರಣಕ್ಕೆ ಸಂಸ್ಥೆ ಪ್ರಾಮಾಣಿಕವಾಗಿ ಸ್ಪಂದಿಸಿದೆ. ರಕ್ತನಿಧಿ ಕೇಂದ್ರ, ಕಣ್ಣಿನ ಆಸ್ಪತ್ರೆ, ಸ್ತನದ ಹಾಲಿನ ಬ್ಯಾಂಕ್, ಕಿವುಡ, ಮೂಕರ ಶಾಲೆ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ರೋಟರಿ ಸಂಸ್ಥೆಯ ಕಾರ್ಯಯೋಜನೆಗಳನ್ನು ಪ್ರಚುರಪಡಿಸಲು ಗ್ರಾಮೀಣ ಸೇವಾದಳವನ್ನು ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳಿಗೆ ಸೇವಾ ಮನೋಭಾವನೆ ಬೆಳೆಸುವ ದೃಷ್ಟಿಯಿಂದ ರೋಟರ‍್ಯಾಕ್ಟ್ ಮತ್ತು ಇಂರ‍್ಯಾಕ್ಟ್ ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ರೋಟರಿ ಜಿಲ್ಲೆಯಲ್ಲಿ ಒಟ್ಟು ೫೫೬ ಜನಪರ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಸೋಮವಾರಪೇಟೆ ರೋಟರಿ ಕೂಡ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಗೋಷ್ಠಿಯಲ್ಲಿ ರೋಟರಿ ಸಹಾಯಕ ರಾಜ್ಯಪಾಲ ಎಸ್.ಎಸ್. ಸತೀಶ್, ಅಧ್ಯಕ್ಷ ಎಚ್.ಸಿ. ಲೋಕೇಶ್, ವಲಯ ಸೇನಾನಿ ಎಂ.ಡಿ. ಲಿಖಿತ್, ಕಾರ್ಯದರ್ಶಿ ಆದರ್ಶ್ ತಮ್ಮಯ್ಯ ಇದ್ದರು.