(ವರದಿ: ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಫೆ. ೧೨: ನರಭಕ್ಷಕ ಹುಲಿಯ ಬಾಯಿಗೆ ಸಿಲುಕಿ ಕಾರ್ಮಿಕ ಯುವಕನೋರ್ವ ಮೃತಪಟ್ಟ ಘಟನೆ ದ. ಕೊಡಗಿನ ಗಡಿಭಾಗವಾದ ಚೂರಿಕಾಡು ಬಳಿ ನಡೆದಿದೆ. ಪಂಚವಳ್ಳಿ ಗ್ರಾಮದ ಕಾರ್ಮಿಕ ಚೇತನ್ (೧೮) ಎಂಬಾತನೇ ಹುಲಿ ದಾಳಿಯಿಂದ ಸಾವನ್ನಪ್ಪಿದ ವನಾಗಿದ್ದಾನೆ.

ಭಾನುವಾರ ಮಧ್ಯಾಹ್ನದ ವೇಳೆ ತನ್ನ ದೈನಂದಿನ ಕಾಫಿ ಕೆಲಸದಲ್ಲಿ ತೊಡಗಿದ್ದ ಸಂದರ್ಭ ತೋಟದಲ್ಲಿದ್ದ ನರಭಕ್ಷಕ ಹುಲಿಯು ಆತನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.

ಚೇತನ್ ತಂದೆ ಕಾರ್ಮಿಕ ಮಧು ತನ್ನ ಮಗನನ್ನು ಹುಡುಕಿಕೊಂಡು ಬರುತ್ತಿದ್ದ ವೇಳೆ ತೋಟದ ಮಾರ್ಗದಲ್ಲಿ ಹುಲಿಯು ಮತ್ತೆ ಪ್ರತ್ಯಕ್ಷಗೊಂಡಿದ್ದು, ಮಧುವಿನ ಮೇಲೂ ದಾಳಿ ಮಾಡಿ ಹೊಟ್ಟೆಯ ಭಾಗಕ್ಕೆ ಗಾಯಗೊಳಿಸಿದೆ. ಈ ವೇಳೆ ಮಧು ಜೋರಾಗಿ ಕಿರುಚಿಕೊಂಡಿದ್ದು, ಹುಲಿಯು ಮತ್ತೆ ಕಾಫಿ ತೋಟದಲ್ಲಿ ಮರೆಯಾಗಿದೆ.

ವಿಷಯ ತಿಳಿದ ಕಾಫಿ ತೋಟದ ಮಾಲೀಕರು ಸಂಬAಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಒದಗಿಸಿದ್ದಾರೆ.

ನಾಗರಹೊಳೆ ರಾಷ್ಟಿçÃಯ ಉದ್ಯಾನವನಕ್ಕೆ ಹೊಂದಿಕೊAಡಿರುವ ಪ್ರದೇಶದ ಅಂಚಿನಲ್ಲಿ ಈ ಘಟನೆ ನಡೆದಿದೆ.

ಸುದ್ದಿ ತಿಳಿದ ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಅರಣ್ಯ ಇಲಾಖೆಯ ಎಸಿಎಫ್ ಗೋಪಾಲ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಾಹಿತಿ ತಿಳಿದ ಕೆ. ಬಾಡಗ ಗ್ರಾಮ ಪಂಚಾಯಿತಿ ಸದಸ್ಯರಾದ ಮುಕ್ಕಾಟಿರ ರಿತೇಶ್ ಬಿದ್ದಪ್ಪ ಗ್ರಾಮದ ಹಲವು ಪ್ರಮುಖರೊಂದಿಗೆ ಭೇಟಿ ನೀಡಿ ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಒಂದು ವರ್ಷದ ಹಿಂದೆ ಬಿಟ್ಟಂಗಾಲ ಸಮೀಪದ ರುದ್ರಗುಪ್ಪೆ ಎಂಬಲ್ಲಿ ಕಾರ್ಮಿಕನೊರ್ವನನ್ನು ನರಭಕ್ಷಕ ಹುಲಿಯು ಕೊಂದು ಹಾಕಿದ ಘಟನೆ ಜನಮನದಲ್ಲಿ ಮಾಸುವ ಮುನ್ನವೇ ಮತ್ತೊಂದು ಘಟನೆ ದ. ಕೊಡಗಿನಲ್ಲಿ ಮರುಕಳಿಸಿರುವುದು ನಾಗರಿಕರನ್ನು ಆತಂಕಕ್ಕೀಡುಮಾಡಿದೆ.

ಸ್ಥಳದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷರಾದ ಕಳ್ಳಿಚಂಡ ಧನು, ದೇಯಂಡ ಜಯರಾಮನ್, ಬಿಜೆಪಿ ಶಕ್ತಿ ಕೇಂದ್ರದ ಪೆಮ್ಮಣಮಾಡ ನವೀನ್, ಕಳ್ಳಂಗಡ ಸೌರಬ್,ಬೊಳ್ಳೆರ ವಿನಯ್, ಮುಕ್ಕಾಟಿರ ರಿತೇಶ್ ಬಿದ್ದಪ್ಪ, ಚೆಪ್ಪುಡೀರ ಬೋಜ, ನೆಲ್ಲಿರ ಪೂಣಚ್ಚ ಸೇರಿದಂತೆ ಅನೇಕ ಪ್ರಮುಖರು ಎಸಿಎಫ್ ಗೋಪಾಲ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ದ. ಕೊಡಗಿನ ವಿವಿಧ ಭಾಗದಲ್ಲಿ ಹುಲಿಯು ರೈತರ ಕೊಟ್ಟಿಗೆ ಹಾಗೂ ಭತ್ತದ ಗದ್ದೆಗಳ

(ಮೊದಲ ಪುಟದಿಂದ) ಬಳಿ ಕಟ್ಟಿರುವ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಿದೆ.

ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷö್ಯ ತೋರಿದ ಪರಿಣಾಮ ಇದೀಗ ಹುಲಿಯು ಮಾನವನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ ಎಂದು ಇಲ್ಲಿನ ನಾಗರಿಕರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೈಸೊಡ್ಲುರು ಗ್ರಾಮದ ಕೆ. ಬಿದ್ದಪ್ಪ ಎಂಬವರಿಗೆ ಸೇರಿದ ಗಬ್ಬದ ಹಸು ಹುಲಿ ದಾಳಿಗೆ ಬಲಿಯಾಗಿದೆ.

ಮುಂಜಾನೆಯ ವೇಳೆ ಕೊಟ್ಟಿಗೆಯಲ್ಲಿ ಕಟ್ಟಲಾಗಿದ್ದ ಗಬ್ಬದ ಹಸುವನ್ನು ಹಹುಲಿ ಕೊಂದು ಹಾಕಿದೆ.

ಶ್ರೀಮಂಗಲ ವಲಯ ಅರಣ್ಯದ ಅಧಿಕಾರಿಗಳು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.