*ಗೋಣಿಕೊಪ್ಪ, ಫೆ. ೧೧: ಬಿ. ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಕೊಂಗಣ ಒಡಿಬೈಲು ಕಾಲೋನಿ ರಸ್ತೆಗೆ ಕಾವೇರಿ ನೀರಾವರಿ ನಿಗÀಮದ ರೂ. ೬೮ ಲಕ್ಷ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರವೇರಿಸಿದರು.

ಕಾವೇರಿ ನೀರಾವರಿ ನಿಗಮದಿಂದ ತಾಲೂಕು ವ್ಯಾಪ್ತಿಗೆ ರೂ. ೧೧೦ ಕೋಟಿ ಅನುದಾನವನ್ನು ಪ್ರಪ್ರಥಮವಾಗಿ ತರಲಾಗಿದೆ.

ಈ ನಿಟ್ಟಿನಲ್ಲಿ ಗಿರಿಜನ ಕಾಲೋನಿಗಳ ರಸ್ತೆ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಲಾಗುತ್ತಿದೆ. ಮಳೆಗಾಲ ಸಂದರ್ಭದಲ್ಲಿ ಸಂಪೂರ್ಣವಾಗಿ ಹದಗೆಟ್ಟ ರಸ್ತೆಗಳನ್ನು ಡಾಂಬರೀಕರಣಗೊಳಿಸುತ್ತಿದ್ದು, ಶೇ. ೯೦ ರಷ್ಟು ಡಾಂಬರೀಕರಣ ಪ್ರಗತಿಯನ್ನು ಕಂಡಿದೆ. ಮುಂದಿನ ಒಂದು ತಿಂಗಳ ಅವಧಿಯೊಳಗೆ ಮುಖ್ಯ ರಸ್ತೆಗಳು ಮತ್ತು ಗ್ರಾಮೀಣ ರಸ್ತೆಗಳು ಡಾಂಬರೀಕರಣಗೊAಡು ಸುಗಮ ಸಂಚಾರ ವ್ಯವಸ್ಥೆ ರೂಪುಗೊಳ್ಳಲಿದೆ ಎಂದು ತಿಳಿಸಿದರು.

ಅಕ್ರಮ ಸಕ್ರಮ ತಾಲೂಕು ಸದಸ್ಯ ತೀತಮಾಡ ಲಾಲಾ ಭೀಮಯ್ಯ, ಬಿ. ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷೆ ಕೆ.ಎಸ್. ನೇತ್ರಾವತಿ, ಉಪಾಧ್ಯಕ್ಷ ಮದ್ರಿರ ಗಿರೀಶ್, ಸದಸ್ಯೆ ಸಿ.ಎಂ ಕಾವೇರಮ್ಮ, ನಾರಾಯಣನಂದ ಆಶ್ರಮದ ಸ್ವಾಮಿಗಳಾದ ಪರಮಾನಂದ, ಶಕ್ತಿ ಕೇಂದ್ರದ ಪ್ರಮುಖ್ ವಿಜು ಕುಶಾಲಪ್ಪ, ಕೃಷಿ ಮೋರ್ಚಾ ಸದಸ್ಯ ರಮೇಶ್, ಗುತ್ತಿಗೆದಾರರುಗಳಾದ ನಾಮೇರ ನವೀನ್, ವಿವೇಕ್, ಇಂಜಿನಿಯರ್ ಹಾಗೂ ಗ್ರಾಮಸ್ಥರು ಇದ್ದರು.