ನಾಪೋಕ್ಲು, ಫೆ. ೧೦: ನಾಪೋಕ್ಲು ಸಮೀಪದ ಚೆರಿಯಪರಂಬು ಮುಹಿಯುದ್ದೀನ್ ಜುಮಾ ಮಸೀದಿಯ ಮಖಾಂ ಉಸೂರ್‌ಗೆ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಚ್.ಅಹಮ್ಮದ್ ಧ್ವಜಾರೋಹಣ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು.

ಜುಮಾ ನಮಾಜಿನ ಬಳಿಕ ದಫ್ ಪ್ರದರ್ಶನದೊಂದಿಗೆ ಆರಂಭಗೊAಡು ಮಸೀದಿಯ ಖತೀಬ ಹಂಝ ರಹ್ಮಾನಿ ಅವರ ನೇತೃತ್ವದಲ್ಲಿ ಮಖಾಂ ಝಿಯಾರತ್ ಹಾಗೂ ಪ್ರಾರ್ಥನೆ ನಡೆಯಿತು.

ಈ ಸಂದರ್ಭದಲ್ಲಿ ಜಮಾಅತ್‌ನ ಉಪಾಧ್ಯಕ್ಷ ಮಿರ್ಷಾದ್, ಕಾರ್ಯದರ್ಶಿ ರಶೀದ್, ಮಾಜಿ ಅಧ್ಯಕ್ಷ ಪರವಂಡ ಅಬ್ದುಲ್ ರೆಹ್ಮಾನ್ ಹಾಜಿ, ಮಾಜಿ ಕಾರ್ಯದರ್ಶಿ ಪಿ.ಎ.ಸಿರಾಜ್, ಉಸ್ಮಾನ್ ಸಿ.ಎಂ, ಸದಸ್ಯರಾದ ಇಬ್ರಾಹಿಂ, ಮಮ್ಮು, ದಾವೂದ್ ಹಾಜಿ, ಉಮ್ಮರ್, ಹಾರಿಸ್, ಹಸೈನಾರ್ ಹಾಜಿ, ಉಸ್ಮಾನ್ ಹಂಸ, ಆಲಿ, ಮತ್ತಿತರರು ಇದ್ದರು.