*ಗೋಣಿಕೊಪ್ಪ, ಫೆ. ೧೨: ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.

ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಮುಕ್ಕಾಟಿರ ನೀತ್ ಅಯ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಏಳಿಗೆಗೆ ಶ್ರಮಿಸಿದ ಚಿಮ್ಮಚ್ಚಿರ ಪವಿತ ರಜನ್, ನರೇನ್ ಕಾರ್ಯಪ್ಪ, ಕುಮಾರ್ ಕೆ.ಎಸ್, ಶಶಿಕಾಂತ್, ಭರತ್ ಎನ್. ಆಚಾರ್ಯ, ಯಶಸ್ವಿನಿ, ಪೆಮ್ಮಯ್ಯ ಎ.ಎನ್, ಆಶಾ ಜೈನ್ ಅವರುಗಳನ್ನು ಸನ್ಮಾನಿಸಲಾಯಿತು.

ನಿಕಟಪೂರ್ವ ಅಧ್ಯಕ್ಷ ಅಪ್ಪಂಡೇರAಡ ದಿನೇಶ್, ನೂತನ ಆಡಳಿತ ಮಂಡಳಿಯ ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ, ಕೋಶಾಧಿಕಾರಿ ಬೊಜ್ಜಂಗಡ ಚೆಂಗಪ್ಪ, ಉಪಾಧ್ಯಕ್ಷರುಗಳಾದ ಹೆಚ್.ಆರ್. ಸತೀಶ್, ಟಿ.ಜೆ. ಆಂಟೋನಿ, ಎ.ಎಂ. ಬೋಪಣ್ಣ, ಪಿ.ಪಿ. ಬಿದ್ದಪ್ಪ, ಕೆ.ಯು ತಿಮ್ಮಯ್ಯ, ಪಿ.ಪಿ. ಬೋಪಣ್ಣ, ಜಂಟಿ ಕಾರ್ಯದರ್ಶಿ ಟಿ.ಎಸ್. ಸುಜಿತ್, ನಿರ್ದೇಶಕರುಗಳಾದ ಎಂ.ಪಿ. ಬೋಪಣ್ಣ, ಪಿ.ಬಿ. ಗೌತಮ್, ಸಿ.ಡಿ. ಮುತ್ತಪ್ಪ, ಜಿ.ಪಿ. ಸ್ವಾಮಿ, ಟಿ.ಜಿ. ಲಿಖಿತ್‌ಕುಮಾರ್, ಮಾಜಿ ಅಧ್ಯಕ್ಷರುಗಳಾದ ವನಿತ್‌ಕುಮಾರ್, ಕಿರಣ್ ಬಿ.ಇ. ಸೇರಿದಂತೆ ಜೆ.ಸಿ.ಐ ಸದಸ್ಯರುಗಳು ಇದ್ದರು.