ಗೋಣಿಕೊಪ್ಪ ವರದಿ, ಫೆ. ೧೦: ಕೇರಳದ ಪಯ್ಯಾವೂರ್ ಹಬ್ಬಕ್ಕೆ ಚಾಲನೆ ದೊರೆತಿದ್ದು, ಆಚರಣೆಯಂತೆ ಶುಕ್ರವಾರ ನೈವಿಧ್ಯಕ್ಕೆ ಎತ್ತ್ ಪೋರಾಟದೊಂದಿಗೆ ಅಕ್ಕಿ ಹೊತ್ತು ಪಾದಯಾತ್ರೆ ಮೂಲಕ ತೆರಳಲಾಯಿತು. ತಾ. ೨೨ ಮತ್ತು ೨೩ ರಂದು ದೊಡ್ಡ ಹಬ್ಬ ನಡೆಯಲಿದೆ.
ಜನವರಿ ೩೦ ರಂದು ಕೋರತಚ್ಚ ಮುಂಡಿಯೋಳAಡ ಮತ್ತು ಬೊವ್ವೇರಿಯಂಡ ಕುಟುಂಬದ ಮನೆ, ಭಕ್ತರ ಮನೆಗೆ ತೆರಳಿ ಹಬ್ಬಕ್ಕೆ ಆಹ್ವಾನಿಸುವ ಆಚರಣೆ ನಡೆಯಿತು. ತಾ. ೧೧ ರಂದು (ಇಂದು) ನೈವೇಧ್ಯದ ಅರ್ಪಣೆಯ ಪದ್ಧತಿ ನಡೆಯಲಿದೆ.
ಎತ್ತುಗಳ (ಎತ್ತ್ಪೋರಾಟ) ಸಹಕಾರದಲ್ಲಿ ಶುಕ್ರವಾರ ಚೆಯ್ಯಂಡಾಣೆ ಗ್ರಾಮದ ಮುಂಡಿಯೋಳAಡ ಕುಟುಂಬದ ಮನೆಯಿಂದ ಅಕ್ಕಿ ತೆಗೆದುಕೊಂಡು ಹೋಗಲಾಯಿತು. ಶನಿವಾರ ತಲುಪಿ ನೈವೇಧ್ಯ ಮಾಡಲಾಗುತ್ತದೆ. ಆ ಮೂಲಕ ಹಬ್ಬಕ್ಕೂ ಚಾಲನೆ ನೀಡಲಾಗುತ್ತದೆ. ಈ ಆಚರಣೆಯನ್ನು ಒರ್ ಊಟ್ ಎಂದು ಕರೆಯಲಾಗುತ್ತದೆ. ಅಕ್ಕಿ ಇಟ್ಟು ಕೊಡಗಿನ ಭಕ್ತರು ಮನೆಗಳಿಗೆ ಮರಳುತ್ತಾರೆ. ನಂತರ ತಾ. ೨೨ ಮತ್ತು ೨೩ ರಂದು ನಡೆಯುವ ದೊಡ್ಡ ಹಬ್ಬ (ಪತ್ತೂಟ್) ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ.
ಚೆಯ್ಯಂಡಾಣೆ ಗ್ರಾಮದ ಮುಂಡಿಯೋಳAಡ ಮತ್ತು ಬೊವ್ವೇರಿಯಂಡ ಕುಟುಂಬಸ್ಥರು ಪಯ್ಯಾವೂರ್ ಈಶ್ವರನ ಹಬ್ಬದ ಆಚರಣೆಯ ಕೊಡಗಿನ ತಕ್ಕರಾಗಿ ಜವಬ್ದಾರಿ ನಿಭಾಯಿಸುತ್ತಿದ್ದಾರೆ.