ವರದಿ : ಚಂದ್ರಮೋಹನ್

ಕುಶಾಲನಗರ, ಫೆ. ೧೦: ಕುಶಾಲನಗರ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ಜನತೆಗೆ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಮೈಸೂರು-ಕುಶಾಲನಗರ ನೂತನ ರೈಲ್ವೇ ಮಾರ್ಗದ ಕನಸು ಇದೀಗ ಮತ್ತೆ ನೆನೆಗುದಿಗೆ ಬಿದ್ದಂತಿದೆ. ಅಂದಾಜು ೮೬.೫೦ ಕಿ.ಮೀ. ಅಂತರದ ಈ ಮಾರ್ಗಕ್ಕೆ ಕಳೆದ ೧೨ ವರ್ಷಗಳಿಂದ ಹಲವು ತೊಡಕುಗಳು ಬರುತ್ತಿದ್ದು ಈ ಯೋಜನೆಯನ್ನು ರೈಲ್ವೆ ಇಲಾಖೆ ಕೈಗೆತ್ತಿಕೊಂಡಿದ್ದು ೬೬೭ ಕೋಟಿ ರೂಪಾಯಿಗಳ ಅನುದಾನ ಕೂಡ ಕಲ್ಪಿಸಿತ್ತು.

ಈ ಸಾಲಿನಿಂದ ಈ ನೂತನ ಮಾರ್ಗದ ಕಾಮಗಾರಿಗೆ ಗ್ರೀನ್ ಸಿಗ್ನಲ್ ದೊರೆಯುವುದು ಬಹುತೇಕ ಸನ್ನಿಹಿತವಾಗಿದ್ದಂತೆ ಇದೀಗ ಕೇಂದ್ರ ಬಜೆಟ್‌ನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾವನೆ ಕಂಡುಬAದಿಲ್ಲ. ಹೊಸ ರೈಲು ಮಾರ್ಗಯೋಜನೆ ಸಂಬAಧ ೨೦೧೧ರಲ್ಲಿ ರೈಲ್ವೇ ಇಲಾಖೆ ಸರ್ವೆ ಕಾರ್ಯ ಕೈಗೊಂಡಿತ್ತು. ಮೈಸೂರು-ಕುಶಾಲನಗರ ರೈಲ್ವೇ ಯೋಜನೆಗೆ ಅಂದಾಜು ರೂ. ೬೦೦ ಕೋಟಿ ವೆಚ್ಚವಾಗಲಿದೆ ಎನ್ನುವ ಅಂದಾಜು ಪಟ್ಟಿಕೂಡ ಸಲ್ಲಿಸಲಾಗಿತ್ತು. ಈ ನಡುವೆ ೨೦೧೨ ರಲ್ಲಿ ಅಂದಿನ ರೈಲ್ವೇ ಸಚಿವರಾಗಿದ್ದ ಕೆ.ಹೆಚ್. ಮುನಿಯಪ್ಪ ಯೋಜನೆಗೆ ಕುಶಾಲನಗರದಲ್ಲಿ ಶಂಕುಸ್ಥಾಪನೆ ಕೂಡ ನೆರವೇರಿಸಿ ಕೆಲವೇ ವರ್ಷಗಳಲ್ಲಿ ಕುಶಾಲನಗರಕ್ಕೆ ರೈಲು ಬರುವುದಾಗಿ ಸಾರ್ವಜನಿಕರಿಗೆ ಭರವಸೆ ಕೂಡ ನೀಡಿದ್ದರು.

ಮೈಸೂರಿನಿಂದ ಕುಶಾಲನಗರಕ್ಕೆ ರೂ. ೬೬೭ ಕೋಟಿ ವೆಚ್ಚದಲ್ಲಿ ರೈಲು ಮಾರ್ಗ ರೂಪಿಸುವುದರೊಂದಿಗೆ ಬೆಳಗೊಳದಿಂದ ಇಲವಾಲ ಮೂಲಕ ಬಿಳಿಕೆರೆ, ಹುಣಸೂರು, ಸತ್ತೆಗಾಲ ಮಾರ್ಗವಾಗಿ ಪಿರಿಯಾಪಟ್ಟಣ, ಬೈಲುಕೊಪ್ಪ ಸಮೀಪದ ದೊಡ್ಡ ಹೊನ್ನೂರುಕೊಪ್ಪ ಮೂಲಕ ಚಿಕ್ಕಹೊಸೂರು ಮಾರ್ಗವಾಗಿ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸಲು ನಕ್ಷೆ ತಯಾರಿಸಲಾಗಿರುವ ಬಗ್ಗೆ ವರದಿಯಾಗಿತ್ತು.

ಮೈಸೂರು- ಕುಶಾಲನಗರ ರೈಲ್ವೆ ಯೋಜನೆಗೆ ಸಂಬAಧಿಸಿದAತೆ ಹಲವು ಹಂತಗಳ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಈ ಸಂದರ್ಭ ಹುಣಸೂರು- ಪಿರಿಯಾಪಟ್ಟಣ- ಕುಶಾಲನಗರ ನಡುವೆ ಕೆಲವು ಭೂ ಮಾಲೀಕರು ಅಡ್ಡಿಯುಂಟು ಮಾಡಿರುವುದು ಈ ಯೋಜನೆ ನೆನೆಗುದಿಗೆ ಬೀಳಲು ಕಾರಣವಾಗಿತ್ತು. ೧೯೮೧ ರಲ್ಲಿಯೇ ಮೈಸೂರಿನಿಂದ ಜಿಲ್ಲೆಗೆ ರೈಲು ಮಾರ್ಗ ನಿರ್ಮಾಣದ ಬಗ್ಗೆ ಯೋಜನೆಯೊಂದು ಪ್ರಸ್ತಾವನೆ ಯಾಗಿತ್ತು. ಆದರೆ, ಕಾರಣಾಂತರ ಗಳಿಂದ ಯೋಜನೆ ಕೈಬಿಡಲಾಗಿತ್ತು. ಕೊಡಗು ಜಿಲ್ಲೆಯ ಏಕೈಕ ಕೈಗಾರಿಕಾ ಬಡಾವಣೆಯೆಂಬ ಹೆಗ್ಗಳಿಕೆಯಲ್ಲಿರುವ ಕುಶಾಲನಗರ ತನಕ ರೈಲ್ವೇ ಮಾರ್ಗ ಬಂದಲ್ಲಿ ಕಾಫಿ ಉದ್ದಿಮೆಗೆ ನೆರವಾಗುವ ಸಾಧ್ಯತೆ ಬಗ್ಗೆ ಕನಸು ಚಿಗುರೊಡೆದಿತ್ತು.

ರೈಲ್ವೇ ಭೂಪಟದಲ್ಲಿ ಹಳಿ ಇಲ್ಲದ ಜಿಲ್ಲೆ ಎಂಬAತಾಗಿರುವ ಕೊಡಗು ಜಿಲ್ಲೆಗೆ ಕೆಲವೇ ವರ್ಷಗಳಲ್ಲಿ ರೈಲು ಬಂತು ರೈಲು ಎನ್ನುವುದು ಖಚಿತ ಎನ್ನುವ ಹಂತದಲ್ಲೇ ಇದೀಗ ಮತ್ತೆ ಯೋಜನೆ ನೆನೆಗುದಿಗೆ ಬಿದ್ದಿದೆ. ರೈಲ್ವೇ ಮಾರ್ಗದ ಬಗ್ಗೆ ರಾಜ್ಯ ಸರಕಾರ

(ಮೊದಲ ಪುಟದಿಂದ) ಸಂಪೂರ್ಣ ನಿರ್ಲಕ್ಷö್ಯ ತಾಳಿದೆ ಎನ್ನುತ್ತಾರೆ ಮೈಸೂರು-ಕೊಡಗು ಸಂಸತ್ ಸದಸ್ಯ ಪ್ರತಾಪ್ ಸಿಂಹ. ರಾಜ್ಯ ಸರಕಾರ ಯಾವುದೇ ರೀತಿಯ ಸ್ಪಂದನ ನೀಡದಿರುವ ಹಿನ್ನೆಲೆ ಯೋಜನೆ ಹಿನ್ನಡೆ ಸಾಧಿಸುತ್ತಿದೆ ಎಂದು ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ೨೦೧೦-೧೧ ರಲ್ಲಿ ಮೈಸೂರು-ಕುಶಾಲನಗರ-ಮಡಿಕೇರಿ ರೈಲ್ವೇ ಯೋಜನೆ ಅನುಮೋದನೆಗೊಂಡಿದ್ದು, ಈ ಸಂಬAಧ ಪ್ರಥಮ ಹಂತದ ಸರ್ವೆ ಕಾರ್ಯ ಪೂರ್ಣಗೊಂಡಿದೆ. ವರದಿಯನ್ನು ಹಿಂದೆಯೇ ಸಂಬAಧಿಸಿದ ಇಲಾಖೆಗೆ ಕಳುಹಿಸಿಕೊಡಲಾಗಿತ್ತು ಎಂದು ಸೌತ್ ವೆಸ್ರ‍್ನ್ರೈಲ್ವೇ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಮೈಸೂರು-ಕುಶಾಲನಗರ ರೈಲ್ವೇ ಯೋಜನೆಗೆ ರಾಜ್ಯ ಸರಕಾರ ಶೇ. ೫೦ ರಷ್ಟು ಪಾಲುದಾರಿಕೆ ಹೊಂದಿದ್ದು ಈ ನಿಟ್ಟಿನಲ್ಲಿ ಯಾವುದೇ ಹಣ ಬಿಡುಗಡೆಯಾಗಿಲ್ಲ ಎನ್ನುವ ಅಂಶವು ಬೆಳಕಿಗೆ ಬಂದಿದೆ.

ಈ ನಡುವೆ ಜಿಲ್ಲೆಯ ಪರಿಸರವಾದಿಗಳು ಕೊಡಗು ಜಿಲ್ಲೆಗೆ ರೈಲು ಸಂಪರ್ಕ ಬೇಡ ಎನ್ನುವ ಬೇಡಿಕೆ ಮೂಲಕ ಆಗಾಗ್ಗೆ ಪ್ರತಿಭಟನೆ ನಡೆಸಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಕೊಡಗು ಜಿಲ್ಲೆ ಮೂಲಕ ಯಾವುದೇ ರೈಲು ಮಾರ್ಗಕ್ಕೆ ಅವಕಾಶ ಕಲ್ಪಿಸಬಾರದು ಎನ್ನುವುದು ಕೂರ್ಗ್ ವೈಲ್ಡ್ಲೈಫ್ ಸೊಸೈಟಿ ಅಧ್ಯಕ್ಷ ಕರ್ನಲ್ ಮುತ್ತಣ್ಣ ಅವರ ಆಗ್ರಹವಾಗಿದೆ.

ಕೇಂದ್ರದ ಹಿಂದಿನ ಸಾಲಿನ ಬಜೆಟ್‌ನಲ್ಲಿ ಮೈಸೂರು-ಕುಶಾಲನಗರ ರೈಲ್ವೇ ಮಾರ್ಗದ ಬಗ್ಗೆ ಪ್ರಸ್ತಾಪವಾಗುವುದರೊಂದಿಗೆ ಈ ಭಾಗದ ಜನರಿಗೆ ರೈಲ್ವೆ ಸಂಪರ್ಕದ ಬಗ್ಗೆ ಕನಸೊಂದು ನನಸಾಗುವ ಸಾಧ್ಯತೆ ಬಗ್ಗೆ ಚರ್ಚೆಗಳು ಕೇಳಿ ಬರುತ್ತಿದ್ದವು.

ಕನಿಷ್ಟ ಕುಶಾಲನಗರದ ತನಕ ರೈಲ್ವೇ ಸಂಪರ್ಕ ಬಂದಲ್ಲಿ ಜಿಲ್ಲೆಯ ವ್ಯಾಪಾರ ವಹಿವಾಟು ಹಾಗೂ ಕೈಗಾರಿಕಾ ಉದ್ಯಮಗಳು ಶೀಘ್ರಗತಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಎನ್ನುತ್ತಾರೆ ಛೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿಯ ಅಧ್ಯಕ್ಷ ಬಿ. ಅಮೃತ್‌ರಾಜ್.

ಇನ್ನೊಂದೆಡೆ ನೆರೆಯ ಟಿಬೇಟಿಯನ್ ನಾಗರಿಕರು ಮತ್ತು ಜಿಲ್ಲೆಯ ಕುಶಾಲನಗರ ಭಾಗದಲ್ಲಿ ನೆಲೆ ನಿಂತಿರುವ ನೆರೆ ರಾಜ್ಯಗಳ ವ್ಯಾಪಾರಸ್ಥರು ಹಾಗೂ ಕಾರ್ಮಿಕರು ಮೈಸೂರು-ಕುಶಾಲನಗರ ರೈಲ್ವೇ ಸಂಪರ್ಕದ ಬಗ್ಗೆ ಶಬರಿಯಂತೆ ಕಾದು ಕುಳಿತಿದ್ದರೆ, ಇತ್ತ ಮೈಸೂರು- ಕುಶಾಲನಗರ ರೈಲ್ವೇ ಯೋಜನೆ ಮಾತ್ರ ಕಳೆದ ಹಲವು ವರ್ಷಗಳಿಂದ ಹಳಿತಪ್ಪಿದಂತಾಗಿದೆ ಎಂದರೆ ತಪ್ಪಾಗಲಾರದು.