ಮಡಿಕೇರಿ, ಫೆ. ೧೨: ಧರ್ಮ, ಜನಾಂಗ, ವರ್ಣ, ಸಿದ್ಧಾಂತವೆಲ್ಲವನ್ನು ಬದಿಗೊತ್ತಿ ಪರಸ್ಪರ ಗೌರವಿಸುವುದ ರಿಂದ ಪ್ರಪಂಚದಲ್ಲಿ ಶಾಂತಿ ನೆಲೆಯೂರಿ ಮೂರನೇ ಜಾಗತಿಕ ಯುದ್ಧವನ್ನು ತಡೆಯಬಹುದು ಎಂದು ವಿವಿಧ ಕ್ಷೇತ್ರದ ಪ್ರಮುಖರು ಅಭಿಮತ ವ್ಯಕ್ತಪಡಿಸಿದರು.

ಅಹ್ಮದಿಯಾ ಮುಸ್ಲಿಂ ಜಮಾಅತ್ ವತಿಯಿಂದ ‘ಪರಮಾಣು ಯುದ್ಧದ ವಿನಾಶಕಾರಿ ಪರಿಣಾಮಗಳು ಮತ್ತು ಸಂಪೂರ್ಣ ನ್ಯಾಯಕ್ಕಾಗಿ ನಿರ್ಣಾಯಕ ಅಗತ್ಯ’ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ಗಾಳಿಬೀಡುವಿನ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಭಾಷಣಕಾರರಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿ, ಟರ್ಕಿಯಲ್ಲಿ ಸಂಭವಿಸಿದ ಭೂಕಂಪ ಎಲ್ಲಾ ವರ್ಗದ ಜನರನ್ನು ಚಿಂತಾ ಕ್ರಾಂತಗೊಳಿಸಿದೆ. ಮಾನವೀಯತೆ ಮೂಡಿಸಿದೆ. ಸಹಾಯ ಮಾಡ ಬೇಕೆಂಬ ಮನಸು ಜನರು ಮಾಡುತ್ತಿ ದ್ದಾರೆ. ಸಮಾಜವನ್ನು ಜಾಗೃತಗೊಳಿಸಿ ಮನಸನ್ನು ಬೆಸೆಯುವ ಕೆಲಸ ನಮ್ಮಿಂದಾಗಬೇಕು. ನಾನು ಎಂಬುದು ಸದ್ಯದ ಕಾಲಘಟ್ಟದಲ್ಲಿ ಶೂನ್ಯವಾಗಿದೆ. ಜ್ಞಾನದಿಂದ ಬದಲಾವಣೆ ತರಬಹು ದಾಗಿದೆ. ಎಲ್ಲಾ ಧರ್ಮವೂ ಶಾಂತಿ, ಅಹಿಂಸೆಯನ್ನು ಪ್ರತಿಪಾದಿಸುತ್ತದೆ. ಇದನ್ನು ಅರಿತು ನಾವು ಮುನ್ನಡೆಯಬೇಕು. ಭಯೋತ್ಪಾದಕತ್ವ ಸಮಾಜಕ್ಕೆ ಒಳಿತಲ್ಲ್ಲ, ಈ ನಿಟ್ಟಿನಲ್ಲಿ ಶಾಂತಿಯುತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ತೊಡಬೇಕೆಂದು ಕರೆ ನೀಡಿದ ಹುಟ್ಟಿಕೊಂಡವು. ಆದರೆ, ಧರ್ಮದ ನೈಜಾಂಶ ಹಾದಿ ತಪ್ಪಿದೆ. ನ್ಯೂಕ್ಲಿಯರ್ ಬಾಂಬ್ ಸಿಡಿದರೆ ಇಡೀ ಮನುಕುಲವೇ ೯೦ ಸೆಕೆಂಡ್‌ನಲ್ಲಿ ನಾಶ ವಾಗುತ್ತದೆ. ಇದನ್ನೆಲ್ಲ ಮನಗಂಡು ಸಮಾಜದಲ್ಲಿ ಶಾಂತಿ ನೆಲೆಸಲು ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.

ವಕೀಲ ಮತ್ತು ಲೇಖಕ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಮಾತನಾಡಿ, ಮಾಲಿನ್ಯ, ಅರಣ್ಯ, ಜೀವಸಂಕುಲ ನಾಶ ಪರಮಾಣು ಯುದ್ಧಕ್ಕೆ ಸಮಾನವಾಗಿದೆ. ಯುದ್ಧ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕ್ಷÄಲ್ಲಕ ವಿಷಯಗಳಿಗೆ, ಪ್ರತಿಷ್ಠೆಗೆ ಒಳಗಾಗಿ ಹೊಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ವಿಚಾರ ಸಂಕಿರಣಗಳು ಶಾಂತಿಯ ಕಿರಣ ಬೀರಬೇಕು. ಧರ್ಮ, ಜನಾಂಗ ಗಳನ್ನು ಪರಸ್ಪರ ಗೌರವಿಸುವ ಮನೋಭಾವ ಬೆಳೆಸಿಕೊಂಡರೆ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುವುದಿಲ್ಲ ಎಂದರು.

ಅಹ್ಮದಿಯಾ ಮುಸ್ಲಿಂ ಜಮಾಅತ್ ಮಿಷನರಿಯ ಜನಾಬ್ ಎಸ್.ಬಿ. ಹುಸಾಮ್ ಅಹ್ಮದ್ ಮಾತನಾಡಿ, ಅಪಾಯಕಾರಿ ಸನ್ನಿವೇಶ ದಲ್ಲಿ ನಾವು ಸಿಲುಕಿಕೊಂಡಿದ್ದೇವೆ. ಇದರ ಪರಿಣಾಮ ಇನ್ನೂ ನಮಗೆ ತಿಳಿದಿಲ್ಲ. ಲೋಕದಲ್ಲಿ ಶಾಂತಿ ನೆಲೆಸಬೇಕಾದರೆ ನ್ಯಾಯಪಾಲನೆ ಯಾಗಬೇಕು ಎಂದು ತಿಳಿಸಿದರು.

ಮಡಿಕೇರಿ ಬ್ರೆöÊನೋಬ್ರೇನ್ ಮುಖ್ಯಸ್ಥೆ ಎಂ. ಕವಿತಾ ಕರುಂಬಯ್ಯ ಮಾತನಾಡಿ, ಮಕ್ಕಳಲ್ಲಿ ದೇಶಪ್ರೇಮ ಮೂಡಿಸುವ ಕೆಲಸವಾಗಬೇಕು. ಶಿಕ್ಷಣವಂತರಾಗಿ ಮಾಡಿ ಸತ್ಪçಜೆಯನ್ನು ರೂಪಿಸುವ ಜವಾಬ್ದಾರಿ ಪೋಷಕರದ್ದು ಹಾಗೂ ಶಿಕ್ಷಕರದ್ದಾಗಿದೆ. ಯುದ್ಧ ಇಲ್ಲದ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಶಿಕ್ಷಣದಿಂದ ಶಾಂತಿಯ ತಳಹದಿಯನ್ನು ನಿರ್ಮಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಘಟನೆಯ ಮಡಿಕೇರಿಯ ಅಧ್ಯಕ್ಷ ಜಿ.ಎಂ.ಮೊಹಮ್ಮದ್ ಷರೀಫ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಂತಿ ಸಮಾಜ ನಿರ್ಮಾಣದ ಸಲುವಾಗಿ ಸಂಘಟನೆ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಆರ್ಥಿಕ ಸಮಾನತೆ, ಬಡತನ ನಿರ್ಮೂಲನೆ, ದೇಶದ ಏಳಿಗೆ, ಉಗ್ರಗಾಮಿತ್ವ ತೊಡೆದು ಹಾಕುವುದು ನಮ್ಮ ಧ್ಯೇಯವಾಗಿದೆ. ೩ನೇ ಮಹಾಯುದ್ಧದಂತಹ ಸನ್ನಿವೇಶ ಸೃಷ್ಟಿಯಾಗಿ ಪರಮಾಣುಗಳ ಬಳಕೆಯಾದರೆ ಮಾನವ ಹಾಗೂ ಜೀವ ಸಂಕುಲ ಸರ್ವನಾಶವಾಗುತ್ತದೆ. ಇದನ್ನು ತಡೆಯುವ ಕೆಲಸವಾಗ ಬೇಕೆಂದು ತಿಳಿಸಿದರು. ಕಾರ್ಯಕ್ರಮ ದಲ್ಲಿ ವಿವಿಧ ಸಂಘ, ಸಂಸ್ಥೆಗಳ ಪ್ರಮುಖರು, ವಿಚಾರವಾದಿಗಳು ಭಾಗವಹಿಸಿದ್ದರು.