ಮಡಿಕೇರಿ, ಫೆ. ೧೩: ತಾ. ೬ ರಿಂದ ಗ್ರಾಮ ಪಂಚಾಯತ್ ನೌಕರರ ಹೋರಾಟ ನಡೆದು, ನೌಕರರ ಮೂಲಭೂತ ಬೇಡಿಕೆಗಳನ್ನು ಈಡೇರಿಸಿ ಆದೇಶ ಮಾಡುವ ಕುರಿತು ಸರ್ಕಾರ ಘೋಷಣೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ಪಂಚಾಯತ್ ನೌಕರರ ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ.
ತಾ. ೧೪ ರಂದು ನಡೆಯುತ್ತಿರುವ ಹೋರಾಟಕ್ಕೂ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘಕ್ಕೂ ಯಾವುದೇ ಸಂಬAಧ ಇಲ್ಲ ಮತ್ತು ನಮ್ಮ ಶ್ರೇಯೋಭಿವೃದ್ಧಿ ಸಂಘಟನೆಯಿAದ ತಾ. ೧೪ ರಿಂದ ಯಾವುದೇ ಹೋರಾಟ ಮುಷ್ಕರ ನಡೆಯುತ್ತಿಲ್ಲ ಎಂದು ಸಂಘದ ಪ್ರಕಟಣೆ ತಿಳಿಸಿದೆ.