ಸೋಮವಾರಪೇಟೆ, ಫೆ. ೧೦: ಸೇವೆಯ ಮೂಲಕ ಸಮಾಜದಲ್ಲಿ ಸುಧಾರಣೆ ತರುವುದು ರೋಟರಿ ಸಂಸ್ಥೆಯ ಧ್ಯೇಯವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿ ದಿನ ಸಂಸ್ಥೆಯು ಒಂದಿಲ್ಲೊAದು ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ರೋಟರಿ ೩೧೮೧ ಜಿಲ್ಲಾ ರಾಜ್ಯಪಾಲ ಪ್ರಕಾಶ್ ಕಾರಂತ್ ಹೇಳಿದರು.

ಇಲ್ಲಿನ ರೋಟರಿ ಕ್ಲಬ್ ಆಫ್ ಸೋಮವಾರಪೇಟೆ ಹಿಲ್ಸ್ಗೆ ಅಧಿಕೃತ ಭೇಟಿ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಸಂಕಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸೇವೆಗೆ ಯಾವುದೇ ಜಾತಿ-ಧರ್ಮ ಅಡ್ಡ ಬರುವುದಿಲ್ಲ. ಹೃದಯ ವೈಶಾಲ್ಯತೆ ಇರಬೇಕಷ್ಟೆ. ಸಮಾಜದಲ್ಲಿ ಸೇವಾ ಬೆಳಕನ್ನು ಹರಡುವ ಕೆಲಸ ಎಲ್ಲರಿಂದಾಗಬೇಕು. ಸೇವಾ ಕಾರ್ಯಗಳಿಗೆ ಎಲ್ಲರೂ ಕೈ ಜೋಡಿಸಬೇಕು. ಸೋಮವಾರಪೇಟೆ ರೋಟರಿ ಸಂಸ್ಥೆಯಲ್ಲಿ ಇನ್ನೂ ಹೆಚ್ಚಿನ ಸದಸ್ಯರನ್ನು ಸೇರ್ಪಡೆಗೊಳಿಸಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಲು ಪ್ರೇರಣೆ ನೀಡಬೇಕು ಎಂದರು.

ರೋಟರಿ ಮೂಲಕ ಅನುಷ್ಠಾನಗೊಳ್ಳುವ ಯೋಜನೆಗಳು ಎಂದಿಗೂ ನಿಷ್ಟçಯೋಜಕವಾಗುವುದಿಲ್ಲ. ಇದರೊಂದಿಗೆ ಸೂಕ್ತ ವ್ಯಕ್ತಿಗೆ ಸೂಕ್ತ ಸಮಯದಲ್ಲಿ ಸಹಾಯ ದೊರಕುತ್ತಿದೆ. ಆದುದರಿಂದ ಇಲ್ಲಿ ನೆರವು ನೀಡುವವರು ಚಿಂತಿಸುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಕೆ.ಜಿ. ಬಸಪ್ಪ ಹಾಗೂ ಅಜಿತ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ರೋಟರಿ ಸಹಾಯಕ ರಾಜ್ಯಪಾಲ ಎಸ್.ಎಸ್. ಸತೀಶ್, ಅಧ್ಯಕ್ಷ ಹೆಚ್.ಸಿ. ಲೋಕೇಶ್, ವಲಯ ಸೇನಾನಿ ಎಂ.ಡಿ. ಲಿಖಿತ್, ಕಾರ್ಯದರ್ಶಿ ಆದರ್ಶ್ ತಮ್ಮಯ್ಯ ಮತ್ತು ನಿಯೋಜಿತ ಅಧ್ಯಕ್ಷ ನಂಗಾರು ವಸಂತ ಉಪಸ್ಥಿತರಿದ್ದರು.