ಗೋಣಿಕೊಪ್ಪ ವರದಿ, ಫೆ. ೧೨ : ಎತ್ತ್ ಪೋರಾಟದೊಂದಿಗೆ ಪಯ್ಯಾವೂರ್ ಸ್ಥಾನಕ್ಕೆ ತೆರಳಿದ ಕೊಡಗಿನ ಭಕ್ತರು ಭಾನುವಾರ ದೇವಸ್ಥಾನಕ್ಕೆ ತಲುಪಿದರು.
ಪಯ್ಯಾವೂರ್ ಈಶ್ವರನ ಹಬ್ಬದ ಆಚರಣೆಯ ನೈವೇದ್ಯಕ್ಕೆ ಎತ್ತುಗಳಲ್ಲಿ ಅಕ್ಕಿ ಹೊತ್ತು ಪಾದಯಾತ್ರೆ ಮೂಲಕ ತೆರಳಿದ ಕೊಡಗಿನ ತಕ್ಕರಾಗಿ ಜವಾಬ್ದಾರಿ ನಿಭಾಯಿಸುವ ಚೆಯ್ಯಂಡಾಣೆ ಗ್ರಾಮದ ಮುಂಡಿಯೋಳAಡ ಮತ್ತು ಬೊವ್ವೇರಿಯಂಡ ಕುಟುಂಬಸ್ಥರು ಭಾನುವಾರ ದೇವಸ್ಥಾನ ಪ್ರವೇಶಿಸಿದರು.
ಚೆಯ್ಯಂಡಾಣೆ ಗ್ರಾಮದಿಂದ ಅರಣ್ಯದ ಮೂಲಕ ಸುಮಾರು ೬೦ ಕಿ.ಮೀ. ಕಾಲ್ನಡಿಗೆಯಲ್ಲಿ ತೆರಳಿ ೧೬ ಕೆ.ಜಿ ಅಕ್ಕಿ ಪಯ್ಯಾವೂರ್ ಹಬ್ಬಕ್ಕೆ ತಲುಪಿಸುವ ಪದ್ದತಿಯನ್ನು ನಡೆಸಿಕೊಡಲಾಯಿತು. ಸುಮಾರು ೨೦ ಭಕ್ತರು ಕಾಲ್ನಡಿಗೆಯಲ್ಲಿ ಪಾಲ್ಗೊಂಡರು.