ಮಡಿಕೇರಿ, ಫೆ. ೯: ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ವೀರಾಜಪೇಟೆ ಕ್ಷೇತ್ರಕ್ಕೆ ಸಂಬAಧಿಸಿದAತೆ ಹಲವು ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಈ ಕ್ಷೇತ್ರದ ವಿಚಾರ ಇದೀಗ ಕುತೂಹಲಭರಿತವಾಗಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಪ್ರಬಲ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ಅವರಿಗೆ ಟಿಕೆಟ್ ಅಂತಿಮವಾದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾಗಿರುವ, ರಾಜ್ಯ ಜೆಡಿಎಸ್‌ನ ವಕ್ತಾರರೂ ಆಗಿರುವ ಸಂಕೇತ್ ಪೂವಯ್ಯ ಅವರು ಪೊನ್ನಣ್ಣ ಅವರ ಪರವಾಗಿ ನಿಲ್ಲಲಿದ್ದಾರೆ ಎಂಬ ಅಂತೆ-ಕAತೆಗಳು ಕೇಳಿ ಬರುತ್ತಿವೆ. ಈ ಬಗ್ಗೆ ‘ಶಕ್ತಿ’ ನೇರವಾಗಿ ಸಂಕೇತ್ ಪೂವಯ್ಯ ಅವರ ಅಭಿಪ್ರಾಯ ಬಯಸಿದಾಗ ಅವರು ನೀಡಿರುವ ಹೇಳಿಕೆ ಮತ್ತೂ ಕುತೂಹಲಕಾರಿಯಾಗಿದೆ.

ಈ ವಿಚಾರಕ್ಕೆ ಸಂಬAಧಿಸಿದAತೆ ಜೆಡಿಎಸ್‌ನ ನಾಯಕರಾಗಿರುವ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ತಾವು ಸಮಾಲೋಚನೆ ನಡೆಸಲಿದ್ದು, ಅವರ ಆದೇಶದ ಪ್ರಕಾರ ತೀರ್ಮಾನ ಕೈಗೊಳ್ಳಲಿರುವುದಾಗಿ ಸಂಕೇತ್ ತಿಳಿಸಿದ್ದಾರೆ.

ತಾವು ಜೆಡಿಎಸ್‌ನ ವಕ್ತಾರರಾಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾಗಿದೆ ಎಂದ ಅವರು, ತಮ್ಮ ಅಭಿಪ್ರಾಯದಂತೆ ಕೊಡಗಿನಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದಲ್ಲಿ ಇಲ್ಲಿ ತ್ರಿಕೋನ ಸ್ಪರ್ಧೆಯೊಂದಿಗೆ ಗೆಲುವಿನ ಸಾಧ್ಯತೆ ಇದೆ. ಆದರೆ ವೀರಾಜಪೇಟೆ ಕ್ಷೇತ್ರಕ್ಕೆ ಬಂದಾಗ ಇಲ್ಲಿ ಜೆಡಿಎಸ್ ಪಕ್ಷ ಹಲವು ಕೊಡುಗೆಗಳನ್ನು ನೀಡಿರುವುದು ನಿಜವೇ ಆಗಿದ್ದರೂ, ಪಕ್ಷದ ಪರವಾಗಿ ಮತಗಳು ಕಡಿಮೆಯಿದೆ. ಹೆಚ್ಚಿನ ಒಲವು ಜನವಲಯದಲ್ಲಿ ವ್ಯಕ್ತಗೊಳ್ಳುತ್ತಿಲ್ಲ. ಈಗಿನ ಪರಿಸ್ಥಿತಿಯಲ್ಲಿ ವೀರಾಜಪೇಟೆಯಲ್ಲಿ ಸ್ಪರ್ಧೆಯಿರುವುದು ಬಿಜೆಪಿ ಹಾಗೂ ಕಾಂಗ್ರೆಸ್‌ನ ನಡುವೆ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದರು.

ಈತನಕದ ಅಧಿಕಾರಾವಧಿಯನ್ನು ಅವಲೋಕಿಸಿದಾಗ ಹಾಲಿ ಶಾಸಕರು, ಸಂಸದರ ಕೆಲಸದ ಬಗ್ಗೆ ಜನತೆಯಲ್ಲಿ ಸದಭಿಪ್ರಾಯ ಇಲ್ಲ. ಬದಲಿಗೆ ಭ್ರಮನಿರಸನರಾಗಿದ್ದಾರೆ. ಸಕ್ರಿಯವಾಗಿ ಕೆಲಸ ನಿರ್ವಹಿಸುವ, ಸದನದಲ್ಲಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಪ್ರಬಲ ರೀತಿಯಲ್ಲಿ ಪ್ರಶ್ನಿಸುವ ಶಾಸಕರು ಬೇಕೆಂಬ ಅಭಿಪ್ರಾಯ ಇದೆ. ಎ.ಎಸ್. ಪೊನ್ನಣ್ಣ ಅವರಲ್ಲಿ ಇಂತಹ ವ್ಯಕ್ತಿತ್ವ ಇದ್ದು, ಇವರ ಬಗ್ಗೆ ಪ್ರಸ್ತುತ ನಿರೀಕ್ಷೆ ಇದೆ. ಇದರೊಂದಿಗೆ ಹಲವಾರು ವರ್ಷಗಳ ಕಾಲ ವೀರಾಜಪೇಟೆ ಮೀಸಲು ಕ್ಷೇತ್ರವಾಗಿದ್ದು, ೨೦೦೮ರಲ್ಲಿ ಸಾಮಾನ್ಯ ಕ್ಷೇತ್ರವಾಗಿದೆ. ಈ ಹಾಲಿ ಶಾಸಕರು ನಾಲ್ಕು ಬಾರಿ ಜಯಗಳಿಸಿದ್ದಾರೆ. ಅವರು ಮೊದಲು ಜಯಗಳಿಸಿದಾಗ ಮಡಿಕೇರಿ ಪ್ರತ್ಯೇಕ ಕ್ಷೇತ್ರವಾಗಿತ್ತು. ನಂತರದಲ್ಲಿ ಈ ತಾಲೂಕಿನ ಹಲವುಭಾಗಗಳು ವೀರಾಜಪೇಟೆಗೆ ಸೇರಿವೆ. ಆದರೆ ಬಳಿಕ ವೀರಾಜಪೇಟೆ ಕ್ಷೇತ್ರವಾದರೂ ಅಲ್ಲಿನ ಮೂಲ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿವೆ ಎಂದಿದ್ದಾರೆ.

ಕಾಫಿ ಬೆಳೆಗಾರರ ವಿಚಾರ, ವನ್ಯಜೀವಿ ಸಂಘರ್ಷ ಸೇರಿದಂತೆ ಮೂಲಭೂತ ಸಮಸ್ಯೆಗಳು ಪರಿಹಾರವನ್ನೇ ಕಾಣುತ್ತಿಲ್ಲ. ಇದರೊಂದಿಗೆ ಈ ಕ್ಷೇತ್ರದಲ್ಲಿ ಜಾತ್ಯತೀತ ಮತಗಳು ವಿಭಜನೆಯಾಗಬಾರದು ಎಂಬುದು ತಮ್ಮ ಚಿಂತನೆಯಾಗಿದೆ. ಈ ಎಲ್ಲಾ ವಿಚಾರದ ಬಗ್ಗೆ ಹೆಚ್.ಡಿ. ಕುಮಾರಸ್ವಾಮಿ ಅವರ ಗಮನಕ್ಕೆ ತಂದು ಅವರ ಅಭಿಪ್ರಾಯದಂತೆ ಮುಂದುವರಿಯಲಿರುವುದಾಗಿ ಸಂಕೇತ್ ಪೂವಯ್ಯ ಅವರು ತಿಳಿಸಿದ್ದಾರೆ.

ಬಹುತೇಕ ಇವರು ಈ ಕ್ಷೇತ್ರದಲ್ಲಿ ಎ.ಎಸ್. ಪೊನ್ನಣ್ಣ ಅವರನ್ನು ಬೆಂಬಲಿಸುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಈ ಬಗ್ಗೆ ಖಚಿತವಾಗಿ ಸಂಕೇತ್ ಪೂವಯ್ಯ ಹೇಳಿಕೆ ನೀಡದಿದ್ದರೂ, ಹೆಚ್.ಡಿ. ಕುಮಾರಸ್ವಾಮಿ ಅವರ ಜತೆ ಚರ್ಚಿಸಿ ತೀರ್ಮಾನಕ್ಕೆ ಬರುವುದಾಗಿ ಹೇಳಿರುವುದು ಇದನ್ನು ಪುಷ್ಟೀಕರಿಸು ವಂತಿದ್ದು, ಮುಂದಿನ ರಾಜಕೀಯ ನಡೆಯನ್ನು ಕಾದು ನೋಡಬೇಕಿದೆ.