ಸುಂಟಿಕೊಪ್ಪ, ಫೆ. ೯: ಸಂತೆ ದಿನವಾದ ಭಾನುವಾರ ಸುಂಟಿಕೊಪ್ಪದಲ್ಲಿ ಸ್ತಿçÃಶಕ್ತಿ, ಹಾಗೂ ಸ್ವಸಹಾಯ ಸಂಘದ ಸಂತೆ ಮೇಳದಲ್ಲಿ ವ್ಯಾಪಾರ ವಹಿವಾಟು ನಡೆಯಿತು.
ಸಂಜೀವಿನಿ ಕರ್ನಾಟಕ ಗ್ರಾಮೀಣ ಜೀವನೋಪಾಯ ಸಂಪರ್ಕ ಸಂಸ್ಥೆ, ಗ್ರಾಮೀಣ ಪಂಚಾಯತ್ ರಾಜ್ ಇಲಾಖೆ ಜಿ.ಪಂ., ತಾ.ಪಂ. ಹಾಗೂ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ಸಂಜೀವಿನಿ ಸಂತೆ ಮೇಳವನ್ನು ಕರ್ನಾಟಕ ಬ್ಯಾಂಕ್ ಆವರಣದಲ್ಲಿ ಆಯೋಜಿಸಲಾಗಿತ್ತು.
ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ ಅವರು ಸಂತೆ ಮೇಳವನ್ನು ಉದ್ಘಾಟಿಸಿದರು.
ಸಮಾರಂಭವನ್ನು ಉದ್ದೇಶಿಸಿ ಗ್ರಾ.ಪಂ. ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಮಾತನಾಡಿ, ಪುರುಷರು ಯಾವುದೇ ಹುದ್ದೆ ಮತ್ತು ಎಷ್ಟೇ ಹಣಗಳಿಸಿದ್ದರೂ ಸಂಸಾರವನ್ನು ಮುನ್ನಡೆಸುವುದು ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಇಂದಿನ ಮಹಿಳೆಯರು ವ್ಯವಹಾರಿಕವಾಗಿಯೂ ಮುಂದುವರೆ ಯಲು ಮಹಿಳಾ ಸ್ತಿçÃಶಕ್ತಿ ಸ್ವಸಹಾಯ ಸಂಘಗಳು ತರಬೇತಿಯೊಂದಿಗೆ ಪ್ರೋತ್ಸಾಹ ಧನ, ಸಾಲ ಸೌಲಭ್ಯಗಳನ್ನು ನೀಡಿ ಉತ್ತೇಜಿಸುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಮುನ್ನಡೆಯಾಗಬೇಕೆಂದು ಕರೆ ನೀಡಿದರು.
ಸಂಜೀವಿನಿ ಸಂಘದ ಅಧ್ಯಕ್ಷೆ ಗ್ರೇಸಿ ಡೇವಿಡ್ ಅಧ್ಯಕ್ಷತೆಯನ್ನು ವಹಿಸಿದ್ದರು. ಗ್ರಾ. ಪಂ. ಸದಸ್ಯರುಗಳಾದ ಪಿ.ಆರ್. ಸುನಿಲ್ ಕುಮಾರ್, ರಫೀಕ್ ಖಾನ್, ಆಲಿಕುಟ್ಟಿ, ಶಬ್ಬೀರ್, ವಸಂತಿ, ರೇಷ್ಮಾ, ಶಾಂತಿ, ಮಂಜುಳಾ, ಹಸೀನಾ ಸಂಜೀವಿನಿ ಸಂಘದ ಉಪಾಧ್ಯಕ್ಷೆ ರೋಸ್ಮೇರಿ ರಾಡ್ರಿಗಸ್, ಸ್ತಿçÃಶಕ್ತಿ, ಸಂಘದ ರಾಜ್ಯ ಒಕ್ಕೂಟದ ಅಧ್ಯಕ್ಷೆ ರಹೆನಾ ಪೈರೋಜ್ ಮತ್ತಿತರರು ಇದ್ದರು.
ಸುಂಟಿಕೊಪ್ಪ ಗ್ರಾ.ಪಂ. ಹಾಗೂ ಹೋಬಳಿಯ ವ್ಯಾಪ್ತಿಯ ಸ್ತಿçÃಶಕ್ತಿ, ಸ್ವಸಹಾಯ ಸಂಘದ ಮಹಿಳಾ ಸದಸ್ಯರುಗಳು ಅಲಂಕಾರಿಕ ವಸ್ತುಗಳು, ತಿಂಡಿ ತಿನ್ನಿಸು, ಕೊಬ್ಬರಿ, ಎಣ್ಣೆ, ಬಟ್ಟೆ, ಬಳೆ, ತರಕಾರಿ, ವೈನ್ಗಳನ್ನು ಮಾರಾಟಕ್ಕೆ ಇಟ್ಟಿದ್ದರು. ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಬಂದು ವ್ಯಾಪಾರ ವಹಿವಾಟು ನಡೆಸಿದರು.
ಸುಂಟಿಕೊಪ್ಪದ ಪಂಪ್ಹೌಸ್ನ ಶಿವಕ್ತಿ ಸ್ವಸಹಾಯ ಸಂಘ, ದೀಪಾನಗರ ಸ್ತಿçÃಶಕ್ತಿ ಸಂಘ, ದೇವಿಕಾ ಸ್ವಸಹಾಯ ಸಂಘ, ಮಧುರಮ್ಮ ಬಡಾವಣೆ ನಿಸರ್ಗ ಸ್ತಿçÃಶಕ್ತಿ ಸಂಘ, ಮಾರುತಿ ನಗರ ಕೊಡಗರಹಳ್ಳಿ ಬೆಳಕು ಸ್ವಸಹಾಯ ಸಂಘ, ಸುಂಟಿಕೊಪ್ಪ ಸೂರ್ಯ ಸ್ತಿçÃಶಕ್ತಿ ಸಂಘ, ಮಧುರಮ್ಮ ಬಡಾವಣೆ ಸುವರ್ಣ ಸ್ತಿçÃಶಕ್ತಿ ಸಂಘ, ಸುಂಟಿಕೊಪ್ಪ ೧ ನೇ ವಿಭಾಗದ ಭೂಮಿಕ ಸ್ತಿçÃಶಕ್ತಿ ಗುಂಪು, ಸುಂಟಿಕೊಪ್ಪ ಸಂಜೀವಿನಿ, ನಾಕೂರು ಗ್ರಾಮ ಪಂಚಾಯಿತಿ ಒಕ್ಕೂಟದ ಮಹಿಳೆ ಸದಸ್ಯರುಗಳು ಭಾಗವಹಿಸಿದ್ದರು.