ಮಡಿಕೇರಿ, ಫೆ. ೯: ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಅರಣ್ಯ ಇಲಾಖೆ ಪತ್ತೆ ಹಚ್ಚಿ ವಾಹನ, ಶ್ರೀಗಂಧವನ್ನು ವಶಪಡಿಸಿಕೊಂಡಿದ್ದು, ಆರೋಪಿ ಪರಾರಿಯಾಗಿದ್ದಾನೆ.

ಮೇಕೇರಿಯಲ್ಲಿ ಆಲ್ಟೋ ಕಾರಿನಲ್ಲಿ (ಕೆಎ-೫೦ ಎಂ-೨೨೯೭) ಶ್ರೀಗಂಧದ ತುಂಡು ಸಾಗಿಸುತ್ತಿದ್ದ ಸಂದರ್ಭ ದಾಳಿ ಮಾಡಿ ಕಾರು ಹಾಗೂ ಶ್ರೀಗಂಧದ ತುಂಡುಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಆರೋಪಿ ಅರ್ವತ್ತೋಕ್ಲುವಿನ ಚೆರಿಯಮನೆ ಗಿರೀಶ್ ಎಂಬಾತ ಪರಾರಿಯಾಗಿದ್ದಾನೆ.

ಡಿಸಿಎಫ್ ಎ.ಟಿ. ಪೂವಯ್ಯ ಮಾರ್ಗದರ್ಶನದಲ್ಲಿ ಎಸಿಎಫ್ ಮೋಷಿನ್ ಬಾಷಾ ನೇತೃತ್ವದಲ್ಲಿ ಮಡಿಕೇರಿ ವಲಯದ ಆರ್‌ಎಫ್‌ಓ ಹನುಮಂತ ರಾಜು, ಡಿಆರ್‌ಎಫ್‌ಓಗಳಾದ ಬಾಬು ರಾಥೋಡ್, ಮಲ್ಲಯ್ಯ ಹಿರೇಮಠ, ಗಸ್ತು ಅರಣ್ಯ ಪಾಲಕರಾದ ಭವ್ಯ ಯತೀಶ್, ಅರಣ್ಯ ವೀಕ್ಷಕ ವಾಸುದೇವ, ವಾಹನ ಚಾಲಕರಾದ ಸಂಜು, ಮೋಹನ್, ಕುಶ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.