ವೀರಾಜಪೇಟೆ, ಫೆ. ೧೩: ಇತ್ತೀಚೆಗೆ ಮೈಸೂರಿನಲ್ಲಿ ನಡೆದ ನಕ್ಷತ್ರ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮ್ಯಾತ್ ಜೂನಿಯರ್ ಮೆಂಟಲ್ ಅರಿಥ್‌ಮೆಟಿಕ್ ಚಾಂಪಿಯನ್‌ಶಿಪ್ ೨೦೨೨ ರ ಜೂನಿಯರ್ ವಿಭಾಗದಲ್ಲಿ ನ್ಯಾಷನಲ್ ಚಾಂಪಿಯನ್ ಶಿಪ್ ಪ್ರಶಸ್ತಿ ಗೆದ್ದುಕೊಂಡ ೮ ವರ್ಷದ ಅರ್ಜುನ್ ಮಂದಣ್ಣ ಅವರಿಗೆ ರಾÀಜೀವ್ ಗಾಂಧಿ ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿ ಡಾ. ಕೆ.ಸಿ. ಬೆಳ್ಳಿಯಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಈ ವೇಳೆ ಪ್ರಿನ್ಸಿಪಾಲ್ ಡಾ. ಶ್ರೀಕಾಂತ್ ಗುಪ್ತ, ಡಾ. ಆಶಾ ಕೃಪಾ ಇದ್ದರು. ಈತ ಕೊಡಗಿನ ಕುಟ್ಟ ನಿವಾಸಿ ಮುಕ್ಕಾಟೀರ ಗಣಪತಿ ಮತ್ತು ಕಾವೇರಿ ಬೋಪಣ್ಣ ಅವರ ಪುತ್ರ.