ಚೆಯ್ಯಂಡಾಣೆ, ಫೆ. ೧೨: ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹುತಾತ್ಮ ಯೋಧ ಅಲ್ತಾಫ್ ಅಹ್ಮದ್ ಸ್ಮರಣಾರ್ಥ ಆಯೋಜಿಸಿರುವ ಎಡಪಾಲ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.

ಕ್ರಿಕೆಟ್ ಪಂದ್ಯಾಟಕ್ಕೆ ನಿವೃತ್ತ ಕೇಂದ್ರ ಮೀಸಲು ಪೊಲೀಸ್ ಪಡೆಯ ಅಧಿಕಾರಿ ಉಮ್ಮರ್ ಎಡಪಾಲ ಬ್ಯಾಟಿಂಗ್ ಮಾಡುವುದರ ಮೂಲಕ ಪಂದ್ಯಾಟ ಉದ್ಘಾಟಿಸಿ ಮಾತನಾಡಿ, ಇದು ವೀರ ಯೋಧ ಅಲ್ತಾಫ್ ಅಹ್ಮದ್ ಹೆಸರಿನಲ್ಲಿ ನಡೆಯುತ್ತಿರುವ ಕ್ರೀಡಾಕೂಟ ಶಿಸ್ತು, ಸಮಯಪಾಲನೆ, ಎಲ್ಲರು ಪಾಲಿಸಬೇಕು. ಕ್ರೀಡಾಪಟುಗಳು ಕ್ರೀಡೆಯಲ್ಲಿ ಚೆಯ್ಯಂಡಾಣೆ, ಫೆ. ೧೨: ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹುತಾತ್ಮ ಯೋಧ ಅಲ್ತಾಫ್ ಅಹ್ಮದ್ ಸ್ಮರಣಾರ್ಥ ಆಯೋಜಿಸಿರುವ ಎಡಪಾಲ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.

ಕ್ರಿಕೆಟ್ ಪಂದ್ಯಾಟಕ್ಕೆ ನಿವೃತ್ತ ಕೇಂದ್ರ ಮೀಸಲು ಪೊಲೀಸ್ ಪಡೆಯ ಅಧಿಕಾರಿ ಉಮ್ಮರ್ ಎಡಪಾಲ ಬ್ಯಾಟಿಂಗ್ ಮಾಡುವುದರ ಮೂಲಕ ಪಂದ್ಯಾಟ ಉದ್ಘಾಟಿಸಿ ಮಾತನಾಡಿ, ಇದು ವೀರ ಯೋಧ ಅಲ್ತಾಫ್ ಅಹ್ಮದ್ ಹೆಸರಿನಲ್ಲಿ ನಡೆಯುತ್ತಿರುವ ಕ್ರೀಡಾಕೂಟ ಶಿಸ್ತು, ಸಮಯಪಾಲನೆ, ಎಲ್ಲರು ಪಾಲಿಸಬೇಕು. ಕ್ರೀಡಾಪಟುಗಳು ಕ್ರೀಡೆಯಲ್ಲಿ ಮೈದಾನ ಇಲ್ಲದ ಕಾರಣ ಚೆಯ್ಯಂಡಾಣೆಯಲ್ಲಿ ಈ ಕ್ರೀಡಾಕೂಟ ಆಯೋಜಿಸಲಾಗಿದೆ. ಮುಂದಿನ ಕ್ರೀಡಾಕೂಟ ಎಡಪಾಲದಲ್ಲೆ ನಡೆಯುವಂತೆ ಅಲ್ಲಿನ ಮೈದಾನದ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದೆಂದು ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯೆ ಪೆಮ್ಮಂಡ ಕೌಶಿ ಕಾವೇರಮ್ಮ ಮಾತನಾಡಿದರು.

ಇ.ಪಿ.ಎಲ್ ಸ್ಥಾಪಕ ಅಧ್ಯಕ್ಷ ಹನೀಫ್, ಮುಸ್ಲಿಂ ಕಪ್ ಸ್ಥಾಪಕಾಧ್ಯಕ್ಷ ರಶೀದ್ ಕುಪ್ಪೋಡಂಡ, ಗ್ರಾಮ ಪಂಚಾಯಿತಿ ಸದಸ್ಯ ಮಮ್ಮದ್, ಮಕ್ಕಳ ತಜ್ಞ ಇಬ್ರಾಹಿಂ ಬಾದ್ ಶಾ, ರಫೀಕ್, ಮಜೀದ್, ಪತ್ರಕರ್ತರಾದ ಅಶ್ರಫ್, ಇಪಿಎಲ್ ಅಧ್ಯಕ್ಷ ಶಂಸುದ್ದಿನ್, ರಿಯಾಜ್ ಕೂತಂಬಟ್ಟಿ ಮತಿತ್ತರರು ಇದ್ದರು.