ಕುಶಾಲನಗರ, ಫೆ. ೯: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಸುಂದರ ನಗರದಲ್ಲಿ ರೂ. ೨.೨೫ ಲಕ್ಷ ವೆಚ್ಚದ ರಸ್ತೆ ಮೆಟ್ಲಿಂಗ್ ಕಾಮಗಾರಿ ನಡೆಯುತ್ತಿದೆ.

ಜಿಲ್ಲಾ ಪಂಚಾಯಿತಿ ರೂ. ೨.೨೫ ಲಕ್ಷ ಅನುದಾನದಡಿ ಸುಂದರ ನಗರದ ಕೋರೆ ರಸ್ತೆಯಲ್ಲಿ ಸುಮಾರು ೧೮೫ ಮೀಟರ್ ಉದ್ದದ ಕಾಮಗಾರಿಯನ್ನು ಪಂಚಾಯಿತಿ ಸದಸ್ಯ ಕೆ.ಬಿ. ಷಂಶುದ್ದೀನ್ ಪರಿಶೀಲನೆ ನಡೆಸಿದರು.

ಈ ಸಂದರ್ಭ ಮಾಹಿತಿ ನೀಡಿದ ಗ್ರಾಮ ಪಂಚಾಯಿತಿ ಸದಸ್ಯ ಕೆ.ಬಿ. ಷಂಶುದ್ದೀನ್, ಸುಂದರನಗರದಲ್ಲಿ ಜಿ.ಪಂ. ಅನುದಾನದಡಿ ರೂ. ೨.೨೫ ಲಕ್ಷದ ಮೆಟ್ಲಿಂಗ್ ಕಾಮಗಾರಿಯೊಂದಿಗೆ ಸುಂದರನಗರದ ಸಮುದಾಯ ಭವನ ಅಭಿವೃದ್ಧಿಪಡಿಸಲಾಗಿದೆ. ಸರ್ಕಲ್‌ಗೆ ಹೈಮಾಸ್ಟ್ ಲೈಟ್ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಅಮೃತ ಗ್ರಾಮ ಯೋಜನೆಯ ಅನುದಾನದಲ್ಲಿ ಸ್ಮಶಾನ ಅಭಿವೃದ್ಧಿ ಪಡಿಸಲಾಗುವುದು ಎಂದರು.