ಕುಶಾಲನಗರ, ಫೆ. ೧೨: ಕುಶಾಲ ನಗರದ ಬಾಪೂಜಿ ಬಡಾವಣೆಯಲ್ಲಿ ಶ್ರೀ ಯೋಗಿ ನಾರಾಯಣ ಬಲಿಜ ಸಂಘದ ನೂತನ ಕಚೇರಿಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಸಂಘದ ಅಧ್ಯಕ್ಷ ಆರ್.ಬಾಬು ರವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳೊಂದಿಗೆ ಕಚೇರಿ ಉದ್ಘಾಟಿಸಲಾಯಿತು.

ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಎಸ್. ನಿರಂಜನ್, ಸಂಘದ ಉಪಾಧ್ಯಕ್ಷ ಎಂ.ಆರ್. ಗಣೇಶ್, ಸಹ ಕಾರ್ಯದರ್ಶಿ ಟಿ.ಎನ್. ಜಯರಾಮ್, ಖಜಾಂಚಿ ಟಿ.ಪಿ. ಸತೀಶ್, ನಿರ್ದೇಶಕ ಸವಿತಾ ದಯಾನಂದ್, ಟಿ.ಆರ್. ತುಳಸಿ ಮತ್ತಿತರರು ಇದ್ದರು.