ಮಡಿಕೇರಿ, ಫೆ. ೧೦: ಅಖಿಲ ಭಾರತ ಹಿಂದೂ ಮಹಾಸಭಾ ಸಂಘಟನೆಯಿAದ ಹೊರಹೋಗಿ ಅದೇ ಹೆಸರನ್ನು ಬಳಸಿಕೊಂಡು ಕಾರ್ಯಚಟುವಟಿಕೆ ನಡೆಸುತ್ತಿದ್ದದನ್ನು ಪ್ರಶ್ನಿಸಿ ನ್ಯಾಯಾಲಯ ದಲ್ಲಿ ಹೂಡಿದ್ದ ಧಾವೆಗೆ ಜಯ ದೊರೆತಿದ್ದು, ಇದೀಗ ಮೂಲ ಸಂಸ್ಥೆಯ ಮರುಸಂಘಟಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿದ್ದೇವೆ ಎಂದು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ಗಿರೀಶ್ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯೦೭ರಲ್ಲಿ ಸ್ಥಾಪನೆಗೊಂಡ ಮೊದಲ ರಾಜಕೀಯ ಪಕ್ಷವಾದ ಅಖಿಲ ಭಾರತ ಹಿಂದೂ ಮಹಾಸಭಾದಿಂದ ಉಚ್ಛಾಟನೆಗೊಂಡ ರಾಜ್ಯದ ಕೆಲವರು ಸ್ವಯಂಘೋಷಿತ ಪದಾಧಿಕಾರಿಗಳಾಗಿ ಜನತೆಗೆ ತಪ್ಪು ಮಾಹಿತಿ ನೀಡುತ್ತಿದ್ದರು. ಜೊತೆಗೆ ಸಂಘಟನೆಯ ಲಾಂಛನ ಹಾಗೂ ಭಾವುಟವನ್ನು ಉಪಯೋಗಿಸಿ ಕೊಳ್ಳುತ್ತಿದ್ದರು. ಈ ಹಿನ್ನೆಲೆ ಕಾನೂನು ಹೋರಾಟಕ್ಕೆ ಮುಂದಾಗಿದ್ದೆವು. ವಾದ ಆಲಿಸಿದ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದರು.

ಇದೀಗ ಪ್ರತಿ ಜಿಲ್ಲೆಯಲ್ಲಿ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಅದರಂತೆ ಕೊಡಗು ಜಿಲ್ಲಾ ಸಮಿತಿ ರಚನೆ ಮಾಡಲಾಗಿದೆ. ಪ್ರತಿ ತಾಲೂಕು ಹಾಗೂ ಜಿಲ್ಲಾ ಕೇಂದ್ರ ಗೋಶಾಲೆ, ಗುರುಕುಲ, ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸುವುದು, ನಿರ್ಲಕ್ಷö್ಯಕ್ಕೆ ಒಳಗಾಗಿರುವ ದೇವಾಲಯಗಳನ್ನು ಜೀರ್ಣೋದ್ಧಾರಗೊಳಿಸುವುದು ಸಂಘಟನೆಯ ಗುರಿಯಾಗಿದೆ ಎಂದು ಹೇಳಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೊಡಗು ಜಿಲ್ಲೆಯ ೨ ವಿಧಾನಸಭಾ ಕ್ಷೇತ್ರದಲ್ಲಿಯೂ ಪಕ್ಷದ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ. ಹಿಂದೂಗಳ ಸಂಘಟನೆ ಮಾಡಿ ರಾಮರಾಜ್ಯ ಕಲ್ಪನೆ ಸಾಕರಗೊಳಿಸುವುದು ನಮ್ಮ ಧ್ಯೇಯವಾಗಿದೆ ಎಂದು ವಿವರಿಸಿದರು.

ಜಿಲ್ಲಾ ಸಮಿತಿ ರಚನೆ

ಅಖಿಲ ಭಾರತ ಹಿಂದೂ ಮಹಾಸಭಾದ ಕೊಡಗು ಜಿಲ್ಲಾ ಸಮಿತಿ ನೂತನ ಅಧ್ಯಕ್ಷರಾಗಿ ಅಪ್ಪನೆರವಂಡ ಕಿರಣ್ ಕಾರ್ಯಪ್ಪ, ಉಪಾಧ್ಯಕ್ಷರುಗಳಾಗಿ ಬಾಚರಣಿಯಂಡ ಧರ್ಮರಾಜ್, ಕಂಬೇಯAಡ ಸಾಮ್ರಾಟ್, ಪವನ್ ಕುಮಾರ್, ಜಂಟಿ ಕಾರ್ಯದರ್ಶಿ ಅಮ್ಮಾಟಂಡ ದೇವಯ್ಯ, ಯುವ ಘಟಕದ ಉಪಾಧ್ಯಕ್ಷರಾಗಿ ಕೇಲೇಟಿರ ಪವಿತ್, ಶ್ರಮಿಕ್ ಸಭಾ ವಿಭಾಗದ ಅಧ್ಯಕ್ಷರಾಗಿ ರಾಧಾಕೃಷ್ಣ ರೈ, ಕ್ರೀಡಾ ಸಭಾದ ಉಪಾಧ್ಯಕ್ಷರಾಗಿ ಕಲಿಯಂಡ ಪೂವಣ್ಣ, ಕಿಸಾನ್ ಸಭಾ ಅಧ್ಯಕ್ಷರಾಗಿ ಕದ್ದಣಿಯಂಡ ಗಿರೀಶ್, ಕಾನೂನೂ ಸಲಹೆಗಾರರಾಗಿ ಅಜ್ಜೆಟ್ಟೀರ ಗೌತಮ್ ನೇಮಕಗೊಂಡಿದ್ದಾರೆ ಎಂದು ಗಿರೀಶ್ ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ಅಪ್ಪನೆರವಂಡ ಕಿರಣ್ ಕಾರ್ಯಪ್ಪ, ಜಂಟಿ ಕಾರ್ಯದರ್ಶಿ ಎ.ಎಂ. ದೇವಯ್ಯ, ಉಪಾಧ್ಯಕ್ಷ ಬಾಚರಣಿಯಂಡ ಧರ್ಮರಾಜು, ರಾಜ್ಯ ಜಂಟಿ ಕಾರ್ಯದರ್ಶಿ ಗೌತಮ್ ಹಾಜರಿದ್ದರು.