ಚೆಟ್ಟಳ್ಳಿ, ಫೆ. ೧೩: ಬಾಳುಗೋಡು ಫೆಡರೇಶನ್ ಆಫ್ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಮಾಸಿಕ ಸಭೆ ಅಧ್ಯಕ್ಷ ಬಲ್ಲಣಮಾಡ ರೀಟಾ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಚೇಂದAಡ ಸುಮಿ ಸುಬ್ಬಯ್ಯ ಪ್ರಾರ್ಥಿಸಿ, ಅಧ್ಯಕ್ಷೆ ರೀಟಾ ಅಪ್ಪಯ್ಯ ಸ್ವಾಗತಿಸಿದರು. ಕಾರ್ಯದರ್ಶಿ ಚೇಂದAಡ ಮೀನಾ ಸುಬ್ಬಯ್ಯ ವರದಿ ವಾಚಿಸಿ, ಲೆಕ್ಕ ಪತ್ರವನ್ನು ಖಜಾಂಚಿ ಕಳ್ಳಿಚಂಡ ಅಕ್ಕಮ್ಮ ಓದಿದರು.
ಸನ್ಮಾನ : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಕೂಟದ ಮಾಜಿ ಅಧÀ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ ಹಾಗೂ ಕೂಟದ ಪದಾಧಿಕಾರಿಗಳು ಗೌರವಿಸಿದರು. ಸಹ ಕಾರ್ಯದರ್ಶಿ ಮುಳ್ಳಂಡ ಶೋಭಾ ಚಂಗಪ್ಪ ರಾಣಿ ಮಾಚಯ್ಯ ಅವರ ಕಿರುಪರಿಚಯ ಓದಿದರು. ಈ ಬಾರಿ ಕೊಡಗಿನ ಸಂಸ್ಕೃತಿ, ಆಚಾರ ವಿಚಾರವನ್ನು ದೇಶದುದ್ದಕ್ಕೂ ಪರಿಚಯಿಸಿದ ರಾಣಿ ಮಾಚಯ್ಯ ಅವರಿಗೆ ಪದ್ಮಶ್ರೀ ನೀಡಿರುವುದು ಹೆಮ್ಮೆಯ ವಿಚಾರವೆಂದು ಕೂಟದ ಸದಸ್ಯೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ತಿಳಿಸಿದರು. ಈ ಪ್ರಶಸ್ತಿ ನನಗೆ ಮಾತ್ರವಲ್ಲ ನನ್ನೊಂದಿಗೆ ಕೈಜೋಡಿಸಿದಂತಹ ಸಾವಿರಾರು ಹೆಣ್ಣು ಮಕ್ಕಳಿಗೂ, ಅವರ ಪೋಷಕರಿಗೂ ಸಲ್ಲಬೇಕೆಂದು ಸನ್ಮಾನ ಸ್ವೀಕರಿಸಿ ರಾಣಿ ಮಾಚಯ್ಯ ಮಾತನಾಡಿದರು.
ನಂತರದಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ರಾಣಿ ಮಾಚಯ್ಯ ಅವರು ಬಹುಮಾನ ವಿತರಿಸಿದರು. ಉಪಾಧ್ಯಕ್ಷೆ ಮೂವೆರ ಬೊಳ್ಳು ಕುಟ್ಟಪ್ಪ ವಂದಿಸಿ ರಾಷ್ಟçಗೀತೆಯೊಂದಿಗೆ ಮುಕ್ತಾಯಗೊಂಡಿತು.
ಈ ಸಂದರ್ಭ ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.