ಕಹ್ರಾಮನ್ಮರಸ್, ಫೆ. ೧೦: ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಬದುಕುಳಿದವರನ್ನು ಹುಡುಕಲು ರಕ್ಷಣಾ ಕಾರ್ಯಕರ್ತರು ಅಂತಿಮ ಹಂತದ ಕಾರ್ಯಾಚರಣೆ ನಡೆಸುತ್ತಿದ್ದಾರೆ, ಅವಶೇಷಗಳಡಿ ಸಿಲುಕಿರುವ ಅನೇಕರ ಗುರುತು ಕೂಡ ಸಿಗದಂತಹ ಪರಿಸ್ಥಿತಿ ಉಂಟಾಗಿದೆ. ಟರ್ಕಿಯ ಅಧ್ಯಕ್ಷರು ಇದನ್ನು "ಶತಮಾನದ ದುರಂತ" ಎಂದು ಕರೆದಿದ್ದು ಎರಡೂ ದೇಶಗಳಲ್ಲಿ ಸಂಭವಿಸಿದ ಭೂಕಂಪದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ ೨೧ ಸಾವಿರಕ್ಕೆ ಏರಿಕೆಯಾಗಿದೆ.

ಭೂಕಂಪದಿAದ ಟರ್ಕಿಯಲ್ಲಿ ಸುಮಾರು ೧೩.೫ ಮಿಲಿಯನ್ ಜನರ ಬದುಕಿಗೆ ತೊಂದರೆಯಾಗಿದೆ. ಸಿರಿಯಾದಲ್ಲಿ ಎಷ್ಟು ಮಂದಿ ಸಾವಿಗೀಡಾಗಿದ್ದಾರೆ ಎಂದು ನಿಖರವಾಗಿ ತಿಳಿದುಬಂದಿಲ್ಲ. ಲಂಡನ್‌ನಿAದ ಪ್ಯಾರಿಸ್ ಅಥವಾ ಬೋಸ್ಟನ್‌ನಿಂದ ಫಿಲಡೆಲ್ಫಿಯಾವರೆಗಿನ ಭೂಕಂಪನದ ತೀವ್ರತೆ, ಪರಿಣಾಮ ಬೀರಿದೆ. ರಕ್ಷಣಾ ಪ್ರಯತ್ನದಲ್ಲಿ ಸೈನಿಕರು ಭಾಗಿಯಾಗಿದ್ದರೂ ಕೂಡ ಸಾಕಾಗುತ್ತಿಲ್ಲ.

ಎಲ್ಲೆಡೆ ಅವಶೇಷಗಳು, ಕಟ್ಟಡಗಳ ಅವಶೇಷಗಳು, ಲೋಹ, ಪುಡಿಮಾಡಿದ ಕಾಂಕ್ರಿಟ್ ಮತ್ತು ತಂತಿಗಳು ಕಂಡುಬರುತ್ತಿವೆ. ಅಡಿಯಾಮಾನ್‌ನಲ್ಲಿ, ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿದವರು ತಮ್ಮನ್ನು ಕಾಪಾಡುವಂತೆ ಬೇಡಿಕೊಳ್ಳುತ್ತಿರುವುದು ಮನಕಲಕುವಂತೆ ಮಾಡಿದೆ.

ಬದುಕುಳಿದವರಲ್ಲಿ ಒಬ್ಬಾತ, ನಾನು ಮನೆಗೆ ಹೋಗಿ ಮಲಗುವುದು ಹೇಗೆ, ನನ್ನ ಸಹೋದರ ಇದ್ದಾನೆ, ಅವನು ಇನ್ನೂ ಜೀವಂತವಾಗಿರಬಹುದು ಎಂದು ನಂಬಿದ್ದೇನೆ, ಆತ ಅವಶೇಷಗಳಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ ಎನ್ನುತ್ತಾರೆ. ಸೋಮವಾರದ ೭.೮ ತೀವ್ರತೆಯ ದುರಂತದ ಸಾವಿನ ಸಂಖ್ಯೆ ಸುಮಾರು ೨೧,೦೦೦ ಕ್ಕೆ ಏರಿತು, ೨೦೧೧ ರಲ್ಲಿ ಜಪಾನ್‌ನ ಫುಕುಶಿಮಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ೧೮,೪೦೦ ಕ್ಕೂ ಹೆಚ್ಚಾಗಿದ್ದವು. ಇದು ಸುನಾಮಿಗಿಂತಲೂ ತೀವ್ರವಾಗಿದೆ. ಟರ್ಕಿಯ ರಾಜಧಾನಿ ಇಸ್ತಾನ್ ಬಳಿ ಸುಮಾರು ೧೮,೦೦೦ ಜನರು ೧೯೯೯ರಲ್ಲಿ ಮೃತಪಟ್ಟಿದ್ದರು.

ಇತ್ತೀಚಿನ ವರದಿಯಂತೆ ಟರ್ಕಿಯಲ್ಲಿ ೧೭,೬೦೦ಕ್ಕೂ ಹೆಚ್ಚು ಜನರು ಮತ್ತು ಅಂತರ್ಯುದ್ಧ ಪೀಡಿತ ಸಿರಿಯಾದಲ್ಲಿ ೩,೩೦೦ ಕ್ಕೂ ಹೆಚ್ಚು ಜನರು ಮೃತಪಟ್ಟು ಸಾವಿರಾರು ಮಂದಿ ಕೂಡ ಗಾಯಗೊಂಡಿದ್ದಾರೆ.