ಮುಳ್ಳೂರು, ಫೆ. ೧೩: ಶನಿವಾರಸಂತೆ ಶ್ರೀಮಂಜುನಾಥೇಶ್ವಸ್ವಾಮಿ ಪಾದಯಾತ್ರೆ ಸಮಿತಿಯಿಂದ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ೨೫ನೇ ವರ್ಷದ ಪಾದಯಾತ್ರೆ ಕಾರ್ಯಕ್ರಮ ತಾ. ೧೫ ರಿಂದ ೧೮ ರವರೆಗೆ ನಡೆಯಲಿದೆ ಎಂದು ಪಾದಯಾತ್ರೆ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ತಾ.೧೫ ರಂದು ಪಾದಯಾತ್ರಿಗಳು ಬೆಳಿಗ್ಗೆ ೮.೩೦ ರೊಳಗೆ ಶನಿವಾರಸಂತೆ ಮುಖ್ಯರಸ್ತೆಯಲ್ಲಿರುವ ಶ್ರೀ ಗಣಪತಿ ದೇವಾಲಯಕ್ಕೆ ಬಂದು ಶ್ರೀ ವಿನಾಯಕ ಸ್ವಾಮಿಗೆ ಪೂಜೆ ಸಲ್ಲಿಸಿ ಬಳಿಕ ೯ ಗಂಟೆಯಿAದ ಪಾದಯಾತ್ರೆ ಚಾಲನೆಗೊಳ್ಳಲಿದ್ದು, ಶನಿವಾರಸಂತೆ, ಚಂಗಡಹಳ್ಳಿ, ಕೂಡುರಸ್ತೆ, ವಣಗೂರು, ಬಿಸ್ಲೆ, ಸುಬ್ರಹ್ಮಣ್ಯ ಮಾರ್ಗವಾಗಿ ಕಡಬ ರಸ್ತೆ, ಮಾರ್ದಾಳ, ಇಂಜಿಲAಪಾಡಿ ಹೊಳೆ, ಕೊಕ್ಕಡ, ಸೌತಡ್ಕ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ತಲುಪುತ್ತಾರೆ ಎಂದು ಪಾದಯಾತ್ರೆ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಎ.ಡಿ.ಮೋಹನ್ಕುಮಾರ್ (೯೪೪೮೯೧೯೫೧೮) ಸಿ.ವಿ.ಜಯಪ್ಪ, (೯೪೮೦೭೦೧೨೩೮) ಸಂಪರ್ಕಿಸಲು ಕೋರಿದೆ.