ಕೂಡಿಗೆ, ಫೆ. ೧೦: ಕೇಂದ್ರ ಕ್ರೀಡಾ ಪ್ರಾಧಿಕಾರದ ವತಿಯಿಂದ ಮಧ್ಯಪ್ರದೇಶದ ಭೂಪಾಲ್ನಲ್ಲಿ ನಡೆದ ರಾಷ್ಟç ಮಟ್ಟದ ೫ನೇ ಖೇಲೊ ಇಂಡಿಯಾ ಯೂತ್ ಗೇಮ್ಸ್ ಕ್ರೀಡಾಕೂಟದ ೧೮ ವರ್ಷ ವಯೋಮಿತಿಯ ಅಥ್ಲೆಟಿಕ್ ವಿಭಾಗದ ಉದ್ದ ಜಿಗಿತದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಕೂಡಿಗೆಯ ಭೂಮಿಕ ದ್ವಿತೀಯ ಸ್ಥಾನ ಪಡೆದು ಸಾಧನೆಗೈದಿದ್ದಾರೆ.
೧೨.೦೨ ಮೀಟರ್ ಅಂತರದಲ್ಲಿ ಜಿಗಿದು ಬೆಳ್ಳಿಯ ಪದಕಕ್ಕೆ ಭಾಜನರಾದರು. ಮೂಲತಃ ಶಿವಮೊಗ್ಗದ ನಾಗರಾಜ್, ಜಯಮ್ಮ ದಂಪತಿ ಪುತ್ರಿಯಾಗಿರುವ ಭೂಮಿಕ ಕೂಡಿಗೆ ಸರಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆೆಗೆ ಕೂಡಿಗೆ ಕ್ರೀಡಾ ಶಾಲೆಯ ತರಬೇತುದಾರ ಬಿ.ಜಿ. ಮಂಜುನಾಥ ತರಬೇತಿ ನೀಡಿದ್ದಾರೆ.