ಮುಳ್ಳೂರು, ಫೆ. ೯: ಮನುಷ್ಯ ಸಾರ್ಥಕತೆಯ ಜೀವನ ಸಾಗಿಸಬೇಕೆಂದರೆ ಮತ್ತೊಬ್ಬರ ಹಿತ ಬಯಸಬೇಕು ಎಂದು ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್ ಅಭಿಪ್ರಾಯಪಟ್ಟರು. ಸಮೀಪದ ಬೆಸೂರು ನ್ಯಾಯದಹಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬೆಸೂರು ಕ್ಲಸ್ಟರ್ ವತಿಯಿಂದ ೨೦೨೨-೨೩ನೇ ರಾಷ್ಟಿçÃಯ ಶೌರ್ಯ ಪ್ರಶಸ್ತಿ ವಿಜೇತ ಕೂಡ್ಲೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ೪ನೇ ತರಗತಿ ವಿದ್ಯಾರ್ಥಿ ದೀಕ್ಷಿತ್ಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಧಿಕಾರ, ಆಸ್ತಿ ಅಂತಸ್ತು, ಶ್ರೀಮಂತಿಕೆ ಯಾವುದು ಮುಖ್ಯವಾಗುವುದಿಲ್ಲ. ಅಸೂಯೆ, ಸ್ವಾರ್ಥ ಇಲ್ಲದೆ ಮತ್ತು ಶಾಂತಿ ಸಹಬಾಳ್ವೆ ಜೀವನದಿಂದ ಸಾರ್ಥಕತೆಯನ್ನು ಕಾಣಬಹುದು. ವಿದ್ಯಾರ್ಥಿ ದೀಕ್ಷಿತ್ರ ಧೆೆÊರ್ಯ, ಮುಂದಾಲೋಚನೆ ಮುಂತಾದ ಪ್ರಬುದ್ಧತೆಯನ್ನು ನಾವೆಲ್ಲರೂ ಮೆಚ್ಚಬೇಕು. ಇತರೆ ವಿದ್ಯಾರ್ಥಿಗಳು ಈತನನ್ನು ಮಾದರಿಯಾಗಿ ತೆಗೆದುಕೊಳ್ಳುವಂತೆ ಸಲಹೆ ನೀಡಿದರು.
ಬೆಸೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಜಾನ್ಪಾಲ್ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿ, ಕೂಡ್ಲೂರು ಶಾಲೆಯ ಧೀರ ಬಾಲಕ ದೀಕ್ಷಿತ್ ರಾಷ್ಟಿçÃಯ ಶೌರ್ಯ ಪ್ರಶಸ್ತಿಗೆ ಬಾಜನರಾಗಿರುವುದು ಶಿಕ್ಷಣ ಇಲಾಖೆ, ವಿದ್ಯಾರ್ಥಿ ಸಮೂಹ ಹೆಮ್ಮೆ ಪಡುವ ವಿಷಯವಾಗಿದೆ ಎಂದರು.
ನ್ಯಾಯದಹಳ್ಳ ಶಾಲೆಯ ಎಸ್ಡಿಎಂಸಿ ಅಧ್ಯಕ್ಷೆ ಮಂಜುಳ ಅಧ್ಯಕ್ಷತೆ ವಹಿಸಿದ ಸಮಾರಂಭದಲ್ಲಿ ವಿವಿಧ ಶಾಲೆಯ ಶಿಕ್ಷಕರು, ಸಿಆರ್ಪಿಗಳು ಹಾಜರಿದ್ದರು. ಈ ಸಂದರ್ಭ ಕೂಡ್ಲೂರು ಶಾಲೆಯ ಶಿಕ್ಷಕಿ ಸ್ನೇಹ ಬಸಮ್ಮ, ರಾಧ, ರುಕ್ಮಿಣಿ ಅವರುಗಳನ್ನು ಸನ್ಮಾನಿಸಲಾಯಿತು. ಬೆಸೂರು ವೃತ್ತದಿಂದ ದೀಕ್ಷಿತ್ ಪೋಷಕರೊಂದಿಗೆ ತೆರೆದ ವಾಹನದಲ್ಲಿ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮೂಲಕ ಪೂರ್ಣಕುಂಭ, ವಾದ್ಯಗೋಷ್ಠಿ ಸ್ವಾಗತದೊಂದಿಗೆ ವೇದಿಕೆಗೆ ಕರೆತರಲಾಯಿತು.